ಭುವನೇಶ್ವೇರ,ಫೆ.7- ಒಡಿಶಾದ ಚಾಂಡಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನಿಂದ ಅಗ್ನಿ-3 ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಪರೀಕ್ಷೆಯ ಎಲ್ಲಾ ಕಾರ್ಯಾಚರಣೆ ಮತ್ತು ತಾಂತ್ರಿಕ ನಿಯತಾಂಕಗಳು ಸಂಪೂರ್ಣವಾಗಿ ನಿರೀಕ್ಷೆಯಂತೆ ಇದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ಷಿಪಣಿ ಉಡಾವಣೆಯನ್ನು ಕಾರ್ಯತಂತ್ರದ ಪಡೆಗಳ ಕಮಾಂಡ್ನ ಮೇಲ್ವಿಚಾರಣೆಯಲ್ಲಿ ನಡೆಸಲಾಯಿತು. ಅಗ್ನಿ-3 ಪರಮಾಣು ಸಾಮರ್ಥ್ಯದ ಕ್ಷಿಪಣಿಯಾಗಿದ್ದು, ಸುಮಾರು 3,000 ರಿಂದ 3,500 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ. ಇದು ಭಾರತವು ಶತ್ರು ರಾಷ್ಟ್ರಗಳ ಒಳಭಾಗದಲ್ಲಿರುವ ಪ್ರಮುಖ ಗುರಿಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ಮಾಡಲು ಅನುವು ಮಾಡಿಕೊಡುತ್ತದೆ.
ಪಾಕಿಸ್ತಾನ ಮತ್ತು ಚೀನಾಕ್ಕೆ ಪ್ರಮುಖ ಬೆದರಿಕೆ?: ಅಗ್ನಿ-3 ರ 3,000-3,500 ಕಿಮೀ ವ್ಯಾಪ್ತಿಯು ಪಾಕಿಸ್ತಾನ ಮತ್ತು ಚೀನಾದ ಒಳಭಾಗವನ್ನು ಒಳಗೊಂಡಿದೆ. ಇದರಲ್ಲಿ ಎಲ್ಲ ಪ್ರಮುಖ ಪಾಕಿಸ್ತಾನಿ ನಗರಗಳು, ಬೀಜಿಂಗ್ ಮತ್ತು ಶಾಂಘೈನಂತಹ ಚೀನಾದ ನಗರಗಳು ಸೇರಿವೆ. ಹೀಗಾಗಿ ಭಾರತವು ಎರಡೂ ದೇಶಗಳಲ್ಲಿ ಪ್ರಮುಖ ಗುರಿಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿದೆ.
ಈ ಕ್ಷಿಪಣಿ ಚೀನಾಕ್ಕಿಂತ ಪಾಕಿಸ್ತಾನಕ್ಕೆ ಹೆಚ್ಚು ಕಳವಳವನ್ನುಂಟು ಮಾಡುತ್ತದೆ. ಏಕೆಂದರೆ ಇದು ಪಾಕ್ನ ಎಲ್ಲ ನಗರಗಳ ಮೇಲೆ ವಿನಾಶವನ್ನುಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಯಾವುದೇ ಪ್ರತಿಕ್ರಮಗಳನ್ನು ಸಹ ಹೊಂದಿಲ್ಲ. ಅಗ್ನಿ-3 ಅನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ಮಧ್ಯಮ ಶ್ರೇಣಿಯ ಕ್ಷಿಪಣಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಅಗ್ನಿ-3 ಭಾರತಕ್ಕೆ ಏಕೆ ವಿಶೇಷ: ಅಗ್ನಿ-3 ಭಾರತದ ಮಧ್ಯಮ – ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ. ಇದು ಎರಡು ಹಂತದ ಘನ – ಇಂಧನ ಕ್ಷಿಪಣಿಯಾಗಿದ್ದು, 16.7 ಮೀಟರ್ ಉದ್ದ, 2 ಮೀಟರ್ ವ್ಯಾಸ ಮತ್ತು 48,300 ಕಿಲೋಗ್ರಾಂಗಳಷ್ಟು ಉಡಾವಣಾ ತೂಕವನ್ನು ಹೊಂದಿದೆ. ಇದು ಪರಮಾಣು ಅಥವಾ ಸಾಂಪ್ರದಾಯಿಕ ಸಿಡಿತಲೆಗಳನ್ನು ಒಳಗೊಂಡಂತೆ 1,500 ಕಿಲೋಗ್ರಾಂಗಳಷ್ಟು ಪೇಲೋಡ್ ಸಾಗಿಸಬಲ್ಲದು ಮತ್ತು 450 ಕಿಲೋಮೀಟರ್ಗಳಿಗಿಂತ ಹೆಚ್ಚು ಹಾರಾಟದ ಎತ್ತರವನ್ನು ಹೊಂದಿದೆ.
