Thursday, April 16, 2026
HomeEesanje Newsಬ್ರ್ಯಾಂಡ್‌ಗಳಿಗೆ ನೆರವಾಗುವ ‘Dilfluencer Moments’ ಅನ್ನು ಪರಿಚಯಿಸಿದ ‘Z’

ಬ್ರ್ಯಾಂಡ್‌ಗಳಿಗೆ ನೆರವಾಗುವ ‘Dilfluencer Moments’ ಅನ್ನು ಪರಿಚಯಿಸಿದ ‘Z’

Z launches ‘Dilfluencer Moments’ to help brands

ಭಾರತದ ಮುಂಚೂಣಿ ಕಂಟೆಂಟ್ ಮತ್ತು ತಂತ್ರಜ್ಞಾನ ಪವರ್‌ಹೌಸ್ ಆಗಿರುವ ‘Z’, ಬಹು-ಸ್ಕ್ರೀನ್ ಎಂಗೇಜ್‌ಮೆಂಟ್ ಅನ್ನು ಪರಿಣಾಮಕಾರಿಯಾಗಿ ನಾವಿಗೇಟ್ ಮಾಡಲು ಹಾಗೂ ಕ್ರಿಯೇಟಿವ್ ಕಟ್-ಥ್ರೂ ಒದಗಿಸಲು ಬ್ರ್ಯಾಂಡ್‌ಗಳಿಗೆ ನೆರವಾಗುವ ಹೊಸ ಓಮ್ನಿಚಾನಲ್ ರೀಚ್ ಪರಿಹಾರ ‘Dilfluencer Moments’ ಅನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಭಾರತದ ಜಾಹೀರಾತು ಕ್ಷೇತ್ರವು ವೇಗವಾಗಿ ರೂಪಾಂತರಗೊಳ್ಳುತ್ತಿದ್ದು, ಇಂದು ಯಾವುದೇ ಗಾತ್ರದ ಬ್ರ್ಯಾಂಡ್‌ಗಳಿಗೂ ಜಾಹೀರಾತು ಇನ್‌ವೆಂಟರಿಯನ್ನು ಸುಲಭವಾಗಿ ಖರೀದಿಸುವ ಅವಕಾಶ ದೊರಕಿದೆ. ಆದರೆ ಈ ಪ್ರಜಾಪ್ರಭುತ್ವೀಕರಣವೇ ವಿಸ್ತರಣೆ ಅಪಾರ ಪ್ರಮಾಣದ ಜಾಹೀರಾತು ಸಂದೇಶಗಳ ನಡುವೆ ಬ್ರಾಂಡ್‌ಗಳು ಎದ್ದು ಕಾಣುವುದು ಹೇಗೆ ಎಂಬ ಹೊಸ ಸವಾಲನ್ನು ತಂದಿದೆ.

ಗಮನಾವಧಿ ಕುಗ್ಗುತ್ತಿರುವ ಮತ್ತು ಜಾಹೀರಾತು ಗೊಂದಲ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಗ್ರಾಹಕರು ಕೇವಲ ನೋಡುವುದಲ್ಲದೆ ನೆನಪಿನಲ್ಲಿ ಉಳಿಸಿಕೊಳ್ಳುವಂತೆ ಮಾಡುವುದೇ ಮಾರ್ಕೆಟರ್‌ಗಳ ಪ್ರಮುಖ ಪ್ರಶ್ನೆಯಾಗಿದೆ. ಬ್ರ್ಯಾಂಡ್ ಅವೇರ್‌ನೆಸ್ ಮಾತ್ರವಲ್ಲದೆ, ಬ್ರಾಂಡ್ ಪ್ರೀತಿ ಮತ್ತು ಅರ್ಥಪೂರ್ಣ ಸಕ್ರಿಯತೆಯನ್ನು ಹೇಗೆ ನಿರ್ಮಿಸಬೇಕು ಎಂಬುದೇ ಸವಾಲಾಗಿದೆ.

