Homeರಾಷ್ಟ್ರೀಯಮತ್ತೆ ದೆಹಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ

ಮತ್ತೆ ದೆಹಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ

Bomb threat again for Delhi schools

ನವದೆಹಲಿ, ಫೆ.9- ರಾಷ್ಟ್ರ ರಾಜಧಾನಿಯ ಕನಿಷ್ಠ 10 ಶಾಲೆಗಳಿಗೆ ಬಾಂಬ್‌ ಬೆದರಿಕೆ ಇಮೇಲ್‌ಗಳು ಬಂದಿದೆ.ಬೆಳಿಗ್ಗೆ ನಗರದ ವಿವಿಧ ಭಾಗಗಳಲ್ಲಿರುವ ಹಲವಾರು ಶಿಕ್ಷಣ ಸಂಸ್ಥೆಗಳಿಂದ ತುರ್ತು ಕರೆಗಳು ಬಂದವು, ನಂತರ ಅಗ್ನಿಶಾಮಕ ದಳ ಮತ್ತು ಬಾಂಬ್‌ ನಿಷ್ಕ್ರಿಯ ತಂಡಗಳನ್ನು ಸ್ಥಳಗಳಿಗೆ ರವಾನಿಸಲಾಯಿತು.

ಇಂದು ಒಟ್ಟು 10 ಶಾಲೆಗಳಿಗೆ ಬಾಂಬ್‌ ಬೆದರಿಕೆಗಳು ಬಂದಿವೆ. ಅಗ್ನಿಶಾಮಕ ದಳ
ತಂಡಗಳು ತಕ್ಷಣ ಆವರಣಕ್ಕೆ ತಲುಪಿದವು. ಪರಿಶೀಲನೆ ನಡೆಯುತ್ತಿದೆ ಎಂದು ಡಿಎಫ್‌ಎಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳ ಮಕ್ಕಳನ್ನು ಸ್ಥಳಾಂತರಿಸಲಾಗಿದೆ.

ಶೃಂಗ ದಳದ ಜೊತೆಗೆ ಬಾಂಬ್‌ ಪತ್ತೆ ಮತ್ತು ವಿಲೇವಾರಿ ತಂಡಗಳು ವ್‌ಯಾಪಕ ಶೋಧ ನಡೆಸುತ್ತಿದ್ದು ಇದು ಭಯ ಹುಟ್ಟಿಸುವ ಕುಚೋದ್ಯ ಎಂದು ಪೊಲೀಸರು ತಿಳಿಸಿದ್ದಾರೆ. ಆದರೂ ಭದ್ರತಾ ದೃಷ್ಠಿಯಿಂದ ವ್ಯಾಪಕ ತಪಾಸಣೆ ನಡೆಸಲಾಗುತ್ತಿದೆ.

RELATED ARTICLES
spot_img

Latest News