Thursday, April 16, 2026
Homeರಾಜ್ಯಬಜೆಟ್‌ ಪೂರ್ವಭಾವಿ ಸಭೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

ಬಜೆಟ್‌ ಪೂರ್ವಭಾವಿ ಸಭೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

CM Siddaramaiah begins budget pre-meeting

ಬೆಂಗಳೂರು, ಫೆ.5- ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಇಂದಿನಿಂದ ಬಜೆಟ್‌ ತಯಾರಿಕೆಯ ಪೂರ್ವಭಾವಿ ಸಭೆಗಳನ್ನು ಆರಂಭಿಸಿದ್ದಾರೆ.ಮಾರ್ಚ್‌ 6ರಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ತಮ 17ನೇ ಬಜೆಟ್‌ ಅನ್ನು ಮಂಡಿಸಲಿದ್ದಾರೆ. ಅದಕ್ಕೆ ಪೂರ್ವ ಭಾವಿಯಾಗಿ ಇಂದಿನಿಂದ ಬಜೆಟ್‌ ತಯಾರಿಕೆಗೆ ಚಾಲನೆ ನೀಡಿದ್ದಾರೆ.

ಅರಣ್ಯ-ಪರಿಸರ-ಜೀವಿ ಶಾಸ್ತ್ರ, ಕಾನೂನು-ನ್ಯಾಯ-ಮಾನವ ಹಕ್ಕುಗಳು-ಸಂಸದೀಯ ವ್ಯವಹಾರಗಳು-ಶಾಸನ ರಚನೆ-ಪ್ರವಾಸೋದ್ಯಮ, ತೋಟಗಾರಿಕೆ-ಗಣಿ-ಭೂ ವಿಜ್ಞಾನ, ಕಾರ್ಮಿಕ, ಒಳಾಡಳಿತ, ಕನ್ನಡ-ಸಂಸ್ಕೃತಿ-ಹಿಂದುಳಿದ ವರ್ಗಗಳು, ಉನ್ನತ ಶಿಕ್ಷಣ ಸೇರಿದಂತೆ ಹಲವು ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ.

ಆಯಾ ಇಲಾಖೆಗಳಿಂದ 2026- 27ನೇ ಸಾಲಿಗೆ ಘೋಷಿಸಬೇಕಾದ ಹೊಸ ಯೋಜನೆಗಳ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ. ಹಿಂದಿನ ಬಜೆಟ್ಟಿನಲ್ಲಿ ಘೋಷಿಸಲಾದ, ಅನುದಾನ, ಬಿಡುಗಡೆಯಾಗಿರುವುದು, ಮತ್ತು ವೆಚ್ಚವಾಗಿರುವ ಹಣದ ಬಗ್ಗೆ ಮುಖ್ಯಮಂತ್ರಿ ಮಾಹಿತಿ ಪಡೆದುಕೊಂಡಿದ್ದಾರೆ.

ಕಾಂಗ್ರೆಸ್‌‍ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಗಳು, ಬಜೆಟ್‌ ನಲ್ಲಿ ಅವುಗಳ ಘೋಷಣೆ ಮತ್ತು ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಚರ್ಚಿಸಲಾಗಿದೆ. ಬಜೆಟಿನಲ್ಲಿ ಈ ಮೊದಲು ಘೋಷಿಸಲಾದ ಯೋಜನೆಗಳ ಕಾರ್ಯಾನುಷ್ಠಾನದ ಬಗ್ಗೆಯೂ ಚರ್ಚೆಯಾಗಿದೆ. ಬಜೆಟ್‌ ಕಾರ್ಯಕ್ರಮಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಧಿಕಾರಿಗಳು ಅದನ್ನು ಬಜೆಟ್‌ ಅಂಗೀಕಾರಗೊಂಡ ಎರಡು ತಿಂಗಳ ಒಳಗಾಗಿ ಕಾರ್ಯಾದೇಶಗಳನ್ನು ಹೊರಡಿಸಬೇಕು ಎಂದು ಸೂಚಿಸಲಾಗಿದೆ.

RELATED ARTICLES

Latest News