Homeಬೆಂಗಳೂರುಬೆಂಗಳೂರಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು,ಸೆ.8- ಎಂಜಿನಿಯರಿಂಗ್‌ ವಿದ್ಯಾರ್ಥಿ ಆತಹತ್ಯೆ ಮಾಡಿಕೊಂಡಿರುವ ಘಟನೆ ಸುಬ್ರಹಣ್ಯಪುರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಸಂತ ವಲ್ಲಭ ನಗರದ ಮೂರನೇ ಮುಖ್ಯರಸ್ತೆ ನಿವಾಸಿ ವೇದಾಂತ್‌ (20) ಆತಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಈತ ಚನ್ನಸಂದ್ರದ ಜೆಎಸ್‌‍ಎಸ್‌‍ ಕಾಲೇಜಿನಲ್ಲಿ ಮೂರನೇ ವರ್ಷದ ಬಿ ಇ ವ್ಯಾಸಂಗ ಮಾಡುತ್ತಿದ್ದ. ರಿಯಲ್‌ ಎಸ್ಟೇಟ್‌ ಕೆಲಸ ಮಾಡಿಕೊಂಡಿರುವ ಶಿವಕುಮಾರ್‌ ಎಂಬುವವರ ಎರಡನೇ ಮಗನಾದ ವೇದಾಂತ್‌ ತನ್ನ ಚಿಕ್ಕಪ್ಪನ ಮಗ ವಿಫುಲ್‌ಗೌಡ ಒಂದೇ ಕಾಲೇಜಿನಲ್ಲಿ ಓದುತ್ತಿದ್ದು, ಒಂದು ತಿಂಗಳಿನಿಂದ ಕಾಲೇಜಿಗೆ ರಜೆ ಇದ್ದುದರಿಂದ ಮನೆಯಲ್ಲಿಯೇ ಇದ್ದರು.

ಸೆ.6ರಂದು ರಾತ್ರಿ ಎಂದಿನಂತೆ ಊಟ ಮಾಡಿ ಇವರಿಬ್ಬರೂ ಮೊದಲ ಮಹಡಿಯಲ್ಲಿ ಕುಳಿತುಕೊಂಡು ಮಾತನಾಡಿಕೊಂಡು ಮಲಗಿದ್ದಾರೆ. ಬೆಳಗಾಗುವಷ್ಟರಲ್ಲಿ ವೇದಾಂತ್‌ ಎರಡನೇ ಮಹಡಿಯಲ್ಲಿರುವ ರೂಂಗೆ ಹೋಗಿ ಫ್ಯಾನಿನ ಹುಕ್‌ಗೆ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾನೆ. ಬೆಳಗ್ಗೆ ಎದ್ದಾಗ ವೇದಾಂತ್‌ ಇಲ್ಲದಿರುವುದನ್ನು ಗಮನಿಸಿ ವಿಫುಲ್‌ಗೌಡ ಎಲ್ಲಾ ಕಡೆ ಹುಡುಕಾಡಿ ಫೋನ್‌ ಮಾಡಿದ್ದಾರೆ.

ಫೋನ್‌ ಕರೆ ಸ್ವೀಕರಿಸದಿದ್ದಾಗ ತಕ್ಷಣ ಮನೆಯವರಿಗೆ ತಿಳಿಸಿದ್ದಾರೆ. ಶಿವಕುಮಾರ್‌ರವರು ಮನೆಯ ಎಲ್ಲಾ ಕಡೆ ಹುಡುಕಾಡಿ ನಂತರ ಎರಡನೇ ಮಹಡಿಯ ರೂಂ ಬಳಿ ಹೋಗಿ ನೋಡಿದಾಗ ಒಳಗಿನಿಂದ ಲಾಕ್‌ ಆಗಿರುವುದು ಕಂಡುಬಂದಿದೆ. ತಕ್ಷಣ ಗಾಬರಿಯಾಗಿ ಕಿಟಕಿ ಮೂಲಕ ನೋಡಿದಾಗ ವೇದಾಂತ್‌ ನೇಣು ಹಾಕಿಕೊಂಡಿರುವುದನ್ನು ಗಮನಿಸಿ ತಕ್ಷಣ ಬಾಗಿಲು ಒಡೆದು ಒಳಗೆ ಹೋಗಿ ಕುಣಿಕೆಯಿಂದ ಕೆಳಗಿಳಿಸಿ ನೋಡಿದಾಗ ಆತ ಮೃತಪಟ್ಟಿರುವುದು ಗೊತ್ತಾಗಿದೆ.

ಈ ಬಗ್ಗೆ ವೇದಾಂತ್‌ ತಂದೆ ಶಿವಕುಮಾರ್‌ರವರು ಪೊಲೀಸರಿಗೆ ದೂರು ನೀಡಿದ್ದು, ಆತಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಯಾವುದೋ ವಿಚಾರಕ್ಕೆ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಆತಹತ್ಯೆ ಮಾಡಿಕೊಂಡಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES
spot_img

Latest News