Homeರಾಜ್ಯರಸ್ತೆ ಬದಿಯ ಹೋಟೆಲ್‌ನಲ್ಲಿ ರಾಗಿಮುದ್ದೆ-ಉಪ್ಸಾರು ಸವಿದ ಸಂಸದ ಡಾ.ಸಿ.ಎನ್.ಮಂಜುನಾಥ್

ರಸ್ತೆ ಬದಿಯ ಹೋಟೆಲ್‌ನಲ್ಲಿ ರಾಗಿಮುದ್ದೆ-ಉಪ್ಸಾರು ಸವಿದ ಸಂಸದ ಡಾ.ಸಿ.ಎನ್.ಮಂಜುನಾಥ್

ಚನ್ನಪಟ್ಟಣ, ಸೆ.8- ಕ್ಷೇತ್ರ ಪ್ರವಾಸದ ಸಂದರ್ಭದಲ್ಲಿ ಸಂಸದ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ಅವರು ಚನ್ನಪಟ್ಟಣದ ಸಾತನೂರು ಮಾರ್ಗದಲ್ಲಿರುವ ಧಶ್ವಿಕ್‌ಗೌಡ ಫುಲ್‌ಮೀಲ್ಸ್‌ ಹೋಟೆಲ್‌ಗೆ ಭೇಟಿ ನೀಡಿ ರಾಗಿಮುದ್ದೆ–ಉಪ್ಸಾರು ಸೇರಿದಂತೆ ಸಾಂಪ್ರದಾಯಿಕ ಊಟ ಸವಿದರು.

ಹೋಟೆಲ್‌ನ ಸ್ವಚ್ಛತೆ, ಶುಚಿತ್ವ ಹಾಗೂ ಅಚ್ಚುಕಟ್ಟಾದ ನಿರ್ವಹಣೆಯನ್ನು ಮೆಚ್ಚಿದ ಸಂಸದರು, ಬಿಸಿ ಬಿಸಿ ರಾಗಿಮುದ್ದೆ, ಸೊಪ್ಪು, ಕಾಳು ಸೇರಿದಂತೆ ಸರಳವಾದ ಸಾಂಪ್ರದಾಯಿಕ ಆಹಾರ ಆರೋಗ್ಯಕ್ಕೆ ಉತ್ತಮವಾಗಿದೆ ಎಂದು ಹೇಳಿದರು.

ಸ್ವಚ್ಛತೆ ಮತ್ತು ಶುಚಿತ್ವವನ್ನು ಕಾಪಾಡಿಕೊಂಡು ಗುಣಮಟ್ಟದ ಆಹಾರ ನೀಡುತ್ತಿರುವುದು ಶ್ಲಾಘನೀಯ. ಇಲ್ಲಿ ಊಟ ಮಾಡಿದರೆ ಮತ್ತೊಮ್ಮೆ ಬಂದು ಊಟ ಮಾಡಬೇಕೆನಿಸುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇವಲ ₹60ಕ್ಕೆ ಫುಲ್‌ಮೀಲ್ಸ್‌

ಫುಲ್‌ಮೀಲ್ಸ್‌ ಕೇವಲ 60 ರೂ.ಗೆ ದೊರೆಯುತ್ತದೆ ಎಂದು ತಿಳಿದ ಸಂಸದರು ಅಚ್ಚರಿ ವ್ಯಕ್ತಪಡಿಸಿದರು. ಇಷ್ಟು ಕಡಿಮೆ ದರದಲ್ಲಿ ಗುಣಮಟ್ಟದ ಹಾಗೂ ರುಚಿಕರವಾದ ಊಟ ನೀಡುತ್ತಿರುವುದು ವಿಶೇಷ ಎಂದು ಅವರು ಹೋಟೆಲ್‌ ಮಾಲೀಕರು ಹಾಗೂ ಸಿಬ್ಬಂದಿಯವರನ್ನು ಅಭಿನಂದಿಸಿದರು.

ಗ್ರಾಹಕರಿಗೆ ಉತ್ತಮ ಆಹಾರ ಒದಗಿಸುವ ನಿಟ್ಟಿನಲ್ಲಿ ಹೋಟೆಲ್‌ ಮಾಲೀಕರು ಹಾಗೂ ಸಿಬ್ಬಂದಿ ತೋರುತ್ತಿರುವ ಪರಿಶ್ರಮ ಮತ್ತು ಸೇವಾ ಮನೋಭಾವವನ್ನು ಸಂಸದರು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಆನಂದ್ ಸ್ವಾಮಿ, ಚನ್ನಪಟ್ಟಣ ಬಿಜೆಪಿ ಅಧ್ಯಕ್ಷ ಶ್ವೇತ ಚೇತನ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ಊಟ ಸವಿದರು.

RELATED ARTICLES
spot_img

Latest News