ಬೆಂಗಳೂರು, ನ.11- ಸಿಲಿಕಾನ್ ಸಿಟಿಯ ಬಹುನಿರೀಕ್ಷಿತ ಮೆಟ್ರೋ ಆರೆಂಜ್ ಲೈನ್ಗೂ ಆರು ತಿಂಗಳಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಇಂದಿಲ್ಲಿ ಮಾಹಿತಿ ನೀಡಿದರು. ಜೆಪಿ ನಗರ 4 ನೇ ಹಂತದಿಂದ ಹೆಬ್ಬಾಳ ತಲುಪಲಿರುವ ಆರೆಂಜ್ ಲೈನ್ಗೆ ಇನ್ನು ಆರು ತಿಂಗಳಿನಲ್ಲಿ ಗುದ್ದಲಿ ಪೂಜೆ ಮಾಡಲಿದ್ದೇವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಇಂದು ಮಾಹಿತಿ ಹಂಚಿಕೊಂಡರು.
ಮೆಟ್ರೋ ಯೋಜನೆಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ 50:50 ಬಂಡವಾಳ ಹೂಡಿಕೆ ಅಂತ ಕೇವಲ ಹೇಳಿಕೊಳ್ಳಲು ಮಾತ್ರ ಇದೆ. ಆದರೆ, ಎಂಬತ್ತೊಂದು ಪರ್ಸೆಂಟ್ ಬಂಡವಾಳ ರಾಜ್ಯ ಸರ್ಕಾರ ಭರಿಸುತ್ತಿದೆ.ಇದಲ್ಲದೇ ರಾಜ್ಯ ಸರ್ಕಾರ ಮೆಟ್ರೋದಲ್ಲಿ ಆಗುವ ನಷ್ಟವನ್ನು ಕೂಡಾ ಭರಿಸಬೇಕಿದೆ ಎಂದರು.
ಈ ಅನುಪಾತ ತಾರತಮ್ಯ ವನ್ನು ಸರಿಪಡಿಸಬೇಕು. ನಗರಕ್ಕೆ ನಾನಾ ಭಾಗಗಳಿಂದ ಬಂದ ಕಂಪನಿಗಳಿಗೆ ಆಶ್ರಯ ತಾಣಇಲ್ಲಿ ಸಾಕಷ್ಟು ಬಂಡವಾಳ ಹೂಡಿಕೆ ಆಗ್ತಿದೆ, ಲಾಭ. ಕೂಡಾ ಬರುತ್ತೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಮೆಟ್ರೋಗಾಗಿ ಕೇಂದ್ರ ಸರ್ಕಾರ ಇನ್ನಷ್ಟು ಬಂಡವಾಳ ಹೂಡಿಕೆ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.
ನಮ ಮೆಟ್ರೋ ಪಿಂಕ್ ಲೈನ್ ನ.13 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿದೆ. ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ತಿಳಿಸಿದರು.
ಮೆಟ್ರೋ ಉದ್ಘಾಟನೆಗೆ ನಗರಕ್ಕೆ ಬರುವ ಪ್ರಧಾನಿ ಮೋದಿ ಅವರೊಂದಿಗೆ ಮೆಟ್ರೋದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಿಕೊಳ್ಳಲು ನಾವು ತೀರ್ಮಾನಿಸಿದ್ದೇವೆ ಎಂದು ಅವರು ಹೇಳಿದರು.
ಸುಮಾರು 7.5 ಕಿ ಮೀ ಎಲಿವೇಟೆಡ್ ಮಾರ್ಗ ಹೊಂದಿರುವ ಪಿಂಕ್ ಲೈನ್ ನ.13 ರಂದು ಪ್ರಧಾನಿಗಳು, ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯಪಾಲರಾದ ಸುಧಾ ಯಾದವ್ ಸಮ್ಮುಖದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.
ಮೈಲಿಗಲ್ಲು; ನ. 14ರಿಂದ ಸಾರ್ವಜನಿಕರ ಉಪಯೋಗಕ್ಕೆ ಪಿಂಕ್ಲೈನ್ ಲಭ್ಯವಾಗಲಿದೆ. ಬೆಳಿಗ್ಗೆ 6 ಗಂಟೆಯಿಂದ ಕಾರ್ಯಾರಂಭ ಮಾಡುವ ಈ ಲೈನ್ ಕಾಳೇನ ಅಗ್ರಹಾರದಿಂದ ಜಯದೇವ ಬಳಿ ಎಲೆಕ್ಟ್ರಾನಿಕ್ ಸಿಟಿಗೆ ಇಂಟರ್ ಸೆಕ್ಷನ್ ಇರೋದ್ರಿಂದ ಅನುಕೂಲವಾಗಲಿದೆ ಎಂದರು.
