Homeರಾಷ್ಟ್ರೀಯರಾಜಸ್ಥಾನದ ಬಿಜೆಪಿ ಶಾಸಕ ಜಸ್ವಂತ್‌ ಯಾದವ್‌ ನಿಧನ

ರಾಜಸ್ಥಾನದ ಬಿಜೆಪಿ ಶಾಸಕ ಜಸ್ವಂತ್‌ ಯಾದವ್‌ ನಿಧನ

ಜೈಪುರ, ನ.8 -ರಾಜಸ್ಥಾನದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಜಸ್ವಂತ್‌ ಯಾದವ್‌ (73)ಅವರು ದೀರ್ಘಕಾಲದ ಅನಾರೋಗ್ಯದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದ ಅವರು ಜೈಪುರದಲ್ಲಿ ಬೆಳಗ್ಗೆ 8.15ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪುತ್ರ ಮೋಹಿತ್‌ ಯಾದವ್‌ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ತಮ ತಂದೆಯನ್ನು ಮಹಾನ್‌ ವ್ಯಕ್ತಿತ್ವದವರು ಎಂದು ಬಣ್ಣಿಸಿರುವ ಅವರು, ಅವರ ಪ್ರೀತಿ, ಸರಳತೆ ಹಾಗೂ ಸಮಾಜದ ಬಗೆಗಿನ ಬದ್ಧತೆ ಸದಾ ಜನರ ನೆನಪಿನಲ್ಲಿ ಉಳಿಯಲಿದೆ ಎಂದು ಹೇಳಿದ್ದಾರೆ. ಜಸ್ವಂತ್‌ ಯಾದವ್‌ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

2016ರಿಂದ 2018ರವರೆಗೆ ವಸುಂಧರಾ ರಾಜೆ ನೇತೃತ್ವದ ರಾಜಸ್ಥಾನ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.1998ರಲ್ಲಿ ಮುಂಡಾವರ್‌ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆಲ್ಲುವ ಮೂಲಕ ರಾಜಕೀಯ ಜೀವನ ಆರಂಭಿಸಿದ್ದರು. ನಂತರ 1999ರಲ್ಲಿ ಅಲ್ವಾರ್‌ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ಅವರ ನಿಧನದಿಂದ ರಾಜಸ್ಥಾನ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ 199ಕ್ಕೆ ಇಳಿಕೆಯಾಗಿದೆ. ಬೆಹ್ರೋರ್‌ ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ಆರು ತಿಂಗಳೊಳಗೆ ಉಪಚುನಾವಣೆ ನಡೆಯುವ ನಿರೀಕ್ಷೆಯಿದೆ.

ಕುಟುಂಬದವರ ಮಾಹಿತಿಯ ಪ್ರಕಾರ, ಸಂಜೆ 4 ಗಂಟೆಯ ನಂತರ ಅಲ್ವಾರ್‌ನ ಜಸ್ವಂತ್‌ ನಗರದಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇರಿಸಲಾಗುತ್ತದೆ.ಸೋಮವಾರ ಮಧ್ಯಾಹ್ನ 3 ಗಂಟೆಗೆ ಖೈರ್ತಲ್‌‍-ತಿಜಾರಾ ಜಿಲ್ಲೆಯ ಅವರ ಸ್ವಗ್ರಾಮ ಶಿಲ್ಪಾಟಾದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

RELATED ARTICLES

Latest News