Friday, November 22, 2024
Homeರಾಷ್ಟ್ರೀಯ | Nationalಇಂದು ಮುಂಜಾನೆ ಎರಡು ಬಾರಿ ಕಂಪಿಸಿದ ಅರುಣಾಚಲ

ಇಂದು ಮುಂಜಾನೆ ಎರಡು ಬಾರಿ ಕಂಪಿಸಿದ ಅರುಣಾಚಲ

ದಪಶ್ಚಿಮ ಕಮೆಂಗ್,ಮಾ.21- ಅರುಣಾಚಲ ಪ್ರದೇಶದಲ್ಲಿ ಇಂದು ಮುಂಜಾನೆ ಎರಡು ಭೂಕಂಪಗಳು ವರದಿಯಾಗಿವೆ ಎಂದು ಭೂಕಂಪಶಾಸದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.3.7 ರ ತೀವ್ರತೆಯೊಂದಿಗೆ ಮೊದಲ ಭೂಕಂಪವು 01:49 ಕ್ಕೆ ಸಂಭವಿಸಿದೆ.

ಭೂಕಂಪದ ಕೇಂದ್ರವು ಅಕ್ಷಾಂಶ 27.38 ಮತ್ತು ರೇಖಾಂಶ 92.77 ರಲ್ಲಿ 10 ಕಿಲೋಮೀಟರ್ ಆಳದಲ್ಲಿದೆ. ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ನಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು. ಮೊದಲ ಕಂಪನವಾದ ಕೇವಲ ಎರಡು ಗಂಟೆಗಳ ನಂತರ ಮತ್ತೆ 03:40 ಕ್ಕೆ ಎರಡನೇ ಭೂಕಂಪನ ವರದಿಯಾಗಿದೆ.

ಈ ಭೂಕಂಪವು 3.4 ರ ತೀವ್ರತೆಯನ್ನು ಹೊಂದಿದ್ದು, ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್ನಲ್ಲಿ ಕೇಂದ್ರೀಕೃತವಾಗಿತ್ತು. ಭೂಕಂಪದ ಕೇಂದ್ರವು 5 ಕಿಲೋಮೀಟರ್ ಆಳದೊಂದಿಗೆ ಅಕ್ಷಾಂಶ 27.46 ಮತ್ತು ರೇಖಾಂಶ 92.82 ನಲ್ಲಿತ್ತು ಎಂದು ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ ಎಕ್ಸ್ ಮಾಡಿದೆ.

RELATED ARTICLES

Latest News