ತುಮಕೂರು,ನ.25- ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಬಾಲಕಿಗೆ ಜಪಾನ್‌ನಿಂದಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಡಿಯೋ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಅರಿವೇಸಂದ್ರ ಗ್ರಾಮದ ಐದನೇ ತರಗತಿ ವಿದ್ಯಾರ್ಥಿನಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವಿಷಯ ತಿಳಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಜಪಾನ್ ಪ್ರವಾಸದಲ್ಲಿದ್ದಾಗಲೂ ವಿಡಿಯೋ ಕರೆ ಮಾಡಿ ಬಾಲಕಿ ಹಾಗೂ ಪೋಷಕರಿಗೆ ಧೈರ್ಯ ತುಂಬಿದ್ದಾರೆ.
ಯಾವುದೇ ಕಾರಣಕ್ಕೂ ಆತಸ್ಥೈರ್ಯ ಕಳೆದುಕೊಳ್ಳಬಾರದು. ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಈ ಕಷ್ಟದ ಸಮಯದಲ್ಲಿ ನಿಮೊಂದಿಗೆ ನಾವಿದ್ದೇವೆ. ಎಲ್ಲವೂ ಒಳ್ಳೆಯದಾಗಲಿದೆ. ಭಗವಂತ ಇದ್ದಾನೆ ಎಂದು ಧೈರ್ಯ ಹೇಳಿದರು.
ಜೊತೆಗೆ ತಮನ್ನು ಭೇಟಿಯಾಗಬೇಕೆಂಬ ವಿದ್ಯಾರ್ಥಿನಿಯ ಆಸೆಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಜಪಾನ್ ಪ್ರವಾಸದಿಂದ ಮರಳಿಬಂದ ಬಳಿಕ ಭೇಟಿ ಮಾಡುವುದಾಗಿ ಭರವಸೆ ನೀಡಿದರು. ವಿಚಾರ ತಿಳಿದ ಶಾಸಕ ಎಸ್.ಆರ್.ವಿಶ್ವನಾಥ್ ಬಾಲಕಿಯ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಶಾಸಕರಾದ ಡಾ.ರಂಗನಾಥ್ ಹಾಗೂ ವಿಶ್ವನಾಥ್‌ರವರಿಂದ ಮುಖ್ಯಮಂತ್ರಿಗಳು ಮಾಹಿತಿ ಪಡೆದು ಬಾಲಕಿಗೆ ಜಪಾನ್‌ನಿಂದಲೇ ವಿಡಿಯೋ ಕಾಲ್ ಮಾಡಿ ಮಾತನಾಡಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದರಿಂದ ಬಾಲಕಿ ಹಾಗೂ ಕುಟುಂಬ ಸದಸ್ಯರಲ್ಲಿ ಒಂದು ರೀತಿಯ ಧೈರ್ಯ ಬಂದಿದೆ.
