Homeಸಂಪಾದಕೀಯ-ಲೇಖನಗಳುಗಾಯತ್ರಿ ಮಂತ್ರ ರೂಪುಗೊಂಡದ್ದು ಹೇಗೆ..? ಅದರ ಮಹತ್ವ ಗೊತ್ತೇ..?

ಗಾಯತ್ರಿ ಮಂತ್ರ ರೂಪುಗೊಂಡದ್ದು ಹೇಗೆ..? ಅದರ ಮಹತ್ವ ಗೊತ್ತೇ..?

ಬ್ರಹರ್ಷಿ ವಿಶ್ವಾಮಿತ್ರರು ಪೂರ್ವಾಶ್ರಮದಲ್ಲಿ ಕೌಶಿಕ ಮಹಾರಾಜನಾಗಿದ್ದರು. ಒಮೆ ಪರಿವಾರ ಸಮೇತ ಕೌಶಿಕ ರಾಜನು ವಸಿಷ್ಠ ಮಹಾಮುನಿಗಳ ಆಶ್ರಮಕ್ಕೆ ಭೇಟಿ ಕೊಡುತ್ತಾನೆ. ವಸಿಷ್ಠರು ತಮಲ್ಲಿದ್ದ ನಂದಿನಿ ಎಂಬ ಸುರಧೇನು (ದೇವಲೋಕದ ಹಸು)ವಿನ ಮೂಲಕ ಕೌಶಿಕನ ಸಮಸ್ತ ಪರಿವಾರಕ್ಕೆ ಔತಣ ನೀಡಿ ಸತ್ಕರಿಸುತ್ತಾರೆ. ನಂದಿನಿಯ ಮಹಿಮೆ ಕಂಡು ಕೌಶಿಕನಿಗೆ ಅಚ್ಚರಿಯಾಗುತ್ತದೆ. ಇಂಥ ಮಹಮಾನ್ವಿತ ಸುರಧೇನು ವಿರಕ್ತರ ಬಳಿಗಿಂತ ಅರಮನೆಯಲ್ಲಿರುವುದು ಲೇಸೆಂದು ಅದನ್ನು ತನ್ನೊಂದಿಗೆ ಕಳುಹಿಸುವಂತೆ ವಸಿಷ್ಠರನ್ನು ಕೋರುತ್ತಾನೆ. ವಸಿಷ್ಠರು ನಿರಾಕರಿಸುತ್ತಾರೆ.

ಆಗ ತನ್ನ ಸೈನ್ಯದಿಂದ ಬಲಪ್ರಯೋಗಿಸಿ ಆ ಹಸುವನ್ನು ಒಯ್ಯಲು ಕೌಶಿಕ ಪ್ರಯತ್ನಿಸುತ್ತಾನೆ. ಆದರೆ ನಂದಿನಿ ಹಸುವು ತನ್ನೊಡಲಿಂದ ಮಹಾಮಹಾ ಅಸ್ತ್ರಗಳನ್ನು ಪ್ರಯೋಗಿಸಿ ಕೌಶಿಕನ ಸೇನೆಯನ್ನು ಹಿಮೆಟ್ಟಿಸುತ್ತದೆ. ಪರಾಭವಗೊಂಡ ಕೌಶಿಕನು ಇಂಥ ಹಸುವನ್ನು ವಸಿಷ್ಠರು ಗಳಿಸಿದ್ದು ಹೇಗೆ ಎಂದು ಪ್ರಶ್ನಿಸುತ್ತಾನೆ. ಅದಕ್ಕಾಗಿ ತಪಶ್ಚರ್ಯೆ ಸಾಧನೆ ಮಾಡಿ ಬ್ರಹರ್ಷಿಯ ಪಟ್ಟಕ್ಕೇರಬೇಕೆಂದು ಉತ್ತರಿಸುತ್ತಾರೆ.

