ಬೆಂಗಳೂರು,ನ.24- ಲಾಡ್ಜ್ ಗೆ ತೆರಳಿದ್ದ ಪ್ರೇಮಿಗಳ ನಡುವೆ ಜಗಳವಾಗಿ ಕೋಪದಲ್ಲಿ ಪ್ರೀಯಸಿಯನ್ನು ಕಟ್ಟಡದಿಂದ ಕೆಳಗೆ ತಳ್ಳಿ ಪ್ರಿಯಕರ ಕೊಲೆ ಮಾಡಿರುವ ಘಟನೆ ಗಂಗಮನ ಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಹಾಸನ ಮೂಲದ ಐಶ್ವರ್ಯ (23) ಕೊಲೆ ಯಾದ ಪ್ರೇಯಸಿ.
ಇವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಐಶ್ವರ್ಯ ಹಾಗೂ ನಗರದ ನಿವಾಸಿ ಸಂತೋಷ್(26) ಪರಸ್ಪರ ಪ್ರೆತಿಸುತ್ತಿದ್ದರು. ಸಂತೋಷ್ ಸಹ ಖಾಸಗಿ ಕಂಪನಿ ಉದ್ಯೋಗಿ. ನ.19ರಂದು ಪ್ರಿಯಕರ ಸಂತೋಷ್ ಜೊತೆ ಐಶ್ವರ್ಯ ನಗರದ ಅಬ್ಬಿಗೆರೆ ವೈವ್ಯ್ಸಾ್ ಸರ್ಕಲ್ನಲ್ಲಿರುವ ಲಾಡ್್ಜಗೆ ಹೋಗಿದ್ದಾರೆ.
ಈ ವೇಳೆ ಇವರಿಬ್ಬರ ನಡುವೆ ಯಾವುದೋ ವಿಚಾರಕ್ಕೆ ಗಲಾಟೆಯಾಗಿದೆ. ಜಗಳ ತಾರಕಕ್ಕೇರಿದಾಗ ಸಂತೋಷ್ ಲಾಡ್ಜ್ ಕಿಟಕಿಯಿಂದ ಐಶ್ವರ್ಯಳನ್ನು ತಳ್ಳಿದ್ದರಿಂದ ಆಕೆ ಮೃತಪಟ್ಟಿದ್ದಾಳೆ. ಆರಂಭದಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಗಂಗಮನ ಗುಡಿ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಐಶ್ವರ್ಯರನ್ನ ಲಾಡ್್ಜ ಕೊಠಡಿಯ ಕಿಟಿಕಿಯಿಂದ ತಳ್ಳಿ ಕೊಲೆ ಮಾಡಿರೋದು ಗೊತ್ತಾಗಿದೆ.
ತಕ್ಷಣ ಆರೋಪಿ ಸಂತೋಷ್ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಾನೇ ಆಕೆಯನ್ನು ತಳ್ಳಿರುವುದಾಗಿ ತಿಳಿಸಿದ್ದಾನೆ. ಪ್ರಾಥಮಿಕ ಮರಣೋತ್ತರ ಪರೀಕ್ಷೆ ವೇಳೆ ಈ ಯುವತಿಯನ್ನು ಕೊಲೆ ಮಾಡಲಾಗಿದೆ ಎಂಬುವುದು ಗೊತ್ತಾಗಿದೆ. ಇದೀಗ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
