Homeರಾಜ್ಯಅತ್ತೆ ಆಸ್ತಿಗಾಗಿ ಏಳು ಮಂದಿಯನ್ನು ಕೊಂದ ನರಹಂತಕ ಇಂದುಶೇಖರ

ಅತ್ತೆ ಆಸ್ತಿಗಾಗಿ ಏಳು ಮಂದಿಯನ್ನು ಕೊಂದ ನರಹಂತಕ ಇಂದುಶೇಖರ

ಬೆಂಗಳೂರು,ನ.12-ಅತ್ತೆ ಮನೆಯ ಕೋಟ್ಯಾಂತರ ರೂ. ಬೆಲೆಯ ಆಸ್ತಿಗಾಗಿ ನರಹಂತಕ ಇಂದುಶೇಖರ ಏಳು ಕೊಲೆಗಳನ್ನು ಮಾಡಿದ್ದಾನೆ ಎಂದು ಶಂಕಿಸಿರುವ ರಾಜಾಜಿನಗರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪತ್ನಿ ಮತ್ತು ಅವರ ಕುಟುಂಬದವರು ನೀಡುತ್ತಿದ್ದ ಮಾನಸಿಕ ಕಿರುಕುಳ, ಹಿಂಸೆ ತಾಳಲಾರದೇ ಅವರುಗಳನ್ನು ಮನೆಗೆ ಕರೆಸಿಕೊಂಡು ಕೊಲೆ ಮಾಡಿರುವುದಾಗಿ ಆರೋಪಿ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾನೆಂದು ತಿಳಿದು ಬಂದಿದೆ.

ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ನಗರ ಪೊಲೀಸ್‌‍ ಕಮಿಷನರ್‌ ಸೀಮಂತ್‌ಕುಮಾರ್‌ ಸಿಂಗ್‌ ಅವರು ವೈಯಕ್ತಕ ಮಾತ್ರವಲ್ಲದೇ ಹಣಕಾಸು ವಿಚಾರದಲ್ಲೂ ಕೊಲೆ ಮಾಡಿರುವ ಬಗ್ಗೆ ಮಾಹಿತಿಗಳು ಬರುತ್ತಿವೆ ಎಂದು ಹೇಳಿದ್ದಾರೆ.ಈ ಎಲ್ಲಾ ದೃಷ್ಟಿಕೋನಗಳಲ್ಲಿ ತನಿಖಾ ತಂಡಗಳು ಕಾರ್ಯಾಚರಣೆ ಕೈಗೊಂಡಿವೆ.

ಶ್ರೀರಾಮಪುರದಲ್ಲಿ ಅಜ್ಜಿಗೆ ಸೇರಿದ ಮೂರರಿಂದ ನಾಲ್ಕು ಕೋಟಿ ಬೆಲೆಯ ಆಸ್ತಿ ಇದೆ. ಅತ್ತೆ, ಮಾವಂದಿರು ಇದ್ದರೆ ಆ ಆಸ್ತಿಯಲ್ಲಿ ಅವರಿಗೂ ಪಾಲು ಕೊಡಬೇಕಾಗುತ್ತದೆ. ಎಲ್ಲರನ್ನೂ ಮುಗಿಸಿಬಿಟ್ಟರೆ ಯಾರಿಗೂ ಪಾಲು ಕೊಡುವಂತಿರುವುದಿಲ್ಲ. ಒಟ್ಟಿಗೆ ಆಸ್ತಿ ನಮಗೆ ಸೇರುತ್ತದೆ ಎಂದು ಇಂದುಶೇಖರ ತನ್ನ ಮಗಳಿಗೆ ಬ್ರೈನ್‌ವಾಷ್‌ ಮಾಡಿದ್ದಾನೆಂಬುವುದು ಸಹ ಪೊಲೀಸರ ತನಿಖೆಯಿಂದ ತಿಳುದುಬಂದಿದೆ.

ಅಪ್ಪನ ಮಾತು ನಂಬಿದ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಮಗಳು ಈ ಎಲ್ಲಾ ಕೊಲೆಗಳಲ್ಲಿ ಕೈ ಜೋಡಿಸಿದ್ದಾಳೆ ಎಂಬುವುದು ಸಹ ತನಿಖೆ ಸಂದರ್ಭದಲ್ಲಿ ಕಂಡು ಬಂದಿದೆ.ಈ ಹಿನ್ನಲೆಯಲ್ಲಿ ಪೊಲೀಸರು ಅಪ್ಪ, ಮಗಳಿಬ್ಬರನ್ನೂ ಒಟ್ಟಿಗೆ ಕೂರಿಸಿ ವಿಚಾರಣೆ ನಡೆಸುತ್ತಿದ್ದಾರೆ. ಶವಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ನೀಡಿದ ನಂತರ ಆರೋಪಿ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಖರೀದಿಸಿದ್ದ ಸ್ಥಳಗಳಲ್ಲಿ ಮಹಜರು ಸಹ ನಡೆಸಿ ಸಾಕ್ಷ್ಯಾಧಾರಗಳನ್ನು ತನಿಖಾ ತಂಡಗಳು ಕಲೆ ಹಾಕಿವೆ.

RELATED ARTICLES

Latest News