ಬೆಂಗಳೂರು, ಅ.5- ಕ್ರಿಕೆಟ್ ಸಾಮ್ರಾಜ್ಯದಲ್ಲಿ ತನ್ನದೇ ಆದ ಅಧಿಪತ್ಯ ಸಾಧಿಸಿರುವ ಕಿಂಗ್ ಕೊಹ್ಲಿ, ಕ್ರಿಕೆಟ್ ಅಂಗಳವಲ್ಲದೆ ಆದರಾಚೆಗೂ ಯುವ ಸಮೂಹಕ್ಕೆ ಸ್ಫೂರ್ತಿ ಆಗಿದ್ದಾರೆ, ಅಲ್ಲದೆ ಸಾಕಷ್ಟು ಯುವ ಕ್ರಿಕೆಟಿಗರ ಸಕ್ಸಸ್ ಮಂತ್ರದಲ್ಲೂ ವಿರಾಟನ ಛಾಪು ಅಡಗಿದೆ. ವಿರಾಟ್ ತಮ ಜೀವನದಲ್ಲಿ ಅನುಸರಿಸುತ್ತಿರುವ ಕೆಲವು ಸೂತ್ರಗಳು ಕೂಡ ಯುವಕರ ಯಶಸ್ಸಿಗೆ ದಾರಿಯಾಗಿವೆ. ಕೊಹ್ಲಿಗೆ ಇಂದು 38ರ ಸಂಭ್ರಮ.
ಸ್ವನಂಬಿಕೆಯಿಂದಲೇ ಯಶಸ್ಸು:
`ನೀವು ಏನಾದರೂ ಕೆಲಸ ಆರಂಭಿಸಿದರೂ ಅದರಲ್ಲಿ ತುಂಬಾ ತಾಳೆ ಹಾಗೂ ಕಠಿಣ ಪರಿಶ್ರಮ ವಹಿಸಿ, ಯಶಸ್ಸಿನ ಹಾದಿಯಲ್ಲಿ ಸಾಗುವಾಗ ಕೆಲವು ಅಡಚಣೆಗಳು ಎದುರಾಗುತ್ತವೆ, ಅದರ ಕಡೆ ಗಮನಹರಿಸದೆ ನಿಮ ಸ್ವನಂಬಿಕೆಯಿಂದ ಮುಂದೆ ಸಾಗಿದರೆ ಭವಿಷ್ಯದಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ’ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಬಾಲ್ಯದಲ್ಲಿ ಸ್ಟಾರ್ ಕ್ರಿಕೆಟಿಗರ ಬಗ್ಗೆ ಒಲವು:
`ನಾನು ಬಾಲ್ಯದಲ್ಲಿದ್ದಾಗ ಅಂದಿನ ಕಾಲದ ಸ್ಟಾರ್ ಕ್ರಿಕೆಟಿಗರ ಸಂಪೂರ್ಣ ಜೀವನವನ್ನು ತಿಳಿದುಕೊಳ್ಳಲು ನಾನು ಸಾಕಷ್ಟು ಹುಡುಕಾಟ ನಡೆಸುತ್ತಿದ್ದೆ, ಆದರೆ ಇಂದಿನ ಮಕ್ಕಳು ನನ್ನ ಬಗ್ಗೆ ತಿಳಿದು ಕೊಳ್ಳಲು ಬಯಸುತ್ತಾರೆ ಎಂಬುದು ಮನಸ್ಸಿಗೆ ತುಂಬಾ ಸಂತಸ ತಂದಿದೆ.’ ನಾವು ಇತರರ ಯಶಸ್ಸಿನ ಜೀವನಕ್ಕೆ ದಾರಿದೀಪವಾಗಬೇಕೆಂದು ಕೊಹ್ಲಿಯ ಆಶಯ.
*ನಾನು ಸದಾ ನನ್ನ ಕೆಲಸದ ಗುಣಮಟ್ಟ ಸುಧಾರಿಸಲು ಬಯಸುತ್ತೇನೆ, ಅದೇ ನನ್ನ ಯಶಸ್ಸಿನ ಮಂತ್ರ.
*ಯಶಸ್ಸಿನ ಹಾದಿ ತಲು ಪಲು ಯಾವುದೇ ಅಡ್ಡ ದಾರಿಗಳಿಲ್ಲ.
*ನಾನು ಒತ್ತಡದಲ್ಲಿ ಆಡಲು ಬಯಸುತ್ತೇನೆ, ಪಂದ್ಯದಲ್ಲಿ ಒತ್ತಡವಿಲ್ಲದಿದ್ದರೆ ನನ್ನಿಂದ ಉತ್ತಮ ಆಟ ಹೊರಬರಲು ಸಾಧ್ಯವಾಗುವುದಿಲ್ಲ.
*ಒಬ್ಬ ಕ್ರಿಕೆಟಿಗ (ಬ್ಯಾಟರ್) ನಿಗೆ ಬ್ಯಾಟ್ ಕೇವಲ ಬೊಂಬೆಯಲ್ಲ, ಬದಲಿಗೆ ಅದೊಂದು ಅಸ್ತ್ರವಾಗಿದ್ದು, ಈ ರಂಗದಲ್ಲಿ ಅದು ನಿಮಗೆ ಸರ್ವಸ್ವವೂ ಆಗಿದ್ದು, ಭವಿಷ್ಯದಲ್ಲಿ ಉತ್ತುಂಗಕ್ಕೆ ಕರೆದೊಯ್ಯಲು ರಹದಾರಿಯಾಗಿದೆ.
*ನಿತ್ಯ ಕಲಿಕೆಯಲ್ಲಿ ನಿರತ ರಾಗಿರಿ, ಅಲ್ಲದೆ ಪ್ರತಿಕ್ಷಣ ನಿಮ ಆಟವನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಿ ಎಂದು ವಿರಾಟ್ ಕೊಹ್ಲಿ ಯುವ ಕ್ರಿಕೆಟಿಗರಿಗೆ ಸಲಹೆ ನೀಡಿದ್ದಾರೆ.
ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಇದುವರೆಗೂ 566 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 52.86ರ ಸರಾಸರಿಯಲ್ಲಿ 28,601 ರನ್ ಗಳಿಸಿದ್ದು, 86 ಶತಕ, 149 ಅರ್ಧಶತಕ ಸಿಡಿಸಿದ್ದಾರೆ.
ನ್ಯೂಜಿಲೆಂಡ್ ಪ್ರವಾಸದ ಲ್ಲಿರುವ ವಿರಾಟ್ಕೊಹ್ಲಿ ಟೀಮ್ ಇಂಡಿಯಾ ಆಟಗಾರರೊಂದಿಗೆ ತಮ 38ನೇ ಹುಟ್ಟುಹಬ್ಬ ಆಚರಿಸಿದ್ದು, ಸಚಿನ್ ತೆಂಡೂ ಲ್ಕರ್, ಎಬಿಡಿವಿಲಿಯರ್ಸ್, ಕ್ರಿಸ್ಗೇಲ್ ಸೇರಿದಂತೆ ಹಲವು ವಿಶ್ವಶ್ರೇಷ್ಠ ಕ್ರಿಕೆಟಿಗರು ಚಿಕುಗೆ ಜನದಿನದ ಶುಭಾಶಯ ಕೋರಿದ್ದಾರೆ.
