Homeಬೆಂಗಳೂರುಸತ್ತ ಪ್ರಾಣಿಗಳ ಕಳೇಬರ ವಿಲೇವಾರಿಗೆ ಚಿತಾಗಾರ ಸ್ಥಾಪನೆ

ಸತ್ತ ಪ್ರಾಣಿಗಳ ಕಳೇಬರ ವಿಲೇವಾರಿಗೆ ಚಿತಾಗಾರ ಸ್ಥಾಪನೆ

ಬೆಂಗಳೂರು, ಅ.8- ಸತ್ತ ಪ್ರಾಣಿಗಳ ಕಳೇಬರಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸುಸಜ್ಜಿತ ಪ್ರಾಣಿ ಚಿತಾಗಾರ ಸ್ಥಾಪನೆಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಮುಂದಾಗಿದೆ. ಜಿಗಣಿ ಹೋಬಳಿಯ ಎಸ್‌‍. ಬಿಂಗೀಪುರದ ಬೇಗೂರು-ಕೊಪ್ಪ ಮುಖ್ಯರಸ್ತೆ ಬಳಿಯ ಪಾಲಿಕೆಗೆ ಸೇರಿದ ಜಾಗದಲ್ಲಿ ಪ್ರಾಣಿ ಚಿತಾಗಾರ ನಿರ್ಮಿಸಲು ಉದ್ದೇಶಿಸಲಾಗಿದ್ದು, 2026-27ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಅಗತ್ಯ ಅನುದಾನವನ್ನು ಕಾಯ್ದಿರಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಕೆ.ಎನ್‌‍. ರಮೇಶ್‌ ತಿಳಿಸಿದ್ದಾರೆ.

ಪಾಲಿಕೆಗೊಂದು ಪ್ರಾಣಿ ಚಿತಾಗಾರ:ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲೂ ತಲಾ ಒಂದು ಪ್ರಾಣಿ ಚಿತಾಗಾರ ಸ್ಥಾಪಿಸಿ, ಸತ್ತ ಪ್ರಾಣಿಗಳ ಕಳೇಬರಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಗ್ರೇಟರ್‌ ಬೆಂಗಳೂರು ಸಚಿವ ಕೃಷ್ಣ ಬೈರೇಗೌಡ ಅವರು ನೀಡಿರುವ ಸೂಚನೆಯ ಹಿನ್ನೆಲೆಯಲ್ಲಿ ಯೋಜನೆ ರೂಪಿಸಲಾಗುತ್ತಿದೆ.

ಚಿತಾಗಾರಕ್ಕೆ ಅಗತ್ಯವಿರುವ ಜಾಗದ ವಿಸ್ತೀರ್ಣ, ನಕ್ಷೆ, ವಿದ್ಯುತ್‌, ಎಲ್‌ಪಿಜಿ, ಸಿಎನ್‌ಜಿ ಅಥವಾ ಹೈಬ್ರಿಡ್‌ ಇಂಧನ ವ್ಯವಸ್ಥೆ, ನಿರ್ಮಾಣ ವೆಚ್ಚ, ಕಾಮಗಾರಿಯ ಕಾಲಮಿತಿ, ಪ್ರತಿ ಕಳೇಬರದ ದಹನ ವೆಚ್ಚ ಹಾಗೂ ದಿನಕ್ಕೆ ಎಷ್ಟು ಪ್ರಾಣಿಗಳ ಕಳೇಬರ ದಹನ ಮಾಡಬಹುದು ಎಂಬ ಬಗ್ಗೆ ಸಭೆಯಲ್ಲಿ ಪರಿಶೀಲನೆ ನಡೆಸಲಾಯಿತು. ಸಭೆಯಲ್ಲಿ ಪಾಲಿಕೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ಡಿ.ಎನ್‌‍. ಶ್ರೀನಾಥ್‌‍, ಎಇಇ ರವಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
spot_img

Latest News