Homeರಾಜ್ಯಮತ್ತೆ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ, ಬೆಳ್ಳಿ ದರ ಸ್ಥಿರ

ಮತ್ತೆ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ, ಬೆಳ್ಳಿ ದರ ಸ್ಥಿರ

ಬೆಂಗಳೂರು,ನ.24-ಕಳೆದ ಒಂದು ವಾರದಿಂದ ನಿರಂತರ ಕುಸಿತವಾಗಿದ್ದ ಚಿನ್ನದ ದರದಲ್ಲಿ ನಿನ್ನೆಯಿಂದ ಏರಿಕೆಯಾಗುತ್ತಿದೆ. ಸತತ ಎರಡನೇ ದಿನವೂ ಚಿನ್ನ ಅಲ್ಪ ಪ್ರಮಾಣದಲ್ಲಿ ಚೇತರಿಕೆಯಾಗಿರುವುದು ಕಂಗಾಲಾಗಿದ್ದ ವರ್ತಕರಿಗೆ ತುಸು ಸಮಾಧಾನ ತಂದಿದೆ. ಆದರೆ, ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲದೆ ಸ್ಥಿರವಾಗಿದೆ. ಕಳೆದ ಎರಡು ವಾರಗಳಲ್ಲಿ ಶುದ್ಧ ಚಿನ್ನದ ದರ ಒಂದು ಗ್ರಾಂಗೆ 2 ಸಾವಿರ ರೂ.ಗೂ ಹೆಚ್ಚು ಕುಸಿತವಾಗಿತ್ತು.

ನ.10 ರ ನಂತರ ಮೂರು ವಾರಗಳ ಕಾಲ ಸತತ ಇಳಿಕೆಯಾಗಿ ದಾಖಲೆ ಪ್ರಮಾಣದಲ್ಲಿ ಕುಸಿತವಾಗಿ ಆಭರಣ ಪ್ರಿಯರು ಖುಷಿ ಪಡುವಂತಾಗಿತ್ತು. ಆದರೆ, ಆಭರಣ ಮಾರಾಟಗಾರರಿಗೆ ಬೆಲೆ ಕುಸಿತ ಕಂಗಾಲಾಗುವಂತೆ ಮಾಡಿತ್ತು.

ಒಂದೆಡೆ ಆಹಾರಧಾನ್ಯ ಸೇರಿದಂತೆ ನಿತ್ಯ ಬಳಕೆಯ ಅಗತ್ಯ ವಸ್ತುಗಳು ಗಗನಮುಖಿಯಾಗಿ ಗ್ರಾಹರಿಗೆ ಹೊರೆಯಾಗಿದ್ದರೆ, ಚಿನ್ನ, ಬೆಳ್ಳಿ ದರಗಳ ಕುಸಿತ ಶ್ರೀಸಾಮಾನ್ಯರಿಗೆ ಸಮಾಧಾನ ಪಡುವಂತಾಗಿತ್ತು. ನ.14ರಂದು ಒಮೆ ಮಾತ್ರ ಕೇವಲ 27 ರೂ. ಏರಿಕೆಯಾಗಿತ್ತು.

ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ, ಇಂದು ಬೆಳಿಗ್ಗೆ 24 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ ಇಂದು 148 ರೂ. ಏರಿಕೆಯಾಗಿದ್ದು, ಪ್ರಸ್ತುತ 12,656ರೂ.ನಷ್ಟಿದೆ. 22 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 135 ರೂ. ಹೆಚ್ಚಳವಾಗಿದ್ದು, 11,600 ರೂ.ನಷ್ಟಿದೆ. 18 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 110 ರೂ. ಹೆಚ್ಚಾಗಿದ್ದು, ಪ್ರಸ್ತುತ 9,491ರೂ. ನಷ್ಟಿದೆ.

ಕಳೆದ ಆಗಸ್ಟ್‌ ಕೊನೆ ವಾರದಲ್ಲಿ 24 ಕ್ಯಾರೆಟ್‌ನ ಚಿನ್ನ ಒಂದು ಗ್ರಾಂಗೆ 16 ಸಾವಿರ ರೂ.ನಷ್ಟಿತ್ತು. ಅಕ್ಟೋಬರ್‌ನಲ್ಲಿ 15 ಸಾವಿರ ರೂ.ಗೆ ಇಳಿಕೆಯಾಗಿತ್ತು. ನವೆಂಬರ್‌ 5 ರ ನಂತರ ನಿರಂತರ ಇಳಿಕೆಯಾಗುತ್ತಾ ಬಂದಿತ್ತು. ವಾರದ ಮೊದಲ ದಿನವೇ ಚೇತರಿಕೆ ಕಂಡಿದೆ.ಚಿನ್ನದಂತೆ ಪ್ಲಾಟಿನಮ್‌ ಅಭರಣದ ದರವು 10 ಗ್ರಾಂಗೆ 340 ರೂ. ಏರಿಕೆಯಾಗಿದ್ದು, 38,900 ರೂ.ನಷ್ಟಿದೆ.

ಇನ್ನು ಬೆಳ್ಳಿ ದರವು ಕಳೆದ ಎರಡು ವಾರಗಳಲ್ಲಿ 30 ಸಾವಿರ ರೂ. ಕಡಿಮೆಯಾಗಿದ್ದು, ಒಂದು ಕೆಜಿ ಬಳ್ಳಿಗೆ ಪ್ರಸ್ತುತ 1,75,000 ರೂ.ನಷ್ಟಿದೆ. ನ.20ರಿಂದ ಅದೇ ದರ ಮುಂದುವರೆದಿದ್ದು, ಏರಿಳಿತವಿಲ್ಲದೆ ಸ್ಥಿರವಾಗಿದೆ.

RELATED ARTICLES

Latest News