Homeರಾಷ್ಟ್ರೀಯಜಿರಲೆಗಳ ಪರ ರಾಹುಲ್‌ ಗಾಂಧಿ ಬ್ಯಾಟಿಂಗ್‌

ಜಿರಲೆಗಳ ಪರ ರಾಹುಲ್‌ ಗಾಂಧಿ ಬ್ಯಾಟಿಂಗ್‌

ನವದೆಹಲಿ, ಅ.14- ಕಾಂಗ್ರೆಸ್‌‍ ನಾಯಕ ರಾಹುಲ್‌ಗಾಂಧಿ ಅವರು ಇದೇ ಮೊದಲ ಬಾರಿಗೆ ಕಾಕ್ರೋಚ್‌ ಜನತಾ ಪಾರ್ಟಿ ಪರ ಬ್ಯಾಟಿಂಗ್‌ ಮಾಡಿದ್ದಾರೆ.ಜಂತರ್‌ ಮಂತರ್‌ನಲ್ಲಿ ತ್ರಿವರ್ಣ ಧ್ವಜವನ್ನು ಬೀಸುವುದು ಅಪರಾಧವಲ್ಲ ಎಂದು ಹೇಳುವ ಮೂಲಕ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಕಾಕ್ರೋಚ್‌ ಜನತಾ ಪಾರ್ಟಿಯನ್ನು (ಸಿಜೆಪಿ) ಬೆಂಬಲಿಸಿದ್ದಾರೆ.

ಜಂತರ್‌ ಮಂತರ್‌ನ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸಿಜೆಪಿ ಸಹ-ಸಂಯೋಜಕರಾದ ಸೌರವ್‌ ದಾಸ್‌‍ ಮತ್ತು ಅಶುತೋಷ್‌ ರಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ನಂತರ ಕಾಂಗ್ರೆಸ್‌‍ ಸಂಸದರ ಈ ಹೇಳಿಕೆ ಹೊರಬಿದ್ದಿದೆ.

ಶಾಂತಿಯುತ ಪ್ರತಿಭಟನೆಯ ವೇಳೆ ಜಂತರ್‌ ಮಂತರ್‌ನಲ್ಲಿ ತ್ರಿವರ್ಣ ಧ್ವಜವನ್ನು ಬೀಸುವುದು ಅಪರಾಧವಲ್ಲ. ಇದಕ್ಕಾಗಿ ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನದ ಕೃತ್ಯವಾಗಿದೆ ಎಂದು ಅವರು ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದಾರೆ.

RELATED ARTICLES
spot_img

Latest News