Homeರಾಜ್ಯಜಪಾನ್‌ ಕನ್ನಡಿಗರೊಂದಿಗೆ ಸಿಎಂ ಸಂವಾದ

ಜಪಾನ್‌ ಕನ್ನಡಿಗರೊಂದಿಗೆ ಸಿಎಂ ಸಂವಾದ

ಒಸಾಕಾ, ನ.24- ಜಪಾನ್‌ನ ನಾಗೋಯಾದಿಂದ ಒಸಾಕಾಗೆ ಶಿಂಕಾನ್ಸೆನ್‌ ಬುಲೆಟ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ರೈಲು ನಿಲ್ದಾಣದಲ್ಲಿ ಜಪಾನ್‌ನಲ್ಲಿ ನೆಲೆಸಿರುವ ಕನ್ನಡಿಗರು ಹಾಗೂ ಅವರ ಕುಟುಂಬದ ಸದಸ್ಯರನ್ನು ಆತೀಯವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಕನ್ನಡಿಗರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡ ಮುಖ್ಯಮಂತ್ರಿಗಳು, ಜಪಾನ್‌ನಲ್ಲಿ ಅವರ ಜೀವನ, ಉದ್ಯೋಗ ಹಾಗೂ ಅನುಭವಗಳ ಕುರಿತು ಮಾಹಿತಿ ಪಡೆದರು. ದೇಶದಲ್ಲಿ ನೆಲೆಸಿದ್ದರೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯೊಂದಿಗೆ ನಂಟು ಉಳಿಸಿಕೊಂಡಿರುವ ಕನ್ನಡಿಗರೊಂದಿಗೆ ಆತೀಯವಾಗಿ ಬೆರೆತರು.

ಇದೇ ವೇಳೆ ಜಪಾನ್‌ನ ಅತ್ಯಂತ ವ್ಯವಸ್ಥಿತ ಶಿಂಕಾನ್ಸೆನ್‌ ರೈಲು ಜಾಲ, ಸುಗಮ ಸಂಪರ್ಕ ವ್ಯವಸ್ಥೆ ಹಾಗೂ ದಕ್ಷ ಸಾರಿಗೆ ಮೂಲಸೌಕರ್ಯವನ್ನು ಮುಖ್ಯಮಂತ್ರಿಗಳು ವೀಕ್ಷಿಸಿ ಮಾಹಿತಿ ಪಡೆದರು.

ಜಪಾನ್‌ನ ಸಾರಿಗೆ ವ್ಯವಸ್ಥೆಯ ಕಾರ್ಯವೈಖರಿ ಕರ್ನಾಟಕದ ನಗರ ಸಾರಿಗೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಅನುಭವ ಹಾಗೂ ಮಾರ್ಗದರ್ಶನ ಒದಗಿಸಲಿದೆ ಎಂದು ಈ ಪ್ರವಾಸದ ಮಹತ್ವವನ್ನು ವಿವರಿಸಲಾಗಿದೆ.

RELATED ARTICLES

Latest News