Saturday, April 18, 2026
Homeರಾಷ್ಟ್ರೀಯಭಾರತೀಯ ಸಂಸ್ಕೃತಿ ಬಿಂಬಿಸುವ ಸೀರೆಯುಟ್ಟು 9 ಬಾರಿ ಬಜೆಟ್‌ ಮಂಡಿಸಿದ ನಿರ್ಮಲಾ

ಭಾರತೀಯ ಸಂಸ್ಕೃತಿ ಬಿಂಬಿಸುವ ಸೀರೆಯುಟ್ಟು 9 ಬಾರಿ ಬಜೆಟ್‌ ಮಂಡಿಸಿದ ನಿರ್ಮಲಾ

FM Nirmala Sitharaman dons a Kanjeevaram saree for her 9th budget

ನವದೆಹಲಿ, ಫೆ.1- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪ್ರತೀ ವರ್ಷ ಬಜೆಟ್‌ ಮಂಡನೆಯ ವೇಳೆ ಉಡುವ ಸೀರೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ನಿರ್ಮಲಾ ಇದುವರೆಗೂ 9 ಬಾರಿ ಬಜೆಟ್‌ ಮಂಡಿಸಿದ್ದು, ಅವರು ಪ್ರತೀ ಬಾರಿಯ ಬಜೆಟ್‌ ವೇಳೆ ಉಡುವ ಸೀರೆಯೂ ಕೂಡ ಒಂದೊಂದು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಬಜೆಟ್‌ ಸಮಯದಲ್ಲಿ ನಿರ್ಮಲಾ ಸೀತಾರಾಮನ್‌ ಇಲ್ಲಿಯವರೆಗೆ ಉಟ್ಟ ಸೀರೆಗಳ ವಿಶೇಷತೆಗಳನ್ನು ತಿಳಿದುಕೊಳ್ಳೋಣ.

ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ ಮಂಡನೆ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕಂದು ಬಣ್ಣದ ಅಂಚು ಹೊಂದಿರುವ ಕೆನ್ನೇರಳೆ ಬಣ್ಣ ಸೀರೆ ಉಟ್ಟು ಸಂಸತ್‌ ಭವನಕ್ಕೆ ಆಗಮಿಸಿದರ. ಈ ಬಾರಿಯೂ ಭಾರತದ ಸಾಂಪ್ರದಾಯಿಕ ಕೈಮಗ್ಗ ನೇಕಾರಿಕೆಯನ್ನು ಪ್ರೋತ್ಸಾಹಿಸಲು ಈ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೋದಿ 3.0 ಸರ್ಕಾರದಲ್ಲಿ ಹಣಕಾಸು ಮಂತ್ರಿ ಹೊಣೆ ಪಡೆದ ನಿರ್ಮಲಾ ಸೀತಾರಾಮನ್‌ ಅವರು ತಮ ಮೊದಲ ಬಜೆಟ್‌ ಸಂದರ್ಭದಲ್ಲಿ ಗುಲಾಬಿ ಬಣ್ಣದ ಸೀರೆ ಉಟ್ಟಿದ್ದರು. ಇದು ಆಂಧ್ರಪ್ರದೇಶದ ಮಂಗಳಗಿರಿ ಕಾಟನ್‌ ಮತ್ತು ರೇಷ್ಮೆ ಮಿಶ್ರಿತ ಗೋಲ್ಡನ್‌ ಕಲರ್‌ ಬಾರ್ಡರ್‌ ಅನ್ನು ಹೊಂದಿತ್ತು.

2020-21ರ ತಮ್ಮ ಎರಡನೇ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಹಳದಿ ಮತ್ತು ನೀಲಿ ಬಣ್ಣದ ಅಂಚಿನ ರೇಷ್ಮೆ ಸೀರೆಯನ್ನುಂಟು ಗಮನ ಸೆಳೆದಿದ್ದರು, ಆ ಸಮಯದಲ್ಲಿ ಹೆಲ್ತ್‌ಕೇರ್‌, ಸ್ವಚ್ಛ ಭಾರತ್‌ ಮಿಷನ್‌, ಮನೆಗಳಿಗೆ ಕೊಳವೆ ನೀರು ಇತ್ಯಾದಿ ಯೋಜನೆಗಳಿಗೆ ಹೇರಳ ಅನುದಾನ ಬಿಡುಗಡೆ ಮಾಡಿದರು.