ಆಗ ಕೌಶಿಕನಿಗೆ ಸಾಧನೆಯ ಮಹತ್ವ ಅರಿವಾಗುತ್ತದೆ ಮಗನಿಗೆ ಪಟ್ಟ ಕಟ್ಟಿ ಕಾಡಿನಲ್ಲಿ ಕಾಟೀರ ನಿರ್ಮಿಸಿಕೊಂಡು ಕಠೋರ ತಪೋನಿರತನಾಗುತ್ತಾನೆ ತಪಃಶಕ್ತಿಯಿಂದ ರಾಜಋಷಿ ಎನಿಸಿಕೊಂಡರೂ ಬ್ರಹರ್ಷಿ ಪಟ್ಟ ಲಭಿಸಿರುವುದಿಲ್ಲ ಸಶರೀರವಾಗಿ ಸ್ವರ್ಗಾರೋಹಣ ಮಾಡಬೇಕು ಎಂದು ಬಯಸುವ ತ್ರಿಶಂಕು ಮಹಾರಾಜನನ್ನು ತಮ ತಪಃಶಕ್ತಿಯ ಪ್ರಭಾವದಿಂದ ಸ್ವರ್ಗಕ್ಕೆ ಕಳುಹಿಸುವ ರಾಜಋಷಿ ಕೌಶಿಕ ದೇವೇಂದ್ರ … ತಿರಸ್ಕೃತಗೊಂಡು ಭೂಮಿಯತ್ತ ಬೀಳಲಾರಂಭಿಸಿದ ತ್ರಿಶಂಕುವಿಗಾಗಿ ಪ್ರತಿ ಸ್ವರ್ಗವನ್ನೇ ಸೃಷ್ಟಿಸಿ ಆತನ ಪತನವನ್ನು ತಡೆಯುತ್ತಾರೆ. ಇದರಿಂದ ಅವರ ತಪಃಶಕ್ತಿ ಪೂರ್ಣ ವ್ಯಯವಾಗಿರುತ್ತದೆ. ಈ ನಡುವೆ ಕೌಶಿಕರ ತಪಸನ್ನು ಭಂಗಪಡಿಸಲು ದೇವತೆಗಳು ಕಳುಹಿಸುವ ಅಪ್ಸರೆ ಮೇನಕೆಗೆ ಮನಸೋತು ತಪೋ ಭ್ರಷ್ಟರಾಗುತ್ತಾರೆ ಆದರೆ ನಂತರ ಪ್ರಮಾದ ಅರಿತು ಮೇನಕೆ ಮತ್ತು ತಮ ಪುತ್ರಿ ಶಾಕುಂತಲಳನ್ನು ತ್ಯಜಿಸಿ ಪುನಃ ಕಠೋರ ತಪಸ್ಸನ್ನುಆಚರಿಸುತ್ತಾರೆ ಕೊನೆಗೆ ಅವರಿಗೆ ಗಾಯತ್ರೀ ಮಂತ್ರ ಸ್ಫುರಣೆಗೊಂಡು ಆತ ಸಾಕ್ಷಾತ್ಕಾರವಾಗುತ್ತದೆ.

ಜಗತ್ತಿಗೆ ಗಾಯತ್ರೀ ಮಂತ್ರದಂತಹ ಉದಾತ ಮಹಿಮಾನ್ವಿತ ಮಹಾ ಮಂತ್ರದ ಕೊಡುಗೆ ನೀಡಿದ ಕಾರಣ ವಿಶ್ವಾಮಿತ್ರ ಎಂಬ ಅಭಿಧಾನಕ್ಕೆ ಪಾತ್ರರಾಗುತ್ತಾರೆ ವಸಿಷ್ಠ ಮಹರ್ಷಿಗಳಿಂದಲೇ ಬ್ರಹರ್ಷಿ ಪದವಿ ಸ್ವೀಕರಿಸುತ್ತಾರೆ. ಗಾಯತ್ರೀ ಮಂತ್ರ ನಿರ್ದಿಷ್ಟ ದೇವತೆಯನ್ನು ಉದ್ದೇಶಿಸಿಲ್ಲವಾದರೂ ಸಾಧಾರಣವಾಗಿ ಗಾಯತ್ರೀ ಮಹಾ ಮಂತ್ರ ಜಪಿಸುವಾಗ ಸೂರ್ಯ ವಿಷ್ಣು ಈಶ್ವರ ಅಥವಾ ಜಗನಾತೆ ಇವರಲ್ಲಿ ಯಾರಾದರೂ ಒಬ್ಬರನ್ನು ಧ್ಯಾನಿಸುವ ಕ್ರಮ ನಡೆದುಕೊಂಡು ಬಂದಿದೆ ಗಾಯತ್ರೀ ಮಂತ್ರಕ್ಕಿಂತ ಮಿಗಿಲಾದ ಮಂತ್ರ ಇನ್ನೊಂದಿಲ್ಲ ಎಂದು ಕೊಂಡಾಡಲಾಗಿದೆ ಗಾಯತ್ರೀ ಜಪಕ್ಕಿಂತ ದೊಡ್ಡದಾದ ತಪಸ್ಸು ಇಲ್ಲ ಎಂದು ಇದರ ಹಿರಿಮೆಯನ್ನು ಶ್ಲಾಘಿಸಲಾಗಿದೆ.

