ಹೋಳಿ ರಂಗಿನಿಂದ ಪಾರಾಗಲು ಮಸೀದಿಗೆ ಹೊದಿಕೆ

ಅಲಿಗಢ,ಮಾ.7- ಪ್ರಾರ್ಥನ ಮಂದಿರದ ಮೇಲೆ ಹೋಳಿ ರಂಗು ಎರಚುವುದನ್ನು ತಡೆಗಟ್ಟುವ ಉದ್ದೇಶದಿಂದ ಮಸೀದಿಯೊಂದರನ್ನು ಟಾರ್ಪಾಲಿನ್‍ನಿಂದ ಮುಚ್ಚಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಹೋಳಿ ಹಬ್ಬದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಆಡಳಿತದ ಸೂಚನೆಯ ಮೇರೆಗೆ, ಅಲಿಘರ್‍ನ ಅತ್ಯಂತ ಸೂಕ್ಷ್ಮ ಪ್ರದೇಶವಾದ ಕ್ರಾಸ್‍ರೋಡ್‍ನಲ್ಲಿರುವ ಅಬ್ದುಲ್ ಕರೀಂ ಮಸೀದಿ ಹಲ್ವಾಯಿಯನ್ ಅನ್ನು ಟಾರ್ಪಾಲಿನ್‍ನಿಂದ ಮುಚ್ಚಲಾಗಿದೆ. ವಿಶೇಷವೆಂದರೆ, ಕಳೆದ ಕೆಲವು ವರ್ಷಗಳ ಹೋಳಿಯಂತೆ, ಸೂಕ್ಷ್ಮ ಪ್ರದೇಶದ ಮಸೀದಿಯನ್ನು ರಾತ್ರಿಯಿಡೀ ಟಾರ್ಪಾಲಿನ್‍ನಿಂದ ಮುಚ್ಚಲಾಯಿತು, ಆದ್ದರಿಂದ ಹೋಳಿ ನಿಮಿತ್ತ ಯಾರೂ ಮಸೀದಿಯ […]

ಎಂತ ಕಾಲ ಬಂತಪ್ಪಾ… ನಾಯಿಗಳಿಗೂ ವಿವಾಹ ಯೋಗ

ಲಕ್ನೋ,ಜ.16- ಹಿಂದೆ ಮಳೆ ಬರಲಿಲ್ಲ ಎಂದರೆ ಕಪ್ಪೆಗಳಿಗೆ ಮದುವೆ ಮಾಡುತ್ತಿದ್ದರು. ಇದೀಗ ನಾಯಿಗಳಿಗೂ ಮದುವೆ ಮಾಡುವ ಕಾಲ ಬಂದಿದೆ. ಉತ್ತರಪ್ರದೇಶದಲ್ಲೋಬ್ಬ ಮಹಾಶಯ ತಮ್ಮ ಮುದ್ದಿನ ಸಾಕು ನಾಯಿಗೆ ಅದ್ಧೂರಿಯಾಗಿ ಮದುವೆ ಮಾಡಿ ದಿಬ್ಬಣದಲ್ಲಿ ಕುಣಿದು ಕುಪ್ಪಳಿಸುವ ಮೂಲಕ ನಾಡಿನ ಗಮನ ಸೆಳೆದಿದ್ದಾರೆ. ಆಲಿಘರ್‍ನಲ್ಲಿ ನೆಲೆಸಿರುವ ದಿನೇಶ್ ಚೌಧರಿ ಎಂಬಾತ ಸಾಕಿದ್ದ ಮುದ್ದಿನ ನಾಯಿಗೆ ರಾಯ್ಪುರದ ನಿವಾಸಿ ರಾಮ್‍ಪ್ರಕಾಶ್ ಸಿಂಗ್ ಅವರ ಹೆಣ್ಣು ನಾಯಿಯೊಂದಿಗೆ ವಿವಾಹ ಮಾಡಿಸಿದ್ದಾರೆ.ಇದೀಗ ಟಾಮಿ ಮತ್ತು ಜೆಲ್ಲಿ ಎಂಬ ನಾಯಿಗಳು ಸತಿ-ಪತಿಗಳಾಗಿ ಸಪ್ತಪದಿ ತುಳಿದಿರುವ […]

ಆಲಿಘರ್‍ನಲ್ಲೂ ಬಿರುಕು ಬಿಟ್ಟ ಮನೆಗಳು

ನವದೆಹಲಿ,ಜ.11-ಉತ್ತರಾಖಂಡದ ಜೋಶಿಮಠದ ಮಾದರಿಯಲ್ಲೇ ಆಲಿಘರ್‍ನಲ್ಲೂ ಮನೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅಲಿಘರ್‍ನ ಕನ್ವರಿಗಂಜ್‍ನಲ್ಲಿರುವ ಐದು ಮನೆಗಳಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಜೋಶಿಮಠದ ಮಾದರಿಯಲ್ಲೇ ನಮ್ಮ ಕೆಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿವೆ. ಇದರಿಂದ ನಾವು ಭಯಭೀತರಾಗಿದ್ದೇವೆ. ಈ ಕುರಿತಂತೆ ನಾವು ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಭೂಗರ್ಭದಲ್ಲಿ ಆಳವಡಿಸಲಾಗುತ್ತಿರುವ ಪೈಪ್‍ಲೈನ್ ಸೋರಿಕೆಯಿಂದಾಗಿ ಮನೆಗಳು ಬಿರುಕು ಬೀಳುತ್ತಿರುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ಅನುಮಾನ […]