ಬೆಂಗಳೂರು,ನ.20- ಕಾವೇರಿ ನದಿ ನೀರು ಹಂಚಿಕೆಯಲ್ಲಿ ತಮಿಳುನಾಡಿಗೆ ಹಿನ್ನಡೆಯಾಗಿದೆ ಎಂದು ಹೇಳುವುದಿಲ್ಲ. ವಾಸ್ತವವಾದ ನ್ಯಾಯ ಸುಪ್ರೀಂಕೋರ್ಟ್‌ನಲ್ಲಿ ಸಿಕ್ಕಿದೆ ಎಂದು ಜಲಸಂಪನೂಲ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ರಾಜ್ಯದ ಪರವಾಗಿ ನಮ ವಕೀಲರು ಸಮರ್ಥವಾದ ವಾದ ಮಂಡಿಸಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ನ್ಯಾಯಾಲಯದ ತೀರ್ಪು ವಾಸ್ತವಿಕವಾಗಿದೆ ಎಂದರು.
ಸಿಡಬ್ಲ್ಯೂಆರ್‌ಸಿ ಇಂದೂ ಕೂಡ 2 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶಿಸಿದೆ. 1 ಸಾವಿರ ಕ್ಯೂಸೆಕ್ಸ್ ಗೆ ನೀರು ಬಿಡುವಂತೆ ಆದೇಶಿಸಿದ್ದರೆ ಸಾಕಾಗುತ್ತಿತ್ತು. ಸಿಡಬ್ಲ್ಯೂಆರ್‌ಸಿ ಮತ್ತು ಸಿಡಬ್ಲ್ಯೂಎಂಎ ಆದೇಶಗಳಲ್ಲಿ ಸಮತೋಲನ ಕಂಡುಬಂದಿದೆ. 2-3 ಬಾರಿ ರಾಜ್ಯಕ್ಕೆ ಜಾಸ್ತಿಯಾಗಿತ್ತು ಎಂದು ಹೇಳಿದರು.
ತಮಿಳುನಾಡಿನವರು ನಮಗೆ ಕಡಿಮೆಯಾಯಿತು ಎಂದು ಹೇಳುತ್ತಿರುತ್ತಾರೆ. ನಾವು ನಿಮಗೆ ಜಾಸ್ತಿಯಾಯಿತು ಎಂದು ಹೇಳುತ್ತಿರುತ್ತೇವೆ. 15 ದಿನಗಳಿಗೊಮೆ ಸಭೆ ಸೇರಿ ಎರಡೂ ರಾಜ್ಯಗಳ ನೀರಿನ ಸಂಗ್ರಹದ ವಸ್ತುಸ್ಥಿತಿಯ ಆಧಾರದ ಮೇಲೆ ಸಿಡಬ್ಲ್ಯೂಆರ್‌ಸಿ ಮತ್ತು ಸಿಡಬ್ಲ್ಯೂಎಂಎ ನಿರ್ಧಾರ ಕೈಗೊಳ್ಳುತ್ತವೆ ಎಂದರು.
ಮಳೆ ಕೊರತೆಯಿಂದ ಬರಪರಿಸ್ಥಿತಿ ಉಂಟಾಗಿದ್ದು, ಸಂಕಷ್ಟ ಪರಿಸ್ಥಿತಿಯನ್ನು ರೈತರಿಗೆ ಮನವರಿಕೆ ಮಾಡಿಕೊಡಲಾಗಿದೆ. ನಮಗೂ ಕುಡಿಯುವ ನೀರನ್ನು ಪೂರೈಸಲು ನೀರಿನ ಅಗತ್ಯವಿದೆ. ಶಾಸಕ ಸಂತನಗೌಡ ಅವರೊಂದಿಗೆ ಸಮಾಲೋಚನೆ ನಡೆಸಿ ಅಸಮಾಧಾನವನ್ನು ನಿವಾರಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದಾಗಿನಿಂದಲೂ ಒಂದು ದಿನವೂ ಕೇಂದ್ರ ಸಚಿವ ಕುಮಾರಸ್ವಾಮಿ ನಿದ್ರೆ ಮಾಡಿದಂತಿಲ್ಲ ಎಂದು ಚೆಲುವರಾಯಸ್ವಾಮಿ ವ್ಯಂಗ್ಯವಾಡಿದರು