2021-22ರ ಬಜೆಟ್‌ ಮಂಡನೆ ಮಾಡುವಾಗ ಕೋವಿಡ್‌ ಸಂದರ್ಭದಲ್ಲಿ ಮಂಡನೆಯಾದ ಮೂರನೇ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಹೈದರಾಬಾದ್‌ ಪೋಚಂಪಳ್ಳಿ ಗ್ರಾಮದ ಪೋಚಂಪಳ್ಳಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ್ದರು. ಕೆಂಪು ಮತ್ತು ಬಿಳಿ ಬಣ್ಣದ ಈ ಸೀರೆ ಇಕ್ಕತ್‌ ಶೈಲಿಯನ್ನು ಹೊಂದಿತ್ತು.

2022-23ರ ಬಜೆಟ್‌ ಕೋವಿಡ್‌ನಿಂದ ಅಧಃಪತನಕ್ಕೆ ಇಳಿದಿದ್ದ ಆರ್ಥಿಕತೆಗೆ ಚೇತರಿಕೆ ತುಂಬುವ ಪ್ರಯತ್ನ ಈ ಬಜೆಟ್‌ನಲ್ಲಿ ಮಾಡಲಾಗಿತ್ತು. ಈ ಬಜೆಟ್‌ ಮಂಡನೆ ವೇಳೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಕೈಮಗ್ಗದಲ್ಲಿ ನೇಯ್ದ ಬೊಮ್ಮೆ ಸೀರೆಯನ್ನು ನಿರ್ಮಲಾ ಸೀತಾರಾಮನ್‌ ತೊಟ್ಟಿದ್ದರು.

2023-24ರ ಬಜೆಟ್‌‍ ಸಂದರ್ಭದಲ್ಲಿ ಕರ್ನಾಟಕದಿಂದ ರಾಜ್ಯಸಭಾ ಸಂಸದೆಯಾಗಿ ಹಣಕಾಸು ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್‌ ಅವರು ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕದ ಖ್ಯಾತ ಇಳಕಲ್‌ ಸೀರೆ ತೊಟ್ಟು ಬಜೆಟ್‌ ಮಂಡಿಸಿದ್ದು ವಿಶೇಷವಾಗಿತ್ತು.

2024-25ರ ಮಧ್ಯಂತರ ಬಜೆಟ್‌ ಸಂದರ್ಭದಲ್ಲಿ ಮೋದಿ 2.0 ಸರ್ಕಾರದ ಕೊನೆಯ ಬಜೆಟ್‌ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಕಾಂತ ಹೊಲಿಗೆಯಿಂದ ವಿನ್ಯಾಸಗೊಳಿಸಿದ ನೀಲಿ ಬಣ್ಣದ ಟಸ್ಸರ್‌ ರೇಷ್ಮೆ ಸೀರೆಯಲ್ಲಿ ಮಿಂಚಿದ್ದರು.

2024-25ರ ಪೂರ್ಣ ಪ್ರಮಾಣದ ಬಜೆಟ್‌ ವೇಳೆ ಮಜೆಂಟಾ ಬಾರ್ಡರ್‌ ಹೊಂದಿದ್ದ ಮಂಗಳಗಿರಿ ಕಾಟನ್‌ ಸೀರೆಯಲ್ಲಿ ಗಮನಸೆಳೆದಿದ್ದರು.

2025-26ರ ಬಜೆಟ್‌ ನಿರ್ಮಲಾ ಸೀತಾರಾಮನ್‌ ಅವರ 8ನೇ ಬಜೆಟ್‌ ಆಗಿತ್ತು ಅ ಸಮಯದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಬಿಹಾರದ ಖ್ಯಾತ ಮಿಥಿಲಾ ಕಲಾವಿದೆ ದುಲಾರಿ ದೇವಿ ಅವರಿಂದ ಕೊಡುಗೆಯಾಗಿ ನೀಡಿದ್ದ ಸೀರೆಯನ್ನುಟ್ಟಿದ್ದರು. ಮಿಥಿಲಾ ಆರ್ಟ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಕ್ರೆಡಿಟ್‌ ಔಟ್‌ರೀಚ್‌‍ ಕಾರ್ಯಕ್ರಮಕ್ಕಾಗಿ ಮಧುಬನಿಗೆ ಭೇಟಿ ನೀಡಿದಾಗ ಸಿಕ್ಕಿದ್ದ ಸೀರೆಯಾಗಿತ್ತು.

RELATED ARTICLES

Latest News