Homeರಾಷ್ಟ್ರೀಯಚೀನಾಗೆ ಸವಾಲಾದ ಭಾರತದ ಶಕ್ತಿ ವಿಸ್ತರಣೆ

ಚೀನಾಗೆ ಸವಾಲಾದ ಭಾರತದ ಶಕ್ತಿ ವಿಸ್ತರಣೆ

ನವದೆಹಲಿ, ನ.24- ರಕ್ಷಣಾ ಜಾಲದಲ್ಲಿ ಮುಂಚೂಣಿಯಲ್ಲಿರುವ ಚೀನಾಗೆ ಸಡ್ಡು ಹೊಡೆಯುವ ಪ್ರಯತ್ನದಲ್ಲಿ ಭಾರತ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ. ಆಗ್ನೇಯ ಏಷ್ಯಾದ ಮೂರು ರಾಷ್ಟ್ರಗಳಾದ ಫಿಲಿಪೈನ್ಸ್ , ವಿಯೆಟ್ನಾಂ ಹಾಗೂ ಇಂಡೋನೇಷ್ಯಾ ರಾಷ್ಟ್ರಗಳು ಭಾರತದಿಂದ ಬ್ರಹೋಸ್‌‍ ಕ್ಷಿಪಣಿ ಖರೀದಿಸಿದ ನಂತರ ಭಾರತ ಚೀನಾದ ಸಾಧನೆ ಸಮೀಪ ಧಾವಿಸುವತ್ತ ದಾಪುಗಾಲು ಇಟ್ಟಿದೆ ಎಂದು ಆಸ್ಟ್ರೇಲಿಯಾದ ಚಿಂತಕರ ಚಾವಡಿಯಾದ ಲೋವಿ ಇನ್‌ಸ್ಟಿಟ್ಯೂಟ್‌ ಪ್ರಕಟಿಸಿದ 2026ರ ಏಷ್ಯಾ ಪವರ್‌ ಇಂಡೆಕ್ಸ್‌‍ನಲ್ಲಿ ಭಾರತ ಈ ಸ್ಥಾನ ಪಡೆದಿವೆ.

2018ರಲ್ಲಿ ಈ ಸೂಚ್ಯಂಕ ಆರಂಭವಾದಾಗಿನಿಂದ, ಭಾರತವು ತನ್ನ ರಕ್ಷಣಾ ಜಾಲಗಳನ್ನು ಮತ್ತು ಸಾಂಸ್ಕೃತಿಕ ಪ್ರಭಾವವನ್ನು ಬಲಪಡಿಸಿಕೊಂಡಿದ್ದು, ಚೀನಾದೊಂದಿಗಿನ ಒಟ್ಟಾರೆ ಶಕ್ತಿಯ ಅಂತರವನ್ನು ಅತ್ಯಂತ ಕನಿಷ್ಠ ಮಟ್ಟಕ್ಕೆ ತಗ್ಗಿಸಿದೆ ಎಂದು ಈ ವರದಿ ತಿಳಿಸಿದೆ.

ಏಷ್ಯಾದ ಶಕ್ತಿ ಸಮೀಕರಣದಲ್ಲಿ ಭಾರತದ ಬದಲಾಗುತ್ತಿರುವ ಸ್ಥಾನಕ್ಕೆ ಈ ವರದಿಯು ಒಂದು ಆಸಕ್ತಿದಾಯಕ ವಿವರಣೆಯನ್ನು ನೀಡುತ್ತದೆ. 2018ರಲ್ಲಿ ಈ ಸೂಚ್ಯಂಕ ಆರಂಭವಾದಾಗಿನಿಂದ, ಒಟ್ಟಾರೆ ಶಕ್ತಿಯ ವಿಷಯದಲ್ಲಿ ಭಾರತವು ಚೀನಾದೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಹತ್ತಿರಕ್ಕೆ ಬಂದಿದೆ. ಆದಾಗ್ಯೂ, ಇದರರ್ಥ ಎರಡೂ ದೇಶಗಳು ಈಗ ಸಮಾನವಾಗಿವೆ ಎಂದಲ್ಲ. ಚೀನಾ 73.6 ಅಂಕಗಳನ್ನು ಹೊಂದಿದ್ದರೆ, ಭಾರತವು 40.5 ಅಂಕಗಳನ್ನು ಹೊಂದಿದೆ; ಅಂದರೆ ಚೀನಾ ಇನ್ನೂ ಸುಮಾರು 80% ರಷ್ಟು ಒಟ್ಟಾರೆ ಶಕ್ತಿಯ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಆಗ್ನೇಯ ಏಷ್ಯಾದೊಂದಿಗೆ ಭಾರತದ ಬೆಳೆಯುತ್ತಿರುವ ರಕ್ಷಣಾ ಸಂಬಂಧಗಳು ಬ್ರಹ್ಮೋಸ್‌‍ ಕ್ಷಿಪಣಿಯಲ್ಲಿ ಪ್ರತಿಬಿಂಬಿತವಾಗಿವೆ. ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದ ಈ ಸೂಪರ್‌ಸಾನಿಕ್‌‍ (ಶಬ್ದಕ್ಕಿಂತ ವೇಗವಾಗಿ ಚಲಿಸುವ) ಕ್ಷಿಪಣಿಯನ್ನು ಈಗ ಈ ಪ್ರದೇಶದ ರಾಷ್ಟ್ರಗಳು ಖರೀದಿಸುತ್ತಿವೆ.

RELATED ARTICLES

Latest News