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತನು ಯಜ್ಞಗಳಲ್ಲಿ ನಾನು ಜಪಯಜ್ಞನಾಗಿದ್ದೇನೆ ಮಂತ್ರಗಳಲ್ಲಿ ಗಾಯತ್ರೀ ಮಂತ್ರವಾಗಿದ್ದೇನೆ ಎಂದು ಹೇಳಿ ಗಾಯತ್ರೀ ಮಂತ್ರದ ಹಿರಿಮೆಯನ್ನು ಮತ್ತು ಜಪದ ಮಹತ್ವವನ್ನು ಎತ್ತಿ ಹಿಡಿದಿದ್ದಾನೆ ಗಾಯತ್ರಿಪರೋ ಮಂತ್ರಃ ಎಂದು ಶ್ರುತಿ ವಾಕ್ಯವಿದೆ. ಅಂದರೆ ತನ್ನನ್ನು ಹಾಡುವವರು ಅಥವಾ ಜಪಿಸುವವರನ್ನು ಯಾವುದು ರಕ್ಷಿಸುವುದೋ ಅದೇ ಗಾಯಿತ್ರೀ ತಪಃ ಅಂದರೆ ಸುಡುವುದು ಎಂದರ್ಥ. ಅಂದರೆ ಮಾನವರು ತಮ ನಕಾರಾತಕ ಚಿಂತನೆಗಳನ್ನು ಸುಟ್ಟು ಭಗವಂತನಲ್ಲಿ ಏಕೀಭವಿಸುವುದೇ ತಪಸ್ಸು. ಗಾಯತ್ರೀ ಮಹಾ ಮಂತ್ರ ಜಪವೇ ಅತ್ಯುನ್ನತ ತಪಸ್ಸಾಗಿದೆ ಬ್ರಹಚರ್ಯ, ಗೃಹಸ್ಥ ವಾನ ಪ್ರಸ್ಥ ಈ ಮೂರು ಆಶ್ರಮಗಳಿಗೂ ಸೂಕ್ತವಾದ ಮಂತ್ರ ಇದಾಗಿದೆ.

ಸ್ವಸ್ಥ ತನು-ಸ್ವಚ್ಛ ಮನ ಗಳಿಸಲು ಜಪಯೋಗ. ಇದು ಕಲಿಯುಗ ಈ ಯುಗದಲ್ಲಿ ಧರ್ಮವು ಅವನತವಾಗಿ ಅಧರ್ಮ ಅನ್ಯಾಯಗಳ ಕೈ ಮೇಲಾಗುತ್ತದೆ. ಜನರಲ್ಲಿ ಆಸರೀ ಪ್ರವೃತ್ತಿ ಉತ್ಕ಼ರ್ಷವಾಗುತ್ತದೆ ಹಿಂದಿನ ಯುಗಗಳಲ್ಲಿ ದಾನವರು ಲೋಕಕಂಟಕರಾಗಿದ್ದರು. ಕಲಿಯುಗದಲ್ಲಿ ಆ ಸ್ಥಾನವನ್ನು ಕೊಲೆಗಡುಕರು ಪರಪೀಠಕರು ವಂಚಕರು, ಕಳ್ಳ ಕಾಕರು, ಅತ್ಯಾಚಾರಿಗಳು, ಭ್ರಷ್ಟಾಚಾರಿಗಳು ಆಕ್ರಮಿಸಿಕೊಂಡಿರುತ್ತಾರೆ ಪರಸ್ಪರ ಅಪನಂಬಿಕೆ ಸ್ವಾರ್ಥ ಸುಳ್ಳು ತಟವಟಗಳಿಂದ ಬಹುತೇಕರ ಮನಸ್ಸು ಮಲಿನಗೊಂಡು ಅಶಾಂತಿಯು ತಾಂಡವವಾಡುತ್ತದೆ ಪರಿಣಾಮವಾಗಿ ಮಾನಸಿಕ ನ್ಯೂನತೆ ತನೂಲಕ ದೈಹಿಕ ಅನಾರೋಗ್ಯಕ್ಕೆ ಎಡೆೆಯಾಗುತ್ತದೆ.

