ಯಾದಗಿರಿ,ಫೆ.10-ಹೆತ್ತ ತಾಯಿಯೇ ತನ್ನ ಮಗಳ ಕತ್ತು ಹಿಸುಕಿ ಕೊಲೆ ಮಾಡಿರುವ ಅಮಾನುಷ ಘಟನೆ ಇಲ್ಲಿನ ರಾಜೀವ್ ಗಾಂಧಿ ನಗರದಲ್ಲಿ ನಡೆದಿದೆ. ಪ್ರತಿಭಾ(11) ಕೊಲೆಯಾದ ಬಾಲಕಿ ಆಕೆಯ ತಾಯಿ ನಿರ್ಮಲಾಳನ್