ಅಭಿವದ್ಧಿಪಡಿಸಿದ ಇದನ್ನು ರೈಲು-ಮೊಬೈಲ್ ಮತ್ತು ರಸ್ತೆ-ಮೊಬೈಲ್ ಪ್ಲಾಟ್ಫಾರ್ಮ್ಗಳಿಂದ ಉಡಾಯಿಸಬಹುದು. ಇದರ ನಿಖರತೆಯು ಸುಧಾರಿತ ಸಂಚರಣೆ ಮತ್ತು ಮಾರ್ಗದರ್ಶನ ವ್ಯವಸ್ಥೆಗಳಿಂದ ಬಂದಿದೆ.
ಈ ಕ್ಷಿಪಣಿ ಅತ್ಯಂತ ವಿಶೇಷತೆಗಳು..
ಅಗ್ನಿ-3 ದೇಶೀಯವಾಗಿ ಅಭಿವದ್ಧಿಪಡಿಸಲಾದ ಪರಮಾಣು ಸಾಮರ್ಥ್ಯದ ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ.ಈ ಕ್ಷಿಪಣಿ 3,000 ರಿಂದ 3,500 ಕಿಲೋಮೀಟರ್ ದೂರದ ಗುರಿಗಳನ್ನು ನಿಖರವಾಗಿ ಹೊಡೆಯುವ ಸಾಮರ್ಥ್ಯ ಹೊಂದಿದೆ.ಇದು ಪಾಕಿಸ್ತಾನದ ಸಂಪೂರ್ಣ ಭಾಗ ಮತ್ತು ಚೀನಾದ ಅರ್ಧದಷ್ಟು ಭಾಗವನ್ನು ಒಳಗೊಂಡಿದೆ.
ಈ ಕ್ಷಿಪಣಿ ಕೂಡ ಸಾಕಷ್ಟು ದೊಡ್ಡದಾಗಿದೆ.
ಇದು 17 ಮೀಟರ್ ಉದ್ದ ಮತ್ತು 2 ಮೀಟರ್ ವ್ಯಾಸವನ್ನು ಹೊಂದಿದೆ. ಇದು ಒಂದು ಸೆಕೆಂಡಿನಲ್ಲಿ ಐದು ಕಿಲೋಮೀಟರ್ ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.50 ಟನ್ ಕ್ಷಿಪಣಿಯು ಎರಡು ಹಂತದ ಘನ-ಇಂಧನ ಎಂಜಿನ್ ಅನ್ನು ಹೊಂದಿದೆ.
ಮೊದಲ ಹಂತವು ಸುಟ್ಟುಹೋದ ನಂತರ, ಎರಡನೇ ಹಂತವನ್ನು ಸಕ್ರಿಯಗೊಳಿಸಲಾಗುತ್ತದೆ. ಸ್ಥಿರತೆ ಮತ್ತು ನಿಖರತೆಯೊಂದಿಗೆ ಕ್ಷಿಪಣಿಯನ್ನು ಅದರ ಉದ್ದೇಶಿತ ಗುರಿಗೆ ಮಾರ್ಗದರ್ಶನ ಮಾಡುತ್ತದೆ.ಈ ಕ್ಷಿಪಣಿ 1.5 ಟನ್ ವಾರ್ ಹೆಡ್ ಅನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