ಮಾನವ ದೇಹವು ಸ್ಥೂಲವಾಗಿ ಕಾಣುವಂತಹಹುದಷ್ಟೇ ಅಲ್ಲ ಯೋಗಶಾಸ್ತ್ರವು ತಿಳಿಸುವಂತೆ ಮಾನವ ಶರೀರವು ಐದು ಕೋಶಗಳಿಂದ ಮಾಡಲ್ಪಟ್ಟಿದೆ ಅವೇ ಅನ್ನಮಯ ಕೋಶ ಪ್ರಾಣಮಯ ಕೋಶ ಮನೋಮಯ ಕೋಶ ವಿಜ್ಞಾನಮಯ ಕೋಶ ಆನಂದಮಯ ಕೋಶ, ಅನ್ನಮಯ ಕೋಶವು ನಾವು ಸೇವಿಸುವ ಆಹಾರದಿಂದ ರೂಪುಗೊಂಡಿದ್ದು ಮತ್ತು ಅದರಿಂದಲೇ ಬೆಳೆದು ಜೀವಿಸುವಂಥದ್ದು. ಇದು ಕಣ್ಣಿಗೆ ಕಾಣುವ ಸ್ಥೂಲ ದೇಹ. ಪ್ರಾಣಮಯಕೋಶವು ಉಸಿರಾಟವನ್ನು ಒಳಗೊಂಡಿರುವಂಥದ್ದು. ಜೀವ ಇರುವವರೆಗೂ ಇದು ಕಾರ್ಯ ನಿರ್ವಹಿಸುತ್ತಿರುತ್ತದೆ ಹಾಗೂ ಭಾವನೆಗಳು ಚಿಂತನೆಗಳಿಂದ ಕೂಡಿರುವಂಥದ್ದು.

ವಿಜ್ಞಾನಮಯ ಕೋಶವು ಬುದ್ಧಿ ತರ್ಕಗಳನ್ನು ಒಳಗೊಂಡಿರುವಂಥದ್ದು. ಆನಂದಮಯ ಕೋಶವು ಪೂರ್ಣ ನೆಮದಿಯುಳ್ಳ ಜೀವಾತನ ನೈಜ ಅಸ್ತಿತ್ವ ಮನೋಮಯ ಕೋಶದಲ್ಲಿ ಒಳ್ಳೆಯ ಕೆಟ್ಟ ಭಾವನೆಗಳು ಅಲೆಗಳೋಪಾದಿಯಲ್ಲಿ ಏರುತ್ತಿರುತ್ತವೆ. ಈ ಕೋಶ ಅಥವಾ ಮನಸ್ಸಿನಲ್ಲಿ ಉಂಟಾಗುವ ಆಂದೋಲನವೇ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ. ಕಷ್ಟ ಮನಸ್ಸಿಗೆ ಕಾಯಿಲೆ ದೇಹಕ್ಕೆ ಎನ್ನುವಂತೆ ಮನಸ್ಸಿನ ಚಿಂತೆ ಆತಂಕ ದುಃಖ ಉದ್ವೇಗ ಆಕ್ರೋಶಗಳಿಂದ ಮೊದಲು ಪ್ರಾಣಯ ಕೋಶ ಹಾನಿಗೊಳ್ಳುತ್ತದೆ. ಏಕೆಂದರೆ ಉಸಿರಾಟ ಮನೋಮಯ ಕೋಶ ವೇಗವಾಗುತ್ತದೆ. ಉಸಿರಾಟಕ್ಕೂ ಆರೋಗ್ಯಕ್ಕೂ ನೇರ ಸಂಬಂಧವಿದೆ. ಓರ್ವ ಆರೋಗ್ಯವಂತ ವ್ಯಕ್ತಿ ನಿಮಿಷಕ್ಕೆ 15 ರಿಂದ 20 ಸಾರಿ ಉಸಿರಾಡುತ್ತಾನೆ ಶರೀರ ರೋಗ ಗ್ರಸ್ತವಾದಾಗ ಉಸಿರಾಟದ ಸಂಖ್ಯೆ ವೇಗ ಕಂಡು ಇಪ್ಪತ್ತಕ್ಕಿಂತ ಅಧಿಕವಾಗುತ್ತದೆ. ಆಮೆ ಅತ್ಯಂತ ನಿಧಾನವಾಗಿ ಉಸಿರಾಡುತ್ತದೆ. ಹೀಗಾಗಿ ಜಗತ್ತಿನ ಅತ್ಯಂತ ದೀರ್ಘಾಯು ಪ್ರಾಣಿ ಎನಿಸಿಕೊಂಡಿದೆ. ಮೊಲದ ಉಸಿರಾಟ ಅತಿ ವೇಗ ಹೀಗಾಗಿ ಅದರ ಆಯುಷ್ಯ ಅತ್ಯಲ್ಪ.

