Homeಬೆಂಗಳೂರುಬೆಂಗಳೂರಲ್ಲಿ ಫ್ಲೈಓವರ್‌ ಮೇಲೆ ಮಧ್ಯರಾತ್ರಿ 'ವ್ಹೀಲಿಂಗ್‌ ರಾಕ್ಷಸರ' ದರ್ಬಾರ್, ನಿದ್ದೆಗೆ ಜಾರಿದ ಪೊಲೀಸರು

ಬೆಂಗಳೂರಲ್ಲಿ ಫ್ಲೈಓವರ್‌ ಮೇಲೆ ಮಧ್ಯರಾತ್ರಿ ‘ವ್ಹೀಲಿಂಗ್‌ ರಾಕ್ಷಸರ’ ದರ್ಬಾರ್, ನಿದ್ದೆಗೆ ಜಾರಿದ ಪೊಲೀಸರು

ಬೆಂಗಳೂರು,ನ.16- ವಾರಾಂತ್ಯದ ದಿನಗಳಲ್ಲಿ ಪೊಲೀಸರ ಭಯವಿಲ್ಲದೆ ಪುಂಡರ ಗುಂಪೊಂದು ವ್ಹೀಲಿಂಗ್‌ ಮಾಡಿ ಹುಚ್ಚಾಟ ಮೆರೆದಿದೆ.ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರೂ ಅವರ ಭಯವಿಲ್ಲದೆ ಯುವಕರ ಗುಂಪು ರಸ್ತೆಮಧ್ಯೆ ರಾಜಾರೋಷವಾಗಿ ವ್ಹೀಲಿಂಗ್‌ ಮಾಡಿದ್ದಾರೆ. ಚಿಕ್ಕಬಿದಿರಕಲ್ಲು ಫ್ಲೈಓವರ್‌ ಮೇಲೆ ನಂಬರ್‌ ಪ್ಲೇಟ್‌ ಇಲ್ಲದ ಬೈಕ್‌ಗಳನ್ನು ತೆಗೆದುಕೊಂಡು ಬಂದು ವ್ಹೀಲಿಂಗ್‌ ಮಾಡಿರುವುದು ಕಂಡುಬಂದಿದೆ.

ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಜಾರೋಷವಾಗಿ ಗುಂಪೊಂದು ರಾತ್ರಿಯಿಡೀ ವ್ಹೀಲಿಂಗ್‌ ಮಾಡಿ ಹುಚ್ಚಾಟ ಮೆರೆದಿದ್ದಾರೆ.ಹೈವೇಯಲ್ಲಿ ಸಂಚರಿಸುತ್ತಿದ್ದ 20ಕ್ಕೂ ಹೆಚ್ಚು ಬೈಕ್‌ಗಳು, ಸ್ಕೂಟರ್‌ ಹಾಗೂ ಒಂದು ಕಾರನ್ನು ನಿಲ್ಲಿಸಿ ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೂ ವ್ಹೀಲಿಂಗ್‌ ಮಾಡಿರುವ ಪುಂಡರ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

21 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ತಮ ಪ್ರಾಣದ ಹಂಗನ್ನು ಲೆಕ್ಕಿಸದೆ ಹಾಗೂ ಇತರರ ಪ್ರಾಣಕ್ಕೆ ಸಂಚಕಾರವೆಂಬಂತೆ ವ್ಹೀಲಿಂಗ್‌ ಮಾಡಿರುವುದು ಕಂಡುಬಂದಿದೆ.ಸ್ಕೂಟರ್‌ ಮತ್ತು ಬೈಕ್‌ಗಳಲ್ಲಿ ಸೈಲೆನ್ಸರ್‌ ಸಂಪರ್ಕ ತೆಗೆದುಕೊಂಡು ಬಂದು ವ್ಹೀಲಿಂಗ್‌ಗೆ ಬಳಸಿಕೊಂಡಿದ್ದಾರೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ವ್ಹೀಲಿಂಗ್‌ಗೆ ಸಂಪೂರ್ಣ ಕಡಿವಾಣ ಹಾಕಬೇಕೆಂಬ ಒತ್ತಾಯ ಕೇಳಿಬಂದಿದೆ.

RELATED ARTICLES

Latest News