Homeರಾಜ್ಯಗ್ರಾಮ ಪಂಚಾಯ್ತಿಗಳಿಗೆ ನೀಡಿದ ಅನುದಾನ ದುರುಪಯೋಗ : ಬಿಜೆಪಿ ಆರೋಪ

ಗ್ರಾಮ ಪಂಚಾಯ್ತಿಗಳಿಗೆ ನೀಡಿದ ಅನುದಾನ ದುರುಪಯೋಗ : ಬಿಜೆಪಿ ಆರೋಪ

Misuse of funds given to village panchayats: BJP alleges

ಬೆಂಗಳೂರು,ಜ.19– ಕೇಂದ್ರ ಸರ್ಕಾರವು 15ನೇ ಹಣಕಾಸು ಆಯೋಗದ ಶಿಫಾರಸಿನ ಮೇರೆಗೆ ರಾಜ್ಯದ ವಿವಿಧ ಪಂಚಾಯ್ತಿಗಳಿಗೆ ಬಿಡುಗಡೆಯಾದ ಅನುದಾನದಲ್ಲಿ ಸಾವಿರಾರು ಕೋಟಿ ಹಣ ದುರುಪಯೋಗವಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಜಿ ಶಾಸಕ ಪಿ.ರಾಜೀವ್‌ ಅವರು, 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯದ ಕೆಲವು ಪಂಚಾಯ್ತಿಗಳಿಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಈ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದ್ದು, ಇದೊಂದು ಬಹುದೊಡ್ಡ ಹಗರಣ ಎಂದು ಆರೋಪಿಸಿದರು.

ಹಾವೇರಿ ಜಿಲ್ಲೆಯ ಹಾನಗಲ್‌, ಬೆಳಗಾವಿ ಜಿಲ್ಲೆಯ ರಾಯಭಾಗ, ಕೊಪ್ಪಳ ಸೇರಿದಂತೆಹಲವು ಜಿಲ್ಲೆಗಳಲ್ಲಿ ಹಣವನ್ನುದ ದುರುಪಯೋಗಪಡಿಸಿಕೊಂಡಿದ್ದಾರೆ. ಯಾವುದೋ ಪಂಚಾಯ್ತಿ ಹಣವನ್ನು ಕಾಂಗ್ರೆಸ್‌‍ ಶಾಸಕರಿರುವ ಪಂಚಾಯ್ತಿಗಳಿಗೆ ಬಳಕೆ ಮಾಡಲಾಗಿದೆ ಎಂದು ದೂರಿದರು.
ಒಂದೊಂದು ಪಂಚಾಯ್ತಿಯಲ್ಲಿ 10 ಲಕ್ಷಕ್ಕೂ ಹೆಚ್ಚಿನ ಅನುದಾನವನ್ನು ದುರುಪಯೋಗ ಮಾಡಲಾಗಿದೆ. ಹೈಮಾಸ್ಕ್‌ ಸೇರಿದಂತೆ ಹಲವು ರೀತಿಯ ಯೋಜನೆಗಳಿಗೆ ಅನುದಾನವನ್ನು ಬಳಸಿಕೊಳ್ಳಲಾಗಿದೆ. ನಾನು ಇದನ್ನು ದಾಖಲೆ ಸಮೇತ ಬಹಿರಂಗಪಡಿಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ತೋರಿಕೆಗೆ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಿ ಮತ್ತೆ 6 ತಿಂಗಳ ಬಳಿಕ ಬೇರೆ ಕಡೆ ಕರ್ತವ್ಯಕ್ಕೆ ನಿಯೋಜನೆ ಮಾಡುವುದು ಎಷ್ಟರಮಟ್ಟಿಗೆ ಸರಿ. ಈ ಹಗರಣ ನಡೆಯಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ಸಚಿವ ಪ್ರಿಯಾಂಕ ಖರ್ಗೆ ಕಾರಣಕರ್ತರು. ಇಷ್ಟೆಲ್ಲ ಆರೋಪಗಳಿದ್ದರೂ ಅವರು ಯಾವ ನೈತಿಕತೆಯಲ್ಲಿ ತಮ ಸ್ಥಾನದಲ್ಲಿ ಮುಂದುವರೆಯುತ್ತಾರೆ ಎಂದು ಆರೋಪಿಸಿದರು.

ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕಿನ ಸಂಖ್ಯೆ 24ರ ಗ್ರಾಮ ಪಂಚಾಯ್ತಿಯಲ್ಲಿ ಅಕ್ರಮ ನಡೆದಿದೆ. ಇದನ್ನು ಕೇಂದ್ರದ ಗಮನಕ್ಕೆ ತರಲಾಗಿದೆ. ನಿಯಮಗಳ ಪ್ರಕಾರ ಕೇಂದ್ರ ಸರ್ಕಾರ ಯಾವ ಉದ್ದೇಶಕ್ಕೆ ಅನುದಾನ ಬಿಡುಗಡೆ ಮಾಡಿರುತ್ತದೆಯೋ ಅದಕ್ಕೆ ಮಾತ್ರ ಬಳಸಿಕೊಳ್ಳಬೇಕು. ಒಂದು ವೇಳೆ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಸಿಕೊಂಡರೆ ಕೇಂದ್ರವು ಅದನ್ನು ಕಡಿತ ಮಾಡುತ್ತದೆ ಎಂದು ಹೇಳಿದರು.

ಗ್ರಾಮ ಪಂಚಾಯತ್‌ ಗೆ ಕೇಂದ್ರ ಸರ್ಕಾರದಿಂದ ಬಂದ ಅನುದಾನ ವರ್ಗಾವಣೆಗೆ ಕಾನೂನಿನಲ್ಲಿ ಅವಕಾಶವೇ ಇಲ್ಲ.ಸಣ್ಣ ಪುಟ್ಟ ತಿದ್ದುಪಡಿ ಇದ್ದರೆ ಮಾಡಲು ರಾಜ್ಯಗಳಿಗೆ 8-10 ದಿನಗಳ ಅವಕಾಶ ಕೊಡುತ್ತಾರೆ. ಆ ಸಮಯದಲ್ಲಿ ಒಂದು ಪಂಚಾಯತ್‌ ನಿಂದ ಇನ್ನೊಂದು ಪಂಚಾಯತ್‌ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದಕ್ಕೆ ಉತ್ತರದಾಯಿತ್ವ ಇಲ್ಲಿಯ ಇಲಾಖೆ ಆಯುಕ್ತರು, ಸಚಿವರು ಆಗಬೇಕು.

ಕರ್ನಾಟಕ ಸರ್ಕಾರ ತಪ್ಪು ಒಪ್ಪಿಕೊಂಡು ಸ್ಪಷ್ಟೀಕರಣ ಕೊಡುವವರೆಗೆ ಮುಂದಿನ ಅನುದಾನ ಬರುವುದಿಲ್ಲ. ಬಿಜೆಪಿ ಇದನ್ನು ಗ್ರಾ.ಪಂ. ಮಟ್ಟದಿಂದ ಹೋರಾಟ ಮಾಡುತ್ತದೆ ಕೇಂದ್ರ ಸರ್ಕಾರದ ಗಮನಕ್ಕೆ ಕೂಡಾ ತರುತ್ತೇವೆ, ಸದನದಲ್ಲಿ ಕೂಡಾ ಧ್ವನಿ ಎತ್ತುತ್ತೇವೆ. ಇದರಲ್ಲಿ 5.5 ಸಾವಿರ ಕೋಟಿ ರೂ. ನಷ್ಟು ಹಗರಣವಾಗಿದೆ.

ನರೇಗಾ ವಿಚಾರವಾಗಿ ಆಗಿರುವ ಹಗರಣದ ಬಗ್ಗೆ ಸಾಕ್ಷಿ ಸಮೇತ ಬಿಡುಗಡೆ ಮಾಡಿದ್ದೆವು. 15ನೇ ಹಣಕಾಸು ಆಯೋಗದ ಹಣವನ್ನು ದುರ್ಬಳಕೆ ಮಾಡಿದ್ದಾರೆ. ಅನುದಾನ ಕೇಂದ್ರದಿಂದ ಕರ್ನಾಟಕದ 6 ಸಾವಿರ ಗ್ರಾಮ ಪಂಚಾಯತಿಗೆ ಕೇಂದ್ರದಿಂದ ನಿಗದಿಯಾಗಿ ಬಂದಿರುತ್ತದೆ ಎಂದರು.

ಆಯುಕ್ತರ ಕಾರ್ಯಾಲಯದಲ್ಲಿ ಪರಿಶೀಲಿಸಲು ಕೆಲ ದಿನಗಳ ಕಾಲ ಅವಕಾಶ ಕೊಡುತ್ತಾರೆ. ಒಕ್ಕೂಟದ ವ್ಯವಸ್ಥೆಯಲ್ಲಿ ಒಂದು ಪೈಸೆ ಅನುದಾನವನ್ನ ಬೇರೆಡೆಗೆ ಪರಿವರ್ತಿಸಲು ಅವಕಾಶವಿಲ್ಲ.. ಕೇಂದ್ರ ದಿಂದ ಬಂದಿರುವ 15ನೇ ಹಣಕಾಸನ್ನು ಕಾಂಗ್ರೆಸ್‌‍ ಶಾಸಕರಿಗೆ ಕೊಟ್ಟಿದ್ದಾರೆ ಎಂದು ದೂರಿದರು.

RELATED ARTICLES

Latest News