ಪ್ರಾಣಯಕೋಶಕ್ಕೆ ಆದ ಹಾನಿ ಅನ್ನಮಯ ಕೋಶವನ್ನು ಹಾಳುಗೆಡಹುತ್ತದೆ. ಈ ರೀತಿಯ ಹಾನಿ ತಡೆಗಟ್ಟಿ ಸ್ವಸ್ಥ ತನು ಸ್ವಚ್ಛ ಮನ ಗಳಿಸಬೇಕೆಂದರೆ ನಮ ಸನಾತನ ಪರಂಪರೆಯಲ್ಲಿ ಹಲವಾರು ರೀತಿಯ ಕರ್ಮಾನುಷ್ಠಾನಗಳನ್ನು ತಿಳಿಸಲಾಗಿದೆ ಅವುಗಳಲ್ಲಿ ಯೋಗ ಮಾರ್ಗವೂ ಒಂದಾಗಿದೆ. ಯೋಗದಲ್ಲಿ ಜ್ಞಾನ ಯೋಗ, ಭಕ್ತಿ ಯೋಗ, ರಾಜಯೋಗ, ಕರ್ಮ ಯೋಗ ಎಂದು ನಾಲ್ಕು ಮಾರ್ಗಗಳಿವೆ.
ಇಂದು ಯೋಗಾಭ್ಯಾಸ ಎಂದು ಹೆಚ್ಚು ಪ್ರಚಲಿತವಾಗಿರುವುದು ರಾಜಯೋಗದಲ್ಲಿ ಒಂದು ಭಾಗವಾದ ಹಠಯೋಗವಾಗಿದೆ. ಯೋಗಾಸನಗಳು ಪ್ರಾಣಾಯಾಮ, ಬಂಧಗಳು ಕ್ರಿಯೆಗಳು ಮುದೆಗಳನ್ನೊಳಗೊಂಡ ದೈಹಿಕ ಅಭ್ಯಾಸಗಳನ್ನು ಒಳಗೊಂಡಿರುವುದೇ ಹಠ ಯೋಗ.

ಆದರೆ ಇಂದಿನ ಯುಗದ ಜನರ ದೇಹವು ಹಿಂದಿನ ಯುಗಗಳಂತೆ ಸದೃಢವಾಗಿರದೆ ಸೂಕ್ಷ್ಮವಾಗಿರುತ್ತದೆ. ಹಠಯೋಗದಂಥ ಕಠಿಣ ದೇಹದಂಡನೆಗಳನ್ನಾಗಲಿ ಹಿಂದಿನ ಯುಗಗಳಂತೆ ಕಠೋರ ತಪಸ್ಚರ್ಯಗಳನ್ನಾಗಲಿ ಮಾಡುವುದು ಸಾಧ್ಯವಿರುವುದಿಲ್ಲ. ಆದ್ದರಿಂದ ಕಲಿಯುಗಕ್ಕೆ ಭಕ್ತಿ ಯೋಗವೇ ಅತ್ಯಂತ ಸೂಕ್ತವಾದುದಾಗಿರುತ್ತದೆ. ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಜ ಎಂದರೆ ಜನಾಂತರಗಳ ಪ ಎಂದರೆ ಪಾಪ ರಾಶಿಯನ್ನು ಪಶ್ಚಿಮ ಮಾಡುವ ಜಪವು ಯೋಗವಾಗಿದೆ. ಜಪ ಎಂದರೆ ಭಗವಂತನ ಯಾವುದಾದರೂ ನಾಮವನ್ನೋ ಮಂತ್ರವನ್ನೋ ಪುನಃ ಪುನಃ ಉಚ್ಚರಿಸುವುದು. ಇದಕ್ಕೆ ಸಂಖ್ಯೆಯ ಎಣಿಕೆ ಇರುತ್ತದೆ.