ಈ ಸವಾಲಿಗೆ ‘Z’ಯ ಉತ್ತರವೇ ‘Dilfluencer Moments’ ಪಾತ್ರ ಪ್ರಧಾನ, ಕ್ಷಣಾಧಾರಿತ ಹೊಸ ಮೀಡಿಯಾ ಫಾರ್ಮ್ಯಾಟ್. ಇದು ಸಹಜ ಕಥನವನ್ನು ವೈರಲ್ ಎಂಗೇಜ್‌ಮೆಂಟ್ ಮತ್ತು ಮಾಪನೀಯ ಬ್ರ್ಯಾಂಡ್ ಇಕ್ವಿಟಿಯಾಗಿ ಪರಿವರ್ತಿಸುತ್ತದೆ. ಗ್ರಾಹಕರ ಅನುಭವಕ್ಕೆ ಅಡ್ಡಿಯಾಗುವ ಸಾಂಪ್ರದಾಯಿಕ ಜಾಹೀರಾತು ಮಾದರಿಗಳಿಗಿಂತ ಭಿನ್ನವಾಗಿ, ‘Dilfluencer Moments’ ಬ್ರಾಂಡ್‌ಗಳನ್ನು ಗ್ರಾಹಕರು ಈಗಾಗಲೇ ಇಷ್ಟಪಡುವ ಸಾಂಸ್ಕೃತಿಕ ನಿರೂಪಣೆಗಳೊಳಗೆ ಸಹಜವಾಗಿ ಬೆರೆಸುತ್ತದೆ. ಕೋಟ್ಯಂತರ ಭಾರತೀಯ ಮನೆಗಳಲ್ಲಿ ತಕ್ಷಣ ಗುರುತಿಸಬಹುದಾದ ‘Z’ಯ ವಿಶ್ವಾಸಾರ್ಹ ಟೆಲಿವಿಷನ್ ಪಾತ್ರಗಳ ಮೂಲಕ, ಇದು ಮಧ್ಯೆ ಅಡ್ಡಿಪಡಿಸುವ ಜಾಹೀರಾತುಗಳ ಬದಲಾಗಿ ನಂಬಿಕೆಗೆ ಆಧಾರಿತ ಬ್ರಾಂಡ್ ಸೇರ್ಪಡಿಕೆಯನ್ನು ಸಾಧ್ಯವಾಗಿಸುತ್ತದೆ.

ರಾಷ್ಟ್ರೀಯ ಬಾಲಕಿಯರ ದಿನದಂದು “Jab life ko leti ho lightly toh lagti ho aur bhi lovely” ಎಂಬ ಸಂದೇಶದೊಂದಿಗೆ ಈ ಉಪಕ್ರಮ ಆರಂಭವಾಯಿತು. ‘Z’ನ ಹಿಂದಿ ಮತ್ತು ಮರಾಠಿ ಧಾರಾವಾಹಿಗಳಲ್ಲಿ ಪಾತ್ರಾಧಾರಿತ ಕ್ಷಣಗಳ ಮೂಲಕ ಕಥನವನ್ನು ಹೆಣೆದು, ಅದು ಡಿಜಿಟಲ್ ವೇದಿಕೆಗಳಾದ್ಯಂತ ಸಹಜವಾಗಿ ಹರಡಿತು. ಸಾನಿಯಾ ಮಲ್ಹೋತ್ರಾ ಅಭಿನಯದ ಬ್ರ್ಯಾಂಡ್ ಫಿಲ್ಮ್ ಕಥಾನಕವನ್ನು ಇನ್ನಷ್ಟು ಬಲಪಡಿಸಿತು.

ಜೀ ಎಂಟರ್ಟೈನ್ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಚೀಫ್ ಮಾರ್ಕೆಟಿಂಗ್ ಆಫೀಸರ್ ಕಾರ್ತಿಕ್ ಮಹಾದೇವ್ ಮಾತನಾಡಿ ‘ಇಂದಿನ ಜಾಹೀರಾತು ಜಗತ್ತಿನಲ್ಲಿ ‘ಲಭ್ಯತೆ’ ಮಾತ್ರ ಸಾಕಾಗುವುದಿಲ್ಲ—‘ಅರ್ಥ ಮಾಡಿಕೊಳ್ಳುವುದು’ ಮುಖ್ಯ. ಚಿರಪರಿಚಿತ ಪಾತ್ರಗಳು, ಅನ್ವಯಿಸಬಹುದಾದ ಕಥೆಗಳು ಮತ್ತು ಎಲ್ಲ ಸ್ಕ್ರೀನ್‌ಗಳಲ್ಲಿ ಸಹಜವಾಗಿ ಹರಿಯುವ ಕ್ಷಣಗಳೇ ಬ್ರಾಂಡ್‌ಗಳನ್ನು ನೆನಪಿನಲ್ಲಿ ಉಳಿಸುತ್ತವೆ. ಅಲ್ಲಿಯೇ ದಿಲ್‌ಫ್ಲುಯೆನ್ಸರ್ ಮೊಮೆಂಟ್ಸ್ ನಿಜವಾದ ಸಂಚಲನ ಸೃಷ್ಟಿಸುತ್ತದೆ’ ಎಂದರು.

RELATED ARTICLES

Latest News