Homeರಾಜ್ಯಪೂಜೆ ನೆಪದಲ್ಲಿ ಆಭರಣ ದೋಚಿದ್ದ ಜ್ಯೋತಿಷಿ ವಶಕ್ಕೆ

ಪೂಜೆ ನೆಪದಲ್ಲಿ ಆಭರಣ ದೋಚಿದ್ದ ಜ್ಯೋತಿಷಿ ವಶಕ್ಕೆ

ಬೆಂಗಳೂರು,ಅ.14-ಜ್ಯೋತಿಷ್ಯ ಹೇಳುವುದಾಗಿ ವೃದ್ಧೆಯನ್ನು ನಂಬಿಸಿ ಪ್ರತಿ ಅಮಾವಾಸ್ಯೆಯಂದು ಅವರ ಮನೆಗೆ ಪೂಜೆ ನೆಪದಲ್ಲಿ ಹೋಗಿ ಆಭರಣಗಳನ್ನು ಪಡೆದು ಆಂಧ್ರಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ವಶಕ್ಕೆ ಪಡೆದು 200 ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.

ಅನಾರೋಗ್ಯದಿಂದಾಗಿ ಆಗಾಗ್ಗೆ ವಿಕ್ಟೋರಿಯಾ ಆಸ್ಪತ್ರೆಗೆ ಹೋಗು ತ್ತಿದ್ದ ಬ್ಯಾಟರಾಯನಪುರದ ನಿವಾಸಿ ಶಾಂತಮ (62) ಎಂಬ ವೃದ್ಧೆಗೆ ಜ್ಯೋತಿಷಿ ವೆಂಕಟೇಶ್‌ ಎಂಬಾತನ ಪರಿಚಯವಾಗಿದೆ. ಆ ಸಂದರ್ಭದಲ್ಲಿ ತಮ ಆರೋಗ್ಯ ಸಮಸ್ಯೆಯನ್ನು ಶಾಂತಮ ಹೇಳಿಕೊಂಡಾಗ ಕೆಲವೇ ದಿನಗಳಲ್ಲಿ ಆರೋಗ್ಯ ಸುಧಾರಿಸಲಿದೆ ಎಂದು ಜ್ಯೋತಿಷಿ ಹೇಳಿದಂತೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಇದರಿಂದ ಆ ಜ್ಯೋತಿಷಿಯನ್ನು ಶಾಂತಮ ಅವರು ನಂಬಿದ್ದಾರೆ. ತಮ ಮಗನ ಕುಡಿತದ ಚಟ ಬಿಡಿಸುವಂತೆ ಹಾಗೂ ಮಗಳ ಮದುವೆ ವಿಚಾರವಾಗಿ ಮಾತ ನಾಡಲು ಮತ್ತೊಂದು ದಿನ ಅವರನ್ನು ಹುಡುಕಿಕೊಂಡು ಹೋದಾಗ ಆತ ಸಿಕ್ಕಿಲ್ಲ.ಹಾಗಾಗಿ ಆಟೋ ಚಾಲಕರೊ ಬ್ಬರಿಗೆ ತಮ ಮೊಬೈಲ್‌ ನಂಬರ್‌ ಕೊಟ್ಟು ಜ್ಯೋತಿಷಿ ಬಂದಾಗ ಕೊಡುವಂತೆ ಹೇಳಿ ಮನೆಗೆ ಹೋಗಿದ್ದಾರೆ.

ಇದಾದ ಕೆಲವೇ ದಿನಗಳಲ್ಲಿ ಶಾಂತಮ ಅವರ ಮೊಬೈಲ್‌ ನಂಬರ್‌ ಪಡೆದುಕೊಂಡಿದ್ದ ಜ್ಯೋತಿಷಿ ವೆಂಕಟೇಶ್‌ ಕರೆ ಮಾಡಿ ಮಾತನಾಡಿದ್ದು, ಮನೆಯಲ್ಲಿರುವ ಚಿನ್ನಾಭರಣಗಳನ್ನಿಟ್ಟು ಪೂಜೆ ಮಾಡಿದರೆ ಒಳ್ಳಯದಾಗುತ್ತದೆ ಎಂದು ನಂಬಿಸಿದ್ದಾನೆ.

ಇದೇ ನೆಪದಲ್ಲಿ ಶಾಂತಮ ಅವರ ಅಸಹಾಯಕತೆಯನ್ನು ಅರಿತ ಜ್ಯೋತಿಷಿ ಇದೇ ಸರಿಯಾದ ಸಮಯವೆಂದು ಭಾವಿಸಿ ಪೂಜೆ ನೆಪದಲ್ಲಿ ಪ್ರತಿ ಅಮಾವಾಸ್ಯೆಯಂದು ಅವರ ಮನೆಗೆ ಆಗಾಗ್ಗೆ ಹೋಗಿ ಹಂತ ಹಂತವಾಗಿ 40 ಲಕ್ಷ ಮೌಲ್ಯದ ಆಭರಣಗಳನ್ನು ಪಡೆದುಕೊಂಡು ಆಂಧ್ರಕ್ಕೆ ಪರಾರಿಯಾಗಿದ್ದಾನೆ.

ಅದೇ ಸಂದರ್ಭದಲ್ಲಿ ವರಮಹಾಲಕ್ಷ್ಮೀ ಹಬ್ಬ ಬಂದಿದೆ. ಹಾಗಾಗಿ ಶಾಂತಮ ಅವರು ಆಭರಣಗಳನ್ನು ವಾಪಸ್‌‍ ತಂದು ಕೊಡುವಂತೆ ಜ್ಯೋತಿಷಿಗೆ ಕರೆ ಮಾಡಿದಾಗ ನನಗೆ ಅಪಘಾತವಾಗಿದೆ ನಾನು ಬದುಕು ಳಿಯುವುದೇ ಕಷ್ಟ ಎಂದು ಬಿಂಬಿಸುವ ನಕಲಿ ವಿಡಿಯೋವೊಂದನ್ನು ಕಳುಹಿಸಿ ನಂತರ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾನೆ.

ಮನೆಯಲ್ಲಿ ಯಾರಿಗೂ ಹೇಳದೆ ಆಭರಣಗಳನ್ನು ಕೊಟ್ಟು ಮೋಸ ಹೋಗಿದ್ದ ಶಾಂತಮ ಮುಂದೇನು ಮಾಡುವುದೆಂದು ತೋಚದೆ ತಮ ಮಗಳಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ತಾಯಿಯ ಮೊಬೈಲ್‌ನಲ್ಲಿದ್ದ ವಿಡಿಯೋವನ್ನು ಮಗಳು ನೋಡಿ ಅದು ಎಐ ಬಳಸಿ ಮಾಡಿರುವ ನಕಲಿ ವಿಡಿಯೋ ಎಂದು ತಿಳಿಸಿದಾಗ ಶಾಂತಮ ಅಘಾತಗೊಂಡಿದ್ದಾರೆ. ನಂತರ ಅವರು ಪೊಲೀಸರಿಗೆ ಮೊರೆ ಹೋಗಿ ದೂರು ನೀಡಿದ್ದಾರೆ.

ಘಟನೆ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕೊನೆಗೂ ಜ್ಯೋತಿಷಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ 200 ಗ್ರಾಂ ಆಭರಣಗಳನ್ನು ಜಪ್ತಿ ಮಾಡಿ ಇನ್ನುಳಿದ ಆಭರಣಗಳಿಗಾಗಿ ಶೋಧ ಮುಂದುವರೆದಿದೆ.

RELATED ARTICLES
spot_img

Latest News