Homeರಾಷ್ಟ್ರೀಯಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್‌ ತಾಂತ್ರಿಕ ದೋಷದಿಂದ ಮುನ್ನೆಚ್ಚರಿಕಾ ಲ್ಯಾಂಡಿಂಗ್‌‍, ಯಾತ್ರಿಕರು ಸೇಫ್

ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್‌ ತಾಂತ್ರಿಕ ದೋಷದಿಂದ ಮುನ್ನೆಚ್ಚರಿಕಾ ಲ್ಯಾಂಡಿಂಗ್‌‍, ಯಾತ್ರಿಕರು ಸೇಫ್

ನ್ಯೂತೆಹ್ರಿ, ಅ. 24: ಮುಂಬೈನಿಂದ ಆರು ಯಾತ್ರಿಕರನ್ನು ಕೇದಾರನಾಥಕ್ಕೆ ಕರೆದೊಯ್ಯುತ್ತಿದ್ದ ಖಾಸಗಿ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉತ್ತರಾಖಂಡದ ನ್ಯೂ ತೆಹ್ರಿಯಲ್ಲಿ ಇಂದು ಬೆಳಿಗ್ಗೆ ಮುನ್ನೆಚ್ಚರಿಕಾ ಲ್ಯಾಂಡಿಂಗ್‌ ಮಾಡಲಾಗಿದೆ.

ಹೆಲಿಕಾಪ್ಟರ್‌ನಲ್ಲಿದ್ದ ಆರು ಯಾತ್ರಿಕರು ಹಾಗೂ ಪೈಲಟ್‌ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಟ್ರಾನ್ಸ್ ಭಾರತ್‌ ಸಂಸ್ಥೆ ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್‌ ಬೆಳಿಗ್ಗೆ ಸುಮಾರು 8 ಗಂಟೆಗೆ ನ್ಯೂ ತೆಹ್ರಿಯ ಬೌರಾಡಿ ಕ್ರೀಡಾಂಗಣದಲ್ಲಿ ಇಳಿಯಿತು.

ಡೆಹ್ರಾಡೂನ್‌ನ ಸಹಸ್ರಧಾರಾ ಹೆಲಿಪ್ಯಾಡ್‌ನಿಂದ ಗುಪ್ತಕಾಶಿ ಕಡೆಗೆ ತೆರಳುತ್ತಿದ್ದಾಗ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು ಎಂದು ನ್ಯೂ ತೆಹ್ರಿ ಕೊತ್ವಾಲಿ ಪೊಲೀಸ್‌‍ ಠಾಣೆಯ ಉಸ್ತುವಾರಿ ಅಧಿಕಾರಿ ಐಶ್ವರ್ಯಾ ಪಾಲ್‌ ತಿಳಿಸಿದ್ದಾರೆ. ಪೈಲಟ್‌ನೊಂದಿಗೆ ಮಾತನಾಡಿದ ಬಳಿಕ, ಇದು ಮುನ್ನೆಚ್ಚರಿಕೆಯ ಕ್ರಮವಾಗಿ ಕೈಗೊಂಡ ಲ್ಯಾಂಡಿಂಗ್‌ ಆಗಿದ್ದು, ಯಾವುದೇ ತುರ್ತು ಪರಿಸ್ಥಿತಿ ಎದುರಾಗಿರಲಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಪಾಲ್‌ ಹೇಳಿದ್ದಾರೆ.

ತಾಂತ್ರಿಕ ದೋಷವನ್ನು ಪರಿಶೀಲಿಸಿ ಸರಿಪಡಿಸಿದ ಬಳಿಕ ಹೆಲಿಕಾಪ್ಟರ್‌ ಮತ್ತೆ ಹಾರಾಟ ಆರಂಭಿಸಿ ಸಹಸ್ರಧಾರಾ ಹೆಲಿಪ್ಯಾಡ್‌ಗೆ ವಾಪಸ್‌‍ ತೆರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಅಥವಾ ಗಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

RELATED ARTICLES
spot_img

Latest News