Thursday, April 16, 2026
Homeರಾಜ್ಯಡಿ.ಕೆ.ರವಿ ಕಾಲದಲ್ಲೇ ಬಯಲಿಗೆ ಬಂದಿತ್ತು ಕಾನ್ಫಿಡೆಂಟ್‌ ಗ್ರೂಪ್‌ ಅಕ್ರಮ

ಡಿ.ಕೆ.ರವಿ ಕಾಲದಲ್ಲೇ ಬಯಲಿಗೆ ಬಂದಿತ್ತು ಕಾನ್ಫಿಡೆಂಟ್‌ ಗ್ರೂಪ್‌ ಅಕ್ರಮ

Confident Group's illegality came to light during D.K. Ravi's time

ಬೆಂಗಳೂರು, ಫೆ.7- ಪ್ರಭಾವಿ ನಾಯಕರ ಹೆಸರು ಹೇಳಲಾಗದೆ ಹಾಗೂ ಭಾರೀ ಪ್ರಮಾಣದ ದಂಡಕ್ಕೆ ಹೆದರಿ ರಿಯಲ್‌ ಉದ್ಯಮಿ ಸಿ.ಜೆ.ರಾಯ್‌ ಆತಹತ್ಯೆ ಮಾಡಿಕೊಂಡಿರಬಹುದು ಎಂಬ ವದಂತಿಗಳು ಹರಿದಾಡುತ್ತಿದ್ದು, ಈ ಹಿಂದೆ ಅಸಹಜ ಸಾವಿಗೀಡಾದ ಐಎಎಸ್‌‍ ಅಧಿಕಾರಿ ಡಿ.ಕೆ.ರವಿ ಅವರ ದಕ್ಷತೆಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್‌ ಆಗಿದೆ.

ಡಿ.ಕೆ.ರವಿ ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ನಕಲಿ ದಾಖಲೆ ಸೃಷ್ಟಿಸಿ 48 ಎಕರೆ ಸರ್ಕಾರಿ ಜಮೀನನ್ನು ಕಬಳಿಸಿದೆ ಎಂದು ಆರೋಪಿಸಿದರು. ಸರ್ಕಾರಿ ಆಸ್ತಿ ಉಳಿಸಲು ಜನರ ಪರವಾಗಿ ತಾವು ಹೋರಾಟ ನಡೆಸುವುದಾಗಿ ವಿಡಿಯೋ ಬಾರಿ ಚರ್ಚೆಗೆ ಗ್ರಾಸವಾಗಿದೆ.

ಭೂ ಕಬಳಿಕೆದಾರರ ವಿರುದ್ಧ ದಿಟ್ಟ ನಿಲುವು ಹೊಂದಿದ್ದ ಡಿ.ಕೆ.ರವಿ ಅವರನ್ನು ಕೋಲಾರದಿಂದ ವರ್ಗಾವಣೆ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಅವರು ಅಸಹಜ ಸಾವೀಗಿಡಾಗಿದ್ದರು. ಸಿಬಿಐ ತನಿಖೆ ನಡೆದು ಆತಹತ್ಯೆ ಎಂದು ಹೇಳಿ ಕೈ ತೊಳೆದುಕೊಂಡಿತ್ತು. ಪ್ರಕರಣದಲ್ಲಿ ಕೆಲಸ ಪ್ರಭಾವಿಗಳ ಹೆಸರು ತಳುಕು ಹಾಕಿಕೊಂಡಿತ್ತು. ಸಿಬಿಐ ವರದಿಯ ಬಳಿಕ ಎಲ್ಲರೂ ಎದೆಯುಬ್ಬಿಸಿ ತಮ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿತ್ತು ಎಂದು ಹೇಳಿಕೊಂಡರು. ಅಲ್ಲಿಗೆ ಡಿ.ಕೆ.ರವಿ ಅವರ ಆತಹತ್ಯೆ ಮುಗಿದ ಅಧ್ಯಾಯವಾಗಿತ್ತು.

