ನಿತ್ಯ ನೀತಿ : ಮಳೆ ಬಂದು ನಿಂತ ನಂತರವೇ ಪ್ರಕೃತಿ ಸುಂದರವಾಗಿ ಕಾಣುವುದು. ಹಾಗೆ ಜೀವನದಲ್ಲಿ ಕಷ್ಟಗಳು ಬಂದು ಹೋದ ನಂತರವೇ ಜೀವನ ಸುಂದರವಾಗಿ ಕಾಣುವುದು..!!
ಪಂಚಾಂಗ : ಮಂಗಳವಾರ, 06-10-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಶರದ / ಮಾಸ: ಭಾದ್ರಪದ / ಪಕ್ಷ: ಕೃಷ್ಣ / ತಿಥಿ: ಏಕಾದಶಿ / ನಕ್ಷತ್ರ: ಆಶ್ಲೇಷಾ / ಯೋಗ: ಸಿದ್ಧ / ಕರಣ: ಬವ
ಸೂರ್ಯೋದಯ – ಬೆ.6.10
ಸೂರ್ಯಾಸ್ತ – 06.08
ರಾಹುಕಾಲ – 3.00-4.30
ಯಮಗಂಡ ಕಾಲ – 9.00- 10.30
ಗುಳಿಕ ಕಾಲ – 12.00- 1.30
ರಾಶಿಭವಿಷ್ಯ :
ಮೇಷ: ವೈದ್ಯಕೀಯ ವೆಚ್ಚ ಹೆಚ್ಚಾಗುವುದರಿಂದ ಸಾಲ ಮಾಡಬೇಕಾದ ಸಂದರ್ಭಗಳು ಬರಬಹುದು.
ವೃಷಭ: ಸ್ತ್ರೀಯರಿಗೆ ತವರು ಮನೆಯಿಂದ ಆಸ್ತಿಯಲ್ಲಿ ಭಾಗ ಬರಬಹುದು. ಅವಿವಾಹಿತರಿಗೆ ವಿವಾಹ ಭಾಗ್ಯ.
ಮಿಥುನ: ನಿಮ್ಮ ಮೇಲೆ ಬಾಕಿ ಇರುವ ಕೆಲಸಗಳ ಹೊರೆ ಹೆಚ್ಚಾಗಬಹುದು.
ಕಟಕ: ವಿವಾಹಿತರು ಸಂಗಾತಿಗೆ ನಿಷ್ಠರಾಗಿರಿ.
ಆದಷ್ಟು ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ.
ಸಿಂಹ: ಮುಂದೆ ಯಾವಾ ಗಲೋ ಹಣ ಬರುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡು ಸಾಲ ಮಾಡದಿರಿ.
ಕನ್ಯಾ: ಒಂದೇ ಸಮಯಕ್ಕೆ ನಾನಾ ರೀತಿಯ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.
ತುಲಾ: ಮನೆಯಲ್ಲಿ ಜಗಳಗಳು ಉಂಟಾಗ ಬಹುದು. ಆರ್ಥಿಕ ಪರಿಸ್ಥಿತಿ ಹದಗೆಡಬಹುದು.
ವೃಶ್ಚಿಕ: ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಾ ಸುವುದು ಬಹಳ ಕಷ್ಟವಾಗಲಿದೆ. ಪೋಷಕರು ಮಕ್ಕಳ ವಿಚಾರದಲ್ಲಿ ಹೆಚ್ಚು ಜಾಗ್ರತೆ ವಹಿಸುವುದು ಸೂಕ್ತ.
ಧನುಸ್ಸು: ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವರು. ಇಡೀ ದಿನ ಶುಭವಾಗಿರಲಿದೆ.
ಮಕರ: ಮಕ್ಕಳ ಮೂಲಕ ಹಣ ಬರಲಿದೆ. ತೀರ್ಥಯಾತ್ರೆ, ಪ್ರವಾಸ ತೆರಳುವ ಯೋಗಗಳಿವೆ.
ಕುಂಭ: ನಿಮ್ಮ ಮಾತುಗಳಿಂದ ಕುಟುಂಬದವರು ಮತ್ತು ಹಿತೈಷಿಗಳಿಗೆ ಸಂತೋಷವಾಗಲಿದೆ.
ಮೀನ:ಶಕ್ತಿ ಮತ್ತು ಉತ್ಸಾಹ ತರುವ ಆನಂದಮಯ ಪ್ರವಾಸಕ್ಕೆ ಹೋಗುವಿರಿ.
