Homeರಾಜ್ಯರಾಜ್ಯ ಸರ್ಕಾರವನ್ನು ಪತನಗೊಳಿಸಲು ಯತ್ನಿಸುತ್ತಿದೆ ಕೇಂದ್ರ ಸರ್ಕಾರ : ಪ್ರಿಯಾಂಕ್‌ ಖರ್ಗೆ ಆರೋಪ

ರಾಜ್ಯ ಸರ್ಕಾರವನ್ನು ಪತನಗೊಳಿಸಲು ಯತ್ನಿಸುತ್ತಿದೆ ಕೇಂದ್ರ ಸರ್ಕಾರ : ಪ್ರಿಯಾಂಕ್‌ ಖರ್ಗೆ ಆರೋಪ

ಬೆಂಗಳೂರು,ಅ.8- ರಾಜ್ಯ ಸರ್ಕಾರವನ್ನು ಹೇಗಾದರೂ ಮಾಡಿ ಪತನಗೊಳಿಸಬೇಕು ಎಂಬ ಪ್ರಯತ್ನ ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ ಎಂದು ಗೃಹಸಚಿವ ಪ್ರಿಯಾಂಕ್‌ ಖರ್ಗೆ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಬಂದಿರುವ ಮಾಹಿತಿ ಪ್ರಕಾರ, ಕೇಂದ್ರ ಸರ್ಕಾರ ಹತಾಶೆಗೊಂಡಿದ್ದು, ರಾಜ್ಯಸರ್ಕಾರವನ್ನು ಪತನಗೊಳಿಸಬೇಕು ಎಂಬ ಪ್ರಯತ್ನ ನಡೆಸುತ್ತಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಬಹಳ ಸಕ್ರಿಯವಾಗಿ ಜನರ ಮಧ್ಯೆ ಕೆಲಸ ಮಾಡುತ್ತಿದ್ದರು. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅಸೂಯೆಯಿಂದ ಮಾತನಾಡುತ್ತಿದ್ದಾರೆ ಎಂದರು.ಐಟಿ, ಇಡಿಯಿಂದ ಸ್ಟಿಂಗ್‌ ಆಪರೇಷನ್‌ ನಡೆಯುತ್ತಿವೆ. ಜಾಗೃತರಾಗಿರಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಅಷ್ಟೇ. ಆದರೆ ಕುಮಾರಸ್ವಾಮಿಯವರು ಮಾಹಿತಿ ಎಲ್ಲಿಂದ ಪಡೆದಿದ್ದಾರೆ ಎಂದು ಗೊತ್ತಿಲ್ಲ. ಪೆನ್‌ಡ್ರೈವ್‌ ಇದೆ ಎಂದು ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ. ಕೇಂದ್ರ ಸಚಿವ ಸ್ಥಾನಕ್ಕೆ ಅವರು ಗೌರವ ಕೊಡಬೇಕು. ನಮ ಕುಟುಂಬದ ಬಗ್ಗೆ ಮಾತನಾಡಲು ಅವರಿಗೆ ಅರ್ಹತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಸ್ಟಿಂಗ್‌ ಆಪರೇಷನ್‌ ನಡೆದಿದೆ ಎಂಬ ಕುಮಾರಸ್ವಾಮಿ ಆರೋಪವನ್ನು ತಳ್ಳಿ ಹಾಕಿದ ಅವರು, ಸಾಕ್ಷ್ಯಾಧಾರಗಳೊಂದಿಗೆ ಮಾತನಾಡಬೇಕು. ನಿಮ ಘನತೆ, ಗೌರವಕ್ಕೆ ತಕ್ಕಂತೆ ಮಾತನಾಡಬೇಕು ಎಂದು ತಿರುಗೇಟು ನೀಡಿದರು.

ನಾನು ಜೈಲಿಗೆ ಹೋಗಬೇಕು ಎಂದು ಕುಮಾರಸ್ವಾಮಿಯವರೇ ಹೇಳಿದ್ದರು. ಏನಾಯಿತು? ಅವರದು ಹಿಟ್‌ ವಿಕೆಟ್‌ ಎಂದು ಟೀಕಿಸಿದರು.ಕೆಪಿಎಸ್‌‍ಸಿ ಅಧ್ಯಕ್ಷ ಶಿವಶಂಕರ್‌ ಸಾಹುಕಾರ್‌ ಹಾಗೂ ಸದಸ್ಯೆ ಗೀತಾ ಅವರ ಬಂಧನದ ವಿಚಾರದಲ್ಲಿ ಬಹಳ ಪ್ರಮಾಣಿಕವಾಗಿ ಸಮರ್ಥವಾಗಿ ತನಿಖೆ ನಡೆಸಲಾಗುತ್ತಿದ್ದು, ನ್ಯಾಯಾಲಯ ಏಕೆ ಆ ನಿರ್ದೇಶನ ನೀಡಿದೆಯೋ ಗೊತ್ತಿಲ್ಲ. ಕೆಪಿಎಸ್‌‍ಸಿಯ ಪಶುವೈದ್ಯಾಧಿಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಸಾಕ್ಷಿಗಳನ್ನೂ ಸಂಗ್ರಹಿಸಿದ್ದು ನಾವೇ. ಆದರೆ ಐಟಿ ಹಾಗೂ ಇಡಿ ಏಕೆ ಇದರಲ್ಲಿ ಇಷ್ಟೊಂದು ಆಸಕ್ತಿ ತೋರುತ್ತಿದೆಯೋ ಗೊತ್ತಿಲ್ಲ ಎಂದರು.

RELATED ARTICLES
spot_img

Latest News