Thursday, April 16, 2026
Homeರಾಜ್ಯಸಿಜೆ ರಾಯ್‌ ಮೊಬೈಲ್‌ ಕರೆಗಳ ಬೆನ್ನತ್ತಿದ ಎಸ್‌‍ಐಟಿ

ಸಿಜೆ ರಾಯ್‌ ಮೊಬೈಲ್‌ ಕರೆಗಳ ಬೆನ್ನತ್ತಿದ ಎಸ್‌‍ಐಟಿ

SIT on the trail of CJ Roy's mobile calls

ಬೆಂಗಳೂರು,ಫೆ.5- ಕಾನ್ಫಿಡೆಂಟ್‌ ಗ್ರೂಪ್‌ ಮುಖ್ಯಸ್ಥ ಸಿಜೆ ರಾಯ್‌ ಆತಹತ್ಯೆ ಮಾಡಿಕೊಂಡು ಒಂದುವಾರ ಸಮೀಪಿಸುತ್ತಿದ್ದರೂ ಅವರ ಆತಹತ್ಯೆಗೆ ನಿಖರ ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ. ಈ ಬಗ್ಗೆ ತನಿಖೆಗಾಗಿ ರಚಿಸಲಾಗಿರುವ ಎಸ್‌‍ಐಟಿ ಪೊಲೀಸರು ಅವರ ಮೊಬೈಲ್‌ ಕರೆಗಳ ವಿವರ (ಸಿಡಿಆರ್‌) ಗಳನ್ನು ವಿಶ್ಲೇಷಿಸುತ್ತಿದ್ದಾರೆ.

ರಾಯ್‌ ಅವರು ಆತಹತ್ಯೆ ಮಾಡಿಕೊಂಡ ದಿನ ಯಾರ್ಯಾರಿಗೆ ಕರೆ ಮಾಡಿದ್ದಾರೆ. ಮತ್ತು ಕೊನೆಯ ಎರಡು ಕರೆಗಳು ಯಾವುವು. ಆ ಎರಡು ಕರೆಗಳನ್ನೇ ಎಸ್‌‍ಐಟಿ ಗಂಭೀರವಾಗಿ ಪರಿಗಣಿಸಿ ಸಿಡಿಆರ್‌ಗಳಿಂದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕಳೆದ ಶುಕ್ರವಾರ ರಾಯ್‌ ಅವರು ಯಾರ್ಯಾರಿಗೆ ಕರೆ ಮಾಡಿದ್ದರು ಎಂಬುವುದನ್ನು ಎಸ್‌‍ಐಟಿ ಪಟ್ಟಿ ಮಾಡಿಕೊಂಡಿದ್ದು, ರಾಯ್‌ ಅವರ ಕಾರ್ಯಚಟುವಟಿಕೆ, ಮಾಹಿತಿಗಳನ್ನು ಸಂಗ್ರಹಿಸುತ್ತಿದೆಯಾದರೂ ಇದುವರೆಗೂ ರಾಯ್‌ ಆತಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

ರಾಯ್‌ ಅವರು ನೇರ ಕರೆಗಳನ್ನು ಹೆಚ್ಚಾಗಿ ಮಾಡುತ್ತಿರಲಿಲ್ಲ. ಅನಿವಾರ್ಯವಿದ್ದಲ್ಲಿ ಮಾತ್ರ ವಿರಳವಾಗಿ ನೇರ ಕರೆ ಮಾಡುತ್ತಿದ್ದರು. ವೆಬ್‌ ಆಧಾರಿತ ಕರೆ ಪ್ಲಾಟ್‌ಫಾರ್ಮ್‌ನ್ನೇ ಬಳಕೆ ಮಾಡುತ್ತಿದ್ದರೆಂಬುವುದು ಇದುವರೆಗಿನ ಪೊಲೀಸರ ತನಿಖೆಯಿಂದ ಕಂಡು ಬಂದಿದೆ.
ರಾಯ್‌ ಅವರು ಹೆಚ್ಚಾಗಿ ಯಾರಿಗೆ ಕರೆ ಮಾಡುತ್ತಿದ್ದರು. ತಮ ವೈಯಕ್ತಿಕ ವಿಚಾರಗಳನ್ನೇನಾದರೂ ಹಂಚಿಕೊಂಡಿದ್ದಾರೆಯೇ, ವಾಟ್ಸಪ್‌ ಹೆಚ್ಚಾಗಿ ಯಾರಿಂದ ಬರುತ್ತಿತ್ತು ಎಂಬುವುದನ್ನು ಸಹ ಪೊಲೀಸರು ಸಿಡಿಆರ್‌ ವಿಶ್ಲೆಷಿಸುತ್ತಿದ್ದಾರೆ.

ರಾಯ್‌ ಆತಹತ್ಯೆ ನಂತರ ಎಸ್‌‍ಐಟಿ ಅವರ ಕಚೇರಿಗೆ ಭೇಟಿ ನೀಡಿ ಅವರ ಚೇಂಬರ್‌ನ್ನು ಕೂಲಂಕಶವಾಗಿ ಪರಿಶೀಲಿಸಿದಾಗ ಅವರು ಬಳಸುತ್ತಿದ್ದ ಟೇಬಲ್‌ ಮೇಲೆ ಕೈ ಬರಹದ ಪೇಪರ್‌ಗಳು ರಾಶಿ ರಾಶಿ ಕಂಡುಬಂದಿವೆ.ಅವರ ಕೊಠಡಿಗೆ ಯಾರೂ ಸಹ ಹೋಗುತ್ತಿರಲಿಲ್ಲ. ಹಾಗಾಗಿ ಟೇಬಲ್‌ ಮೇಲೆಯೇ ಹಲವು ಕಾಗದ ಪತ್ರಗಳು ಹಾಗೆಯೇ ಇವೆ.

ರಾಯ್‌ ಅವರ ಕೈಬರಹ ಎನ್ನಲಾದ ಪೇಪರ್‌ಗಳನ್ನು ಎಸ್‌‍ಐಟಿ ಸಂಗ್ರಹಿಸಿಕೊಂಡು ತಮ ಕಚೇರಿಗೆ ಹೋಗಿದ್ದು, ಆ ಪೇಪರ್‌ಗಳಲ್ಲಿರುವ ಅಂಶಗಳನ್ನು ಕೂಲಂಕಶವಾಗಿ ಪರಿಶೀಲಿಸುತ್ತಿದ್ದಾರೆ.ಒಟ್ಟಾರೆ ರಾಯ್‌ ಅವರ ಆತಹತ್ಯೆಗೆ ನಿಖರ ಕಾರಣವೇನೆಂಬುವುದು ಎಸ್‌‍ಐಟಿ ಪೊಲೀಸರ ತನಿಖೆ ಮುಗಿದ ನಂತರವಷ್ಟೇ ಗೊತ್ತಾಗಲಿದೆ.

RELATED ARTICLES

Latest News