Homeರಾಜ್ಯಮೈಸೂರಿನಲ್ಲಿ ವಿದ್ಯುತ್‌ ದೀಪಾಲಂಕಾರಕ್ಕೆ ಮನಸೋತ ಪ್ರವಾಸಿಗರು

ಮೈಸೂರಿನಲ್ಲಿ ವಿದ್ಯುತ್‌ ದೀಪಾಲಂಕಾರಕ್ಕೆ ಮನಸೋತ ಪ್ರವಾಸಿಗರು

ಮೈಸೂರು,ಅ.12- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಅಂಗವಾಗಿ ನಗರದೆಲ್ಲೆಡೆ ಅಳವಡಿಸಿರುವ ವಿದ್ಯುತ್‌ ದೀಪಾಲಂಕಾರಕ್ಕೆ ಪ್ರವಾಸಿಗರು ಮನಸೋತಿದ್ದಾರೆ.ನಗರದ ಸಯ್ಯಾಜಿರಾವ್‌ ರಸ್ತೆಯಲ್ಲಿರುವ ಹಸಿರು ಚಪ್ಪರದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ದಸರಾ ವಿದ್ಯುತ್‌ ದೀಪಾಲಂಕಾರಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಪ್ರತೀ ವರ್ಷದಂತೆ ಈ ವರ್ಷವೂ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ ವತಿಯಿಂದ ದಸರಾ ದೀಪಾಲಂಕಾರ ಮಾಡಲಾಗಿದ್ದು, ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚು ಆಕರ್ಷಣೀಯವಾಗಿ ಸಾಂಸ್ಕೃತಿಕ ನಗರಿ ಕಂಗೊಳಿಸುತ್ತಿದೆ. 21 ದಿನಗಳ ಕಾಲ ವಿದ್ಯುತ್‌ ದೀಪಾಲಂಕಾರವಿದ್ದು, ಪ್ರವಾಸಿಗರು ವಿವಿಧ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ನಾಲ್ಕು ದಿನ ಡ್ರೋನ್‌ ಶೋ :
ದಸರಾ ಮಹೋತ್ಸವದ ಆಕರ್ಷಣೆಯಾಗಿರುವ ಡ್ರೋನ್‌ ಪ್ರದರ್ಶನ ಈ ಬಾರಿ ವರ್ಣರಂಜಿತವಾಗಿರಲಿದ್ದು, ರಾಷ್ಟ್ರೀಯ ಪಕ್ಷಿ ನವಿಲಿನ ಆಕೃತಿಗೆ 3,500 ಡ್ರೋನ್‌ಗಳನ್ನು ಬಳಸಿಕೊಂಡು ಗಿನ್ನಿಸ್‌‍ ದಾಖಲೆ ಮಾಡಲು ಮುಂದಾಗಿದೆ.ಬನ್ನಿ ಮಂಟಪದ ಪಂಜಿನ ಕವಾಯತ್‌ ಮೈದಾನದಲ್ಲಿ 17, 18, 20 ಮತ್ತು 21 ರಂದು ರಾತ್ರಿ 8 ಗಂಟೆಗೆ ಡ್ರೋನ್‌ ಪ್ರದರ್ಶನ ನಡೆಯಲಿದೆ.

146 ಕಿ.ಮೀ. ದೀಪಾಲಂಕಾರ ಮಾಡಲಾಗಿದ್ದು, 199 ರಸ್ತೆಗಳು, 123 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದ್ದು, ಪ್ರಮುಖ ಪ್ರದೇಶಗಳಲ್ಲಿ ಎಲ್‌ಇಡಿ ಬಲ್‌್ಪಗಳಿಂದ ನಿರ್ಮಿಸಲಾದ 80 ವಿವಿಧ ಪ್ರತಿಕೃತಿಗಳನ್ನು ಇರಿಸಲಾಗಿದೆ.

RELATED ARTICLES
spot_img

Latest News