ಬೆಂಗಳೂರು,ನ.20- ದಂಪತಿ ನೇಣಿಗೆ ಶರಣಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುದೋಳು ತಾಲ್ಲೂಕಿನ ಕುಳಲಿ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ. ಕುಳಲಿ ಗ್ರಾಮದ ಅಪ್ಪಾಶಿ ನಡುವಿನಮನಿ(35) ಮತ್ತು ಅವರ ಪತ್ನಿ ರಾಜೇಶ್ವರಿ ಅಲಿಯಾಸ್ ವಿದ್ಯಾಶ್ರೀ(30) ಆತಹತ್ಯೆ ಮಾಡಿಕೊಂಡ ದಂಪತಿ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೇಸತ್ತು ಇಂದು ಮುಂಜಾನೆ ಅಪ್ಪಾಶಿ ಮೊದಲು ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ.ಪತಿ ನೇಣಿಗೆ ಶರಣಾಗಿರುವುದನ್ನು ನೋಡಿದ ಪತ್ನಿ ಆಘಾತಕ್ಕೊಳಗಾಗಿ ಕೋಣೆಗೆ ಹೋಗಿ ತಾನೂ ನೇಣು ಹಾಕಿಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ.
ಅಕ್ಕಪಕ್ಕದವರು ಬಂದು ನೋಡಲಾಗಿ ದಂಪತಿ ಆತಹತ್ಯೆ ಬೆಳಕಿಗೆ ಬಂದಿದೆ. ದಂಪತಿ ಆತಹತ್ಯೆಯಿಂದ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಅನಾಥರಾಗಿದ್ದಾರೆ. ಸುದ್ದಿ ತಿಳಿದ ಮುದೋಳು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
