ನವದೆಹಲಿ,ನ.5- ಪ್ರಸಕ್ತ 2026ರ ಯುಎಸ್ ಮಧ್ಯಂತರ ಚುನಾವಣೆಗಳು ಭಾರತ-ಯುಎಸ್ ಸಂಬಂಧಗಳು ಮತ್ತು ಡೊನಾಲ್ಡ್ ಟ್ರಂಪ್ ಅವರ ವಿದೇಶಾಂಗ ನೀತಿಯ ಮೇಲೆ ಬೀರುವ ಪರಿಣಾಮಗಳ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅಮೆರಿಕದಲ್ಲಿನ ರಾಜಕೀಯ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸುತ್ತಾ, ಮಧ್ಯಂತರ ಚುನಾವಣೆಗಳ ನಂತರ ಬದಲಾಗುತ್ತಿರುವ ರಾಜಕೀಯ ಚಲನಶೀಲತೆಯ ಹೊರತಾಗಿಯೂ, ವಿದೇಶಾಂಗ ನೀತಿಯ ವಿಷಯದಲ್ಲಿ ಡೊನಾಲ್್ಡ ಟ್ರಂಪ್ ಹೆಚ್ಚಾಗಿ ನಿರ್ಬಂಧವಿಲ್ಲದೆ ಉಳಿದಿದ್ದಾರೆ.
ಮೂಲಭೂತವಾಗಿ, ವಿದೇಶಾಂಗ ನೀತಿಯಲ್ಲಿ ಟ್ರಂಪ್ ಬಹುತೇಕ ಮುಕ್ತ ಹಕ್ಕಿಯಾಗಿಯೇ ಉಳಿದಿದ್ದಾರೆ, ಆದ್ದರಿಂದ ಭಾರತವು ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ಮುಂದುವರಿಸಬೇಕಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ವಿದೇಶಾಂಗ ವ್ಯವಹಾರಗಳು, ಸುಂಕಗಳು ಮತ್ತು ಮಿಲಿಟರಿ ನಿರ್ಧಾರಗಳ ಮೇಲೆ ಅಮೆರಿಕದ ಅಧ್ಯಕ್ಷರು ಗಣನೀಯ ಸ್ವತಂತ್ರ ಅಧಿಕಾರ ಹೊಂದಿದ್ದಾರೆ. ಟ್ರಂಪ್ ಮತ್ತೊಂದು ವೈಯಕ್ತಿಕ ಚುನಾವಣೆಯ ನಿರೀಕ್ಷೆಯನ್ನು ಎದುರಿಸದ ಕಾರಣ, ತಮ ವಿದೇಶಾಂಗ ನೀತಿ ಕಾರ್ಯಸೂಚಿ ಕಾರ್ಯಗತಗೊಳಿಸುವಲ್ಲಿ ಅವರು ಹೆಚ್ಚಾಗಿ ನಿರ್ಬಂಧವಿಲ್ಲದೆ ಇರುತ್ತಾರೆ ಎಂದು ವಾದಿಸಿದ್ದಾರೆ. ಡೆಮಾಕ್ರಟಿಕ್-ನಿಯಂತ್ರಿತ ಕಾಂಗ್ರೆಸ್ ಘರ್ಷಣೆಯನ್ನು ಉಂಟು ಮಾಡಬಹುದು ಎಂದು ಹೇಳಿದ್ದಾರೆ.