ಈಗ ಸಿ.ಜೆ.ರಾಯ್‌ ಆತಹತ್ಯೆ ಸಂದರ್ಭದಲ್ಲಿ ಡಿ.ಕೆ.ರವಿ ಅವರ ವಿಡಿಯೋ ವೈರಲ್‌ ಆಗಿರುವುದು ನಾನಾ ರೀತಿಯ ಚರ್ಚೆಗಳು ಹುಟ್ಟು ಹಾಕಿದೆ. ಯಾವುದೇ ಸಾಲ ಮಾಡದೇ 10 ಸಾವಿರ ಕೋಟಿ ರೂಪಾಯಿಯ ಉದ್ಯಮ ಕಟ್ಟಲಾಗಿತ್ತು ಎಂದು ಸಿ.ಜೆ.ರಾಯ್‌ ಅವರನ್ನು ಹೊಗಳಲಾಗುತ್ತಿದೆ. ಅವರ ಪರಿಶ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.

ಆದರೆ ರಾಯ್‌ ಅವರ ಆರಂಭದಲ್ಲಿ ಸಾಧಾರಣವಾದ ಶ್ರಮಿಕ ವರ್ಗಕ್ಕೆ ಸೇರಿದ್ದರು. ಕೇರಳ ಮೂಲದ ನಂಬೂದಿರಿ ಕುಟುಂಬದ ಆಪ್ತತೆ ಅವರಿಗೆ ಅನಾಮತ್‌ ಆಸ್ತಿಗಳನ್ನು ಒದಗಿಸಿಕೊಟ್ಟಿತ್ತು. ಅನಂತರ ರಾಜಕಾರಣಿಗಳ ಬೇನಾಮಿ ಹಾಗೂ ಜಂಟಿ ಹೂಡಿಕೆಯೊಂದಿಗೆ ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಉನ್ನತಿಗಳಿಸಿದರು ಎಂದು ಹೇಳಲಾಗುತ್ತಿದೆ.

ರಾಜಕಾರಣಿಗಳೇ ಪಾಲುದಾರರಾದಾಗ ಸರ್ಕಾರಿ ದಾಖಲೆಗಳ ಹಾಗೂ ಇತರೆ ಕೆಲಸಗಳು ಸಲೀಸಾಗಿ ನಡೆಯುತ್ತವೆ. ಬಂಗಾರಪೇಟೆಯಲ್ಲಿ 48 ಎಕರೆ ಒತ್ತುವರಿ ಮಾಡಲಾಗಿದೆ ಎಂದು ಡಿ.ಕೆ.ರವಿಯವರು ಹೇಳಿದ್ದ ಜಾಗದಲ್ಲಿ ಈಗ ಐಷಾರಾಮಿ ಗಾಲ್ಫ್ ಕ್ಲಬ್‌ ತಲೆ ಎತ್ತಿದೆ. ಆಡಳಿತ ಪಕ್ಷದ ಶಾಸಕರು ಗಾಲ್‌್ಫ ಕ್ಲಬ್‌ ಗಾಗಿ ಯಾವುದೇ ಒತ್ತುವರಿಯಾಗಿಲ್ಲ.

ಪಿತ್ರಾರ್ಜಿತ ಆಸ್ತಿಗಳನ್ನು ಖರೀದಿಸಲಾಗಿದೆ ಎಂದು ವಿಧಾನಸಭೆಯಲ್ಲಿ ಒಂದೂವರೆ ಗಂಟೆ ಸಮರ್ಥಿಸಿಕೊಂಡಿದ್ದರು. ತಮದೇ ಪಕ್ಷದ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅದು ನಂತರದ ದಿನಗಳಲ್ಲಿ ಸದರಿ ಸಚಿವರು ಮತ್ತು ಶಾಸಕರ ನಡುವೆ ಮುಸುಕಿನ ಗುದ್ದಾಟಕ್ಕೂ ಇದು ಕಾರಣವಾಗಿದೆ. ಸಿ.ಜೆ.ರಾಯ್‌ ಗಾಲ್ಫ್ ಕ್ಲಬ್‌ ಹಾಗೂ ಸುತ್ತಮುತ್ತಲ ಜಮೀನಿಗೆ ಪಾಲುದಾರರು ಎಂದು ಶಾಸಕರೇ ಹೇಳಿದ್ದರು.

