Homeರಾಜ್ಯಸ್ಟಿಂಗ್‌ ಪ್ರಕರಣ : ಕೃಪಾ ಆಳ್ವಾ ಸೇರಿ ಆರು ಮಂದಿಗೆ ಬಂಧನ ಭೀತಿ

ಸ್ಟಿಂಗ್‌ ಪ್ರಕರಣ : ಕೃಪಾ ಆಳ್ವಾ ಸೇರಿ ಆರು ಮಂದಿಗೆ ಬಂಧನ ಭೀತಿ

ಬೆಂಗಳೂರು,ನ.21-ಸ್ಟಿಂಗ್‌ ಆಪರೇಷನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌‍ ಮಾಜಿ ನಾಯಕಿ ಕೃಪಾ ಆಳ್ವಾ ಸೇರಿ ಆರು ಮಂದಿಗೆ ಬಂಧನ ಭೀತಿ ಎದುರಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್‌ ಆಪರೇಷನ್‌ ಪ್ರಕರಣದಲ್ಲಿ ತನಿಖೆಯ ಭಾಗವಾಗಿ ಕೃಪಾ ಆಳ್ವಾ ಅವರು ತಮ ಮೊಬೈಲ್‌ಗಳನ್ನು ತನಿಖಾಧಿಕಾರಿಗಳಿಗೆ ಹಸ್ತಾಂತರಿಸಲು ಹಿಂದೇಟು ಹಾಕಿದ್ದರು.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಈ ಹಿಂದೆ ಕೃಪಾ ಆಳ್ವಾ ಹಾಗೂ ಪ್ರಜ್ವಲ್‌ ಪ್ರಸಾದ್‌ , ಚಂದನ್‌,ಪ್ರಶಾಂತ್‌ಕುಮಾರ್‌ ಹಾಗೂ ವಿನೋದ್‌ ಕುಮಾರ್‌ ಅವರುಗಳನ್ನು ವಿಚಾರಣೆಗೆ ಒಳಪಡಿಸಿದ್ದ ವೇಳೆ ಸಮರ್ಪಕವಾಗಿ ಉತ್ತರಿಸದೇ ನುಣುಚಿಕೊಂಡಿದ್ದರು.

ಈ ನಡುವೆ ಕೃಪಾ ಆಳ್ವಾ ಸೇರಿದಂತೆ ಆರು ಮಂದಿ ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಜಾಗೊಳಿಸಿ ನಗರದ 66ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲ ಆದೇಶಿಸಿದೆ.

ಜಾಮೀನು ತಿರಸ್ಕೃತಗೊಂಡಿರುವ ಹಿನ್ನಲೆಯಲ್ಲಿ ಇದೀಗ ಇವರುಗಳಿಗೆ ಬಂಧನ ಭೀತಿ ಎದುರಾಗಿದೆ. ಈ ನಡುವೆ ಬಂಧನದಿಂದ ಪಾರಾಗಲು ಆರೋಪಿಗಳು ಹೈಕೋರ್ಟ್‌ ಮೆಟ್ಟಿಲೇರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Latest News