ಹುಬ್ಬಳ್ಳಿ, ಫೆ.7- ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಹಾಗೂ ಇತರ ಹುದ್ದೆಗಳಿಗೆ ಕನ್ನಡಿಗರಿಗೆ ಸೂಕ್ತ ಸ್ಥಾನ ಮಾನ ದೊರಕಿಸಿ ಕೊಡುವ ನಿಟ್ಟಿನಲ್ಲಿ ನಮ ಸರ್ಕಾರ ಮುಂದಾಗಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ಸೋಮಣ್ಣ ಭರವಸೆ ನೀಡಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿ, ರೈಲ್ವೆ ಇಲಾಖೆ ನೇಮಕಾತಿಯಲ್ಲಿ ಯುಪಿಎ ಸರ್ಕಾರ ಇದ್ದಾಗ ಎಲ್ಲ ಭಾಷಿಕರಿಗೆ ಕೊಟ್ಟಿರಲಿಲ್ಲ ಆದರೆ ನಮ ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರಕಾರ ಬಂದ ಮೇಲೆ ಸಾಕಷ್ಟು ಅನುಕೂಲ ಆಗಿದ್ದು, ಬಹುತೇಕ ಭಾಷಿಕರಿಗೆ ಪ್ರಾಶಸ್ತ್ಯ ಕೊಡಲಾಗಿದೆ ಎಂದರು.
ಈಗಾಗಲೇ ರೈಲ್ವೆ ನೇಮಕಾತಿಯಲ್ಲಿ ಎಲ್ಲಭಾಷೆಗೆ ಮಾನ್ಯತೆ ಸಿಗಬೇಕು ಈ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಿದೆ ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹೆಚ್ಚಿನ ಒತ್ತು ನೀಡಿದ್ದಾರೆ.
ರೈಲ್ವೆ ಇಲಾಖೆಯಲ್ಲಿ ಪ್ರಮೋಷನ್, ವರ್ಗಾವಣೆ ಪದನ್ಯೋತಿ ಸೇರಿದಂತೆ ಎಲ್ಲವು ಚಿಂತನೆ ನಡೆಯುತ್ತಿದೆ.
ದೇಶದಲ್ಲಿ ಎರಡು ಪ್ರಮುಖ ಭಾಷೆಗಳಾದ ಹಿಂದಿ ಹಾಗೂ ಇಂಗ್ಲಿಷ್ ಭಾಷೆಗೆ ಹೆಚ್ಚು ಅವಕಾಶ ಇದ್ದು ಆದರೆ ಉಳಿದ ಭಾಷೆಗಳಿಗೂ ಮಾನ್ಯತೆ ಸಿಗಬೇಕು ಎನ್ನುವುದು ನಮ ಆಶಯ ಎಂದರು.