ಈಗ ಸಿ.ಜೆ.ರಾಯ್‌ ಆತಹತ್ಯೆ ಮಾಡಿಕೊಂಡ ಬಳಿಕ ಡಿ.ಕೆ.ರವಿ ಹೇಳಿಕೆ ಸದ್ದು ಮಾಡುತ್ತಿದೆ. ಮತ್ತೊಂದೆಡೆ ಕೇರಳ ವಿಧಾನಸಭೆ ಚುನಾವಣೆಯ ಸಂಪನೂಲ ಕ್ರೋಢೀಕರಣದ ವದಂತಿಗಳು ಹರಿದಾಡುತ್ತಿವೆ. ರಾಜ್ಯದ ಪ್ರಭಾವಿ ಕಾಂಗ್ರೆಸ್‌‍ ನಾಯಕರ ಆಜ್ಞೆಯ ಮೇರೆಗೆ ಕೇರಳ ಚುನಾವಣೆಗೆ ಅನಧಿಕೃತವಾಗಿ ಕೋಟ್ಯಂತರ ರೂಪಾಯಿಗಳನ್ನು ರವಾನೆ ಮಾಡಲಾಗಿತ್ತು. ಕಳೆದ ಡಿಸೆಂಬರ್‌ ನಲ್ಲಿ ಈ ಬಗ್ಗೆ ಮಾಹಿತಿ ಪಡೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು. ಒಂದೊಂದೇ ಸ್ಪಷ್ಟನೆ ಕೇಳಲು ಪದೇ ಪದೇ ವಿಚಾರಣೆ ನಡೆಸುತ್ತಿದ್ದರು. ಇದರಿಂದ ಜರ್ಜರಿತರಾಗಿದ್ದ ರಾಯ್‌, ಪ್ರಭಾವಿ ನಾಯಕರ ಹೆಸರು ಹೇಳಲಾಗದೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.

ಜೊತೆಗೆ ಎದುರಾಳಿಗಳಿಗೂ ಹಣಕಾಸಿನ ಸೌಲಭ್ಯ ಒದಗಿಸಬೇಕು ಎಂಬ ಆಗ್ರಹ ಇತ್ತು. ಒಂದು ವೇಳೆ ಹಣಕಾಸಿನ ಸೌಲಭ್ಯ ಮಾಡಿಕೊಡದೆ ಇದ್ದರೆ ಸಾವಿರಾರು ಕೋಟಿ ರೂಪಾಯಿಗಳನ್ನು ದಂಡದ ರೂಪದಲ್ಲಿ ಪಾವತಿ ಮಾಡಬೇಕಿದೆ ಎಂದು ಎಚ್ಚರಿಸಲಾಗಿತ್ತು ಎನ್ನಲಾಗಿದೆ.
ರಾಯ್‌ ಆತಹತ್ಯೆ ಮಾಡಿಕೊಂಡು ವಾರ ಕಳೆದಿದೆ. ಠಾಣೆಯ ಇನ್ಸ್ ಪೆಕ್ಟರ್‌ ಹಂತದಲ್ಲೇ ತನಿಖೆಯಾಗಬೇಕಿದ್ದ ಪ್ರಕರಣಕ್ಕೆ ರಾಜ್ಯ ಸರ್ಕಾರ ಮೂವರು ಐಪಿಎಸ್‌‍ ಅಧಿಕಾರಿಗಳನ್ನು ಒಳಗೊಂಡ ಎಸ್‌‍ಐಟಿ ರಚನೆ ಮಾಡಿದೆ. ಆದರೆ ಈವರೆಗೂ ಆತಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಪ್ರಕರಣದ ದಿಕ್ಕನ್ನು ಬದಲಿಸುವ ಸಲುವಾಗಿಯೇ ಎಸ್‌‍ಐಟಿ ರಚನೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಪೂರಕವಾಗಿ ಆತಹತ್ಯೆಗೆ ಇನ್ನೂ ನಿಗೂಢವಾಗಿದೆ. ನಾನಾ ರೀತಿಯ ವದಂತಿಗಳು ಹಬ್ಬುತ್ತಿವೆ. ಸಿ.ಜೆ.ರಾಯ್‌ ಪ್ರಾಮಾಣಿಕ, ದಕ್ಷ ಎನ್ನುವ ಚರ್ಚೆಗಳ ನಡುವೆ ಡಿ.ಕೆ.ರವಿ ಹೇಳಿಕೆಯ ವೈರಲ್‌ ವಿಡಿಯೋ ಆಸ್ತಿ ಸಂಪಾದನೆಯ ಮಾರ್ಗಗಳನ್ನು ಅನುಮಾನದಿಂದ ನೋಡುವಂತೆ ಮಾಡಿದೆ.

RELATED ARTICLES

Latest News