Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-10-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-10-2026)

ನಿತ್ಯ ನೀತಿ : ಪ್ರಯತ್ನವೆಂಬ ಚಂದ್ರನನ್ನು ಬೆಳಗಿಸಿದರೆ ಯಶಸ್ಸೆಂಬ ಬೆಳದಿಂಗಳು ಸಿಗುತ್ತದೆ. -ಸ್ವಾಮಿ ವಿವೇಕಾನಂದ

ಪಂಚಾಂಗ : ಸೋಮವಾರ, 12-10-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಶರದ / ಮಾಸ: ಅಶ್ವಯುಜ / ಪಕ್ಷ: ಶುಕ್ಲ / ತಿಥಿ: ದ್ವಿತೀಯಾ / ನಕ್ಷತ್ರ: ಸ್ವಾತಿ / ಯೋಗ: ವಿಷ್ಕಂಭ / ಕರಣ: ಬಾಲವ
ಸೂರ್ಯೋದಯ – ಬೆ.6.10
ಸೂರ್ಯಾಸ್ತ – 06.04
ರಾಹುಕಾಲ – 7.30-9.00
ಯಮಗಂಡ ಕಾಲ – 10.30- 12.00
ಗುಳಿಕ ಕಾಲ – 1.30-3.00

ರಾಶಿಭವಿಷ್ಯ :
ಮೇಷ: ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಹಿಂದೆ ಮುಂದೆ ಯೋಚಿಸಬೇಡಿ. ಆತ್ಮೀಯರಿಂದ ಸಹಾಯ ಸಿಗಲಿದೆ.
ವೃಷಭ: ಮಾನಸಿಕ ಒತ್ತಡ ಹೆಚ್ಚಾಗುವುದು. ಕೆಲಸ-ಕಾರ್ಯಗಳನ್ನು ಆದಷ್ಟು ಬೇಗ ಮುಗಿಸಿ.
ಮಿಥುನ: ಅಭಿವೃದ್ಧಿಯಲ್ಲಿ ಹಲವು ಅಡೆತಡೆಗಳು ಎದುರಾಗಲಿವೆ. ಆಯಾಸ ಹೆಚ್ಚಾಗಲಿದೆ.

ಕಟಕ: ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಕಡಿಮೆಯಾಗಲಿದೆ.
ಸಿಂಹ: ಅಧಿಕ ಆತ್ಮವಿಶ್ವಾಸ ದಿಂದ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡುವಿರಿ.
ಕನ್ಯಾ: ಯಾವುದೇ ಕಾರ್ಯ ಕೈಗೊಂಡರೂ ಹೆಜ್ಜೆ ಹೆಜ್ಜೆಗೂ ಅಡೆತಡೆ ಎದುರಾಗಲಿದೆ.

ತುಲಾ: ಅಮೂಲ್ಯ ವಸ್ತುಗಳ ಖರೀದಿಗೆ ಇಂದು ಉತ್ತಮವಾದ ದಿನ.
ವೃಶ್ಚಿಕ: ಮಧ್ಯವರ್ತಿಗಳ ಸಹಾಯದಿಂದ ವಿವಾಹದ ವಿಷಯದಲ್ಲಿ ಅನುಕೂಲಕರವಾಗಲಿದೆ.
ಧನುಸ್ಸು: ಕುಟುಂಬದವರೊಂದಿಗೆ ಸಾಕಷ್ಟು ಸಮಯ ಕಳೆಯಲು ಬಯಸುವಿರಿ.

ಮಕರ: ಪಿತ್ರಾರ್ಜಿತ ಆಸ್ತಿ ವಿವಾದ ತಾರಕಕ್ಕೇರಲಿದೆ. ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ.
ಕುಂಭ: ವ್ಯಾಪಾರದಲ್ಲಿ ಲಾಭವಿದೆ. ಅಪರಿಚಿತ ರೊಂದಿಗೆ ಹೆಚ್ಚು ಸಮಯ ಕಳೆಯದಿರಿ.
ಮೀನ: ಅದೃಷ್ಟ ನಿಮ್ಮೆಡೆಗಿದ್ದರೂ ಎಲ್ಲ ಕಾರ್ಯಗಳನ್ನೂ ಎಚ್ಚರಿಕೆಯಿಂದ ನಿರ್ವಹಿಸಿ.

RELATED ARTICLES
spot_img

Latest News