Homeಅಂತಾರಾಷ್ಟ್ರೀಯವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ರಷ್ಯಾ ಬೆಂಬಲ

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ರಷ್ಯಾ ಬೆಂಬಲ

ವಿಶ್ವಸಂಸ್ಥೆ, ಸೆ.27- ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಭಾರತಕ್ಕೆ ಖಾಯಂ ಸದಸ್ಯತ್ವ ನೀಡುವ ತನ್ನ ಬೆಂಬಲವನ್ನು ರಷ್ಯಾ ಮತ್ತೊಮ್ಮೆ ವ್ಯಕ್ತಪಡಿಸಿದೆ.ಆದರೆ, ಭದ್ರತಾ ಮಂಡಳಿಯ ವಿಸ್ತರಣೆಯಲ್ಲಿ ಮತ್ತಷ್ಟು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಖಾಯಂ ಸ್ಥಾನ ನೀಡುವುದನ್ನು ಬೆಂಬಲಿಸುವುದಿಲ್ಲ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್‌ ಹೇಳಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಲಾವ್ರೊವ್‌, ಭದ್ರತಾ ಮಂಡಳಿಯ ಸುಧಾರಣೆ ವೇಳೆ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್‌ ಅಮೆರಿಕದ ರಾಷ್ಟ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.

ಭದ್ರತಾ ಮಂಡಳಿ ಸುಧಾರಣೆಯಲ್ಲಿ ಜರ್ಮನಿ ಮತ್ತು ಜಪಾನ್‌ ಸೇರಿದಂತೆ ಹೆಚ್ಚುವರಿ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಖಾಯಂ ಸ್ಥಾನ ನೀಡುವುದನ್ನು ಒಳಗೊಂಡಿರಬಾರದು. ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್‌ ಅಮೆರಿಕದ ಪ್ರಾತಿನಿಧ್ಯವನ್ನು ವಿಸ್ತರಿಸುವ ಪರವಾಗಿದ್ದೇವೆ. ಭಾರತ ಮತ್ತು ಬ್ರೆಜಿಲ್‌ನ ಖಾಯಂ ಸದಸ್ಯತ್ವದ ಉಮೇದುವಾರಿಕೆಯನ್ನು ನಾವು ಬೆಂಬಲಿಸುತ್ತೇವೆ ಎಂದು ಲಾವ್ರೊವ್‌ ಹೇಳಿದರು.

ಜಾಗತಿಕ ವಾಸ್ತವತೆಗಳಿಗೆ ಅನುಗುಣವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ದೀರ್ಘಕಾಲದಿಂದ ಬಾಕಿ ಇರುವ ಸುಧಾರಣೆಗಳನ್ನು ಕೈಗೊಳ್ಳಬೇಕು ಎಂದು ಭಾರತ ಒತ್ತಾಯಿಸುತ್ತಿದೆ. ರಷ್ಯಾ ಹಲವು ವರ್ಷಗಳಿಂದ ಭಾರತದ ಖಾಯಂ ಸದಸ್ಯತ್ವಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದೆ.

ಇದೇ ವೇಳೆ, ಪೋರ್ಚುಗಲ್‌ ಮತ್ತು ಮಾರಿಷಸ್‌ ಕೂಡ ಭಾರತದ ಉಮೇದುವಾರಿಕೆಗೆ ಬೆಂಬಲ ಸೂಚಿಸಿವೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪೋರ್ಚುಗಲ್‌ ಪ್ರಧಾನಿ ಲೂಯಿಸ್‌ ಮೊಂಟೆನೆಗ್ರೊ ಅವರು ಹೆಚ್ಚು ಪ್ರತಿನಿಧಿತ್ವ ಹೊಂದಿರುವ ಭದ್ರತಾ ಮಂಡಳಿಗೆ ಕರೆ ನೀಡಿ, ಭಾರತಕ್ಕೆ ಖಾಯಂ ಸದಸ್ಯತ್ವ ನೀಡುವ ಪ್ರಸ್ತಾವವನ್ನು ಬೆಂಬಲಿಸಿದರು.

ಮಾರಿಷಸ್‌ ವಿದೇಶಾಂಗ ಸಚಿವ ಧನಂಜಯ್‌ ರಾಮ್‌ಫುಲ್‌ ಕೂಡ ಭಾರತದ ಖಾಯಂ ಸದಸ್ಯತ್ವಕ್ಕೆ ತಮ್ಮ ದೇಶದ ಬೆಂಬಲವನ್ನು ಪುನರುಚ್ಚರಿಸಿದರು. ಜಾಗತಿಕ ವ್ಯವಹಾರಗಳಲ್ಲಿ ಭಾರತದ ರಚನಾತ್ಮಕ ಕೊಡುಗೆಯನ್ನು ಅವರು ಉಲ್ಲೇಖಿಸಿದರು.

RELATED ARTICLES
spot_img

Latest News