Saturday, April 18, 2026
Homeರಾಷ್ಟ್ರೀಯಮೋದಿ ನಾಯಕತ್ವದ ಶಿಸ್ತುಬದ್ಧ ಆರ್ಥಿಕ ನಿರ್ವಹಣೆಯಿಂದ ಶೇ.7.2 ರಷ್ಟು ಜಿಡಿಪಿ ಸಾಧನೆ : ನಿರ್ಮಲಾ ಪ್ರಶಂಸೆ

ಮೋದಿ ನಾಯಕತ್ವದ ಶಿಸ್ತುಬದ್ಧ ಆರ್ಥಿಕ ನಿರ್ವಹಣೆಯಿಂದ ಶೇ.7.2 ರಷ್ಟು ಜಿಡಿಪಿ ಸಾಧನೆ : ನಿರ್ಮಲಾ ಪ್ರಶಂಸೆ

disciplined economic management led to 7.2% GDP growth: Nirmala praises

ಬೆಂಗಳೂರು,ಫೆ.1- ಕಳೆದ 12 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಶಿಸ್ತುಬದ್ಧ ಆರ್ಥಿಕ ನಿರ್ವಹಣೆ ನಡೆಯುತ್ತಿರುವುದರಿಂದ ಭಾರತದ ಜಿಡಿಪಿ ದರ ಶೇ.7.2 ರಷ್ಟು ಸಾಧಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಶಂಸಿಸಿದ್ದಾರೆ.

ಸಂಸತ್‌ನಲ್ಲಿ 2026-27ನೇ ಸಾಲಿನ ಬಜೆಟ್‌ ಮಂಡನೆಯಲ್ಲಿ ಮಾತನಾಡಿದ ಅವರು, ಭಾರತ ಇನ್ನೂ ಜಾಗತಿಕ ಮಟ್ಟದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದೆ. 12 ವರ್ಷಗಳಿಂದ ಮೋದಿ ನಾಯಕತ್ವದಲ್ಲಿ ದೇಶದ ಆರ್ಥಿಕತೆ ಪ್ರಗತಿಯಲ್ಲಿದೆ. ಜಿಡಿಪಿ ದರ-7.2ರಷ್ಟು ಏರಿಕೆಯಾಗುವ ಮೂಲಕ ವಿಶ್ವಮಟ್ಟದಲ್ಲಿ ನಂ. 1 ಸ್ಥಾನಕ್ಕೆ ಕೊಂಡೊಯ್ಯುತ್ತಿದೆ ಎಂದು ಹೇಳಿದರು.

ಮಾಘ ಹುಣ್ಣಿಮೆ ಹಾಗೂ ರವಿದಾಸ್‌‍ ಅವರ ಜನದಿನಾಚರಣೆಯಂದು ಸಂಸತ್‌ ಬಜೆಟ್‌ ಮಂಡನೆ ಮಾಡುತ್ತಿರುವುದು ನನಗೆ ಅತ್ಯಂತ ಹೆಮೆಯ ಕ್ಷಣವಾಗಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಬಡವರು, ಆದಿವಾಸಿಗಳು ಸೇರಿದಂತೆ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಪಣತೊಟ್ಟಿದೆ.

ಜಿಡಿಪಿ ದರ ಹೆಚ್ಚಳವಾಗುತ್ತಿರುವುದರಿಂದ ದೇಶದಲ್ಲಿ ಬಡತನದ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತದೆ. ಶಿಸ್ತುಬದ್ಧ ಆರ್ಥಿಕ ನಿರ್ವಹಣೆ ಮತ್ತು ಜನರ ಬಗ್ಗೆ ನಮ ಸರ್ಕಾರ ಇಟ್ಟುಕೊಂಡ ಬದ್ಧತೆಯೇ ಇದಕ್ಕೆ ಪ್ರಮುಖ ಕಾರಣ ಎಂದರು.

ಜಾಗತಿಕ ಮಟ್ಟದಲ್ಲಿ ಭಾರತ ಪ್ರಮುಖ ರಫ್ತುದಾರರಷ್ಟೇ ಆಗಿ ಹೊರಹೊಮಿದೆ. ಉತ್ಪಾದನಾ ವಲಯದಲ್ಲೂ ಬೇರೆ ದೇಶಗಳಿಗೆ ಹೋಲಿಸಿದರೆ ನಾವು ಮೊದಲ ಸ್ಥಾನದಲ್ಲಿದ್ದೇವೆ. ಆತನಿರ್ಭರ ಪ್ರಗತಿಯು ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಣುತ್ತಿದೆ. ಉದ್ಯೋಗ ಸೃಷ್ಟಿಗೂ ನಮ ಸರ್ಕಾರ ಹೆಚ್ಚಿನ ಗಮನ ಹರಿಸಿದೆ ಎಂದು ತಿಳಿಸಿದರು.

ವರ್ಷದಿಂದ ವರ್ಷಕ್ಕೆ ಸುಧಾರಣಾ ಕ್ರಮಗಳನ್ನು ತೆಗೆದುಕೊಂಡ ಪರಿಣಾಮ ಭಾರತ ಯಾವುದೇ ಮುಂದುವರೆದ ರಾಷ್ಟ್ರಗಳಿಗಿಂತ ಕಡಿಮೆ ಇಲ್ಲದೇ ಪ್ರಗತಿ ಸಾಧಿಸುತ್ತಿದೆ.ನಮ ಆರ್ಥಿಕ ನಿರ್ವಹಣೆ ಉತ್ತಮ ಸ್ಥಿತಿಯಲ್ಲಿರುವುದರಿಂದ ಪ್ರಗತಿಯ ಬಗ್ಗೆ ಯಾರಿಗೂ ಆತಂಕ ಬೇಡ ಎಂದು ನಿರ್ಮಲಾ ಸೀತಾರಾಮನ್‌ ದೇಶದ ಜನತೆಗೆ ಆಶ್ವಾಸನೆ ನೀಡಿದರು.

RELATED ARTICLES

Latest News