ಆ ಮಂತ್ರ ಶ್ರೇಷ್ಠ ಈ ಮಂತ್ರ ಕನಿಷ್ಠ ಎಂದು ಹೇಳುವಂತಿಲ್ಲ ಆದರೂ ಗಾಯತ್ರಿ ಮಂತ್ರವು ಶ್ರೇಷ್ಠತಮ ಮಂತ್ರ ಎಂದು ಪ್ರಸಿದ್ಧವಾಗಿದೆ. ವಿಶ್ವಾಮಿತ್ರ ಮಹರ್ಷಿಗಳಿಗೆ ಮೊದಲ ಶ್ರೇಷ್ಠತಮ ಸ್ಫುರಣಿಯಾದ ಈ ಮಂತ್ರವು ಒಂದು ಉದಾತ್ತವಾದ ಪ್ರಾರ್ಥನಾ ಮಂತ್ರವಾಗಿದೆ.

ಗಾಯತ್ರಿ ಮಂತ್ರ ಹೀಗಿದೆ
ಓಂ ಭೂರ್ಭ್ವಃ ಸ್ವಃ
ತತ್ಸವಿತುರ್ವರೇಣ್ಯಂ
ಭರ್ಗೋದೇವಸ್ಯ ಧೀಮಹಿ
ಧಿಯೇ ಯೋನಃ ಪ್ರಚೋದಯಾತ್‌
ಅದರ ಅರ್ಥ ಹೀಗಿದೆ, ಮೂರು ಲೋಕಗಳಿಗೂ ಒಡೆಯನಾದ ಪರಮ ಪ್ರಭುದೇವನ ತೇಜೋಬಿಂಬವನ್ನು ಧಾರಣ ಮಾಡುವ ಸಂಕಲ್ಪ ಮಾಡುತ್ತೇವೆ ಆತನು ನಮ ಬುದ್ಧಿಗಳನ್ನು ಸನಾರ್ಗದಲ್ಲಿ ಪ್ರಚೋದಿಸಲಿ.ಇಲ್ಲಿ ನನ್ನ ಬುದ್ಧಿಯನ್ನು ಎಂಬ ಸ್ವಾರ್ಥ ಇಲ್ಲ, ನಮ ಬುದ್ಧಿಗಳನ್ನು ಎಂಬ ಸಮಷ್ಟಿ ಪ್ರಜ್ಞೆಯಿಂದ ಸದ್ಬುದ್ಧಿಯನ್ನು ಕೋರಿಕೊಳ್ಳುವ ಪ್ರಾರ್ಥನಾ ಮಂತ್ರ ಇದು. ಗಾಯತ್ರೀ ಎನ್ನುವುದು ಒಂದು ಛಂದಸ್ಸಿನ ಹೆಸರು. ಸವಿತಾ ಇದರ ದೇವತೆ. ವಿಶ್ವಾಮಿತ್ರರು ಮಂತ್ರದ್ರಷ್ಟಾದ. ಯಾರು ಬೇಕಾದರೂ ಗಾಯತ್ರೀ ಮಂತ್ರವನ್ನು ಜಪಿಸಬಹುದು. ಗಾಯತ್ರೀ ಜಪವು ನಿಜಾರ್ಥದಲ್ಲಿ ಮಹಾಯೋಗವಾಗಿದೆ. ಈ ಲೇಖನ ಮಾಲೆಯಲ್ಲಿ ಗಾಯತ್ರೀ ಉಪಾಸನೆ ಕೂಡ ಮಾರ್ಗದರ್ಶಿ ವಿವರಗಳನ್ನು ನೀಡಲಾಗುವುದು.

RELATED ARTICLES
spot_img

Latest News