Homeಬೆಂಗಳೂರುಬೆಂಗಳೂರಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಆಯುಕ್ತ ಆರ್‌.ಹಿತೇಂದ್ರ ಆದೇಶ

ಬೆಂಗಳೂರಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಆಯುಕ್ತ ಆರ್‌.ಹಿತೇಂದ್ರ ಆದೇಶ

ಬೆಂಗಳೂರು,ನ.21- ನಗರದಲ್ಲಿ ಸಂಚಾರದಟ್ಟಣೆಯನ್ನು ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ನಗರದ ಮುಖ್ಯ ಪೊಲೀಸ್‌‍ ಆಯುಕ್ತರಾದ ಆರ್‌.ಹಿತೇಂದ್ರ ಅವರು ಆದೇಶಿಸಿದ್ದಾರೆ.

ಟಿಎಂಸಿಯಲ್ಲಿ ಇಂದು ಸಂಚಾರ ವಿಭಾಗದ ಅಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಎಲ್ಲಿ ಹೋದರೂ ಬೆಂಗಳೂರು ನಗರ ಸಂಚಾರದಟ್ಟಣೆ ಬಗ್ಗೆ ಮಾತನಾಡುತ್ತಾರೆ. ಮತ್ತು ಇದರ ಬಗ್ಗೆ ಟೀಕೆಗಳು ಬರುತ್ತಿವೆ ಎಂದು ತಿಳಿಸಿದರು.

ಆದುದರಿಂದ ನೀವು ಎಚ್ಚೆತ್ತುಕೊಂಡು ವಾಹನಗಳು ಸುಲಭವಾಗಿ ಓಡಾಡುವಂತೆ ಅವಕಾಶ ಮಾಡಿಕೊಡಬೇಕು. ಎಲ್ಲಾ ಎಸಿಪಿಗಳು, ಇನ್ಸ್ ಪೆಕ್ಟರ್‌ಗಳು ಮತ್ತು ಸಿಬ್ಬಂದಿಗಳು ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ತಾಕೀತು ಮಾಡಿದರು. ಡಿಸಿಪಿಗಳೂ ಸಹ ಗಸ್ತಿನಲ್ಲಿದ್ದು, ಕಿರಿಯ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಬೇಕು.

ಫುಟ್‌ಪಾತ್‌ ಮೇಲೆ ವಾಹನ ಚಲಾಯಿಸುವವರ ವಿರುದ್ಧ ಹಾಗೂ ಸಂಚಾರ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ. ಗಣ್ಯವ್ಯಕ್ತಿಗಳು ಹೋಗುವಾಗ ಯಾವುದೇ ಸಂಚಾರ ಅಸ್ತವ್ಯಸ್ತವಾಗಬಾರದು, ಅದೇ ರೀತಿ ಸಾರ್ವಜನಿಕರಿಗೂ ತೊಂದರೆಯಾಗದ ರೀತಿ ಸಂಚಾರ ನಿಯಂತ್ರಿಸುವಂತೆ ಹಿತೇಂದ್ರ ಅವರು ಹೇಳಿದ್ದಾರೆ ಎಂದು ಗೊತ್ತಾಗಿದೆ.

RELATED ARTICLES

Latest News