ಹೈದರಾಬಾದ್,ಫೆ.7-ಇದೇ ತಿಂಗಳ ಫೆ. 11 ರಂದು ತೆಲಂಗಾಣದಲ್ಲಿ ನಡೆಯಲಿರುವ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ನಡೆಸಬೇಕಿದ್ದ ಪ್ರಚಾರವನ್ನು ರದ್ದುಪಡಿಸಲಾಗಿದೆ.
ಪ್ರಚಾರಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವಾಗ, ಕಲ್ಯಾಣ್ ಅವರ ರಾಜ್ಯ ಪ್ರವಾಸವನ್ನು ವೇಳಾಪಟ್ಟಿಯಲ್ಲಿನ ಸಮಸ್ಯೆಗಳಿಂದಾಗಿ ರದ್ದುಗೊಳಿಸಲಾಗಿದೆ ಎಂದು ತೆಲಂಗಾಣ ಬಿಜೆಪಿ ಮುಖ್ಯ ವಕ್ತಾರ ಎನ್.ವಿ. ಸುಭಾಷ್ ಪಿಟಿಐಗೆ ತಿಳಿಸಿದ್ದಾರೆ. ತೆಲಂಗಾಣ ಬಿಜೆಪಿ ಅಧ್ಯಕ್ಷ ಎನ್.ರಾಮಚಂದರ್ ರಾವ್ ಫೆ. 4 ರಂದು ಕಲ್ಯಾಣ್ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಪ್ರಚಾರ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದರು.
ಆದಾಗ್ಯೂ, ಕಲ್ಯಾಣ್ ಅವರ ಪ್ರಚಾರವನ್ನು ರದ್ದುಪಡಿಸಿರುವುದು ಕಳೆದ ವರ್ಷ ಡಿಸೆಂಬರ್‌ನಲ್ಲಿ ತೆಂಗಿನ ಮರಗಳಿಂದ ಕೂಡಿದ ಆಂಧ್ರದ ಸುಂದರವಾದ ಕೊನಸೀಮಾ ಪ್ರದೇಶದ ಮೇಲೆ ದುಷ್ಟ ದೃಷ್ಟಿ ಬೀಳಲು ಆಂಧ್ರಪ್ರದೇಶದ ವಿಭಜನೆಗೆ ಒಂದು ಕಾರಣ ಎಂದು ಅವರು ಮಾಡಿದ ಹೇಳಿಕೆಯ ವಿವಾದದಿಂದಾಗಿ ಎಂಬ ಊಹಾಪೋಹ ಎದ್ದಿದೆ.
ಅವರ ಹೇಳಿಕೆಗಳು ತೆಲಂಗಾಣದ ವಿರುದ್ಧವಾಗಿವೆ ಎಂದು ಹೇಳಿಕೊಂಡ ಕಾಂಗ್ರೆಸ್ ನಾಯಕರು, ಅವರಿಂದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ಹೇಳಿಕೆಗಳನ್ನು ತಿರುಚಲಾಗಿದೆ ಎಂದು ಜನಸೇನಾ ಹೇಳಿತ್ತು.ಆದಾಗ್ಯೂ, ತೆಲಂಗಾಣ ಬಿಜೆಪಿ ಮೂಲಗಳು ವಿವಾದದಿಂದಾಗಿ ರದ್ದತಿಯಾಗಿದೆ ಎಂಬ ಊಹಾಪೋಹವನ್ನು ತಳ್ಳಿಹಾಕಿದೆ. ಪವನ್ ಕಲ್ಯಾಣ್ ಅವರ ಹೇಳಿಕೆಗಳು ತೆಲಂಗಾಣದಲ್ಲಿ ನಕಾರಾತಕ ಪರಿಣಾಮ ಬೀರಿಲ್ಲ ಎಂದು ಮೂಲಗಳು ತಿಳಿಸಿವೆ.
ಕಲ್ಯಾಣ್ ಒಬ್ಬ ಆಂಧ್ರದ ನಾಯಕ, ಅವರು ಹಿಂದೆ ತೆಲಂಗಾಣದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಿ ಮಹೇಶ್ ಕುಮಾರ್‌ಗೌಡ್ ಅವರು ಎರಡು ದಿನಗಳ ಹಿಂದೆ ಹೇಳಿದ್ದರು.
ತೆಲಂಗಾಣ ಬಿಜೆಪಿ ನಾಯಕರು ಪವನ್‌ಕಲ್ಯಾಣ್ ಅವರನ್ನು ಸಹಾಯಕ್ಕಾಗಿ ಬೇಡಿಕೊಂಡರು ಏಕೆಂದರೆ ಪಕ್ಷಕ್ಕೆ ರಾಜ್ಯದಲ್ಲಿ ಜನರ ಬೆಂಬಲವಿಲ್ಲ ಎಂದು ಗೌಡ್ ಹೇಳಿದ್ದರು.ಏತನಧ್ಯೆ, ಕಲ್ಯಾಣ್ ಅವರ ಜನ ಸೇನಾ ಕೂಡ ತೆಲಂಗಾಣ ಪುರಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
