Homeರಾಷ್ಟ್ರೀಯಯುವಕನ ತಲೆ ಅರ್ಧ ಬೋಳಿಸಿ ಮರಕ್ಕೆ ಕಟ್ಟಿ ಮೂತ್ರ ಕುಡಿಸಿದ ದುಷ್ಕರ್ಮಿಗಳು

ಯುವಕನ ತಲೆ ಅರ್ಧ ಬೋಳಿಸಿ ಮರಕ್ಕೆ ಕಟ್ಟಿ ಮೂತ್ರ ಕುಡಿಸಿದ ದುಷ್ಕರ್ಮಿಗಳು

ಅಲಿಗಢ, ಸೆ.27- ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ, ತಲೆ ಮತ್ತು ಗಡ್ಡೆಯ ಅರ್ಧ ಭಾಗವನ್ನು ಬೋಳಿಸಿ, ಮರಕ್ಕೆ ಕಟ್ಟಿ ಮೂತ್ರ ಕುಡಿಯುವಂತೆ ಒತ್ತಾಯಿಸಿದ ಆರೋಪದ ಮೇಲೆ ಮೂವರು ಮಹಿಳೆಯರು ಸೇರಿದಂತೆ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅಲಿಗಢದಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಅಕ್ರಾಬಾದ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಹಲ್ಲೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಘಟನೆ ಬೆಳಕಿಗೆ ಬಂದಿದ್ದು, ಸಂತ್ರಸ್ತ ಯುವಕ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.

ಅವಿವಾಹಿತನಾಗಿರುವ ಯುವಕ, ತನ್ನ ಸಹೋದರಿಯ ಅತ್ತೆ-ಮಾವನ ಕುಟುಂಬದ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರ ಕುಟುಂಬದವರಿಗೆ ತಿಳಿದ ಬಳಿಕ ಕೆಲವರು ಆತನನ್ನು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಯುವಕನ ತಲೆ ಮತ್ತು ಗಡ್ಡೆಯ ಅರ್ಧ ಭಾಗವನ್ನು ಬೋಳಿಸಿ ಮರಕ್ಕೆ ಕಟ್ಟಿ, ಬಲವಂತವಾಗಿ ಮೂತ್ರ ಕುಡಿಯುವಂತೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಸಂತ್ರಸ್ತನ ಸಹೋದರಿಯ ಅತ್ತೆ-ಮಾವನ ಕುಟುಂಬದವರು ಎಂದು ಹೇಳಲಾಗಿರುವ ಏಳು ಮಂದಿ ಹಾಗೂ ಗುರುತು ಪತ್ತೆಯಾಗದ ಕೆಲವರ ವಿರುದ್ಧ ಹಲ್ಲೆ ಮತ್ತು ಅಮಾನವೀಯವಾಗಿ ವರ್ತಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
spot_img

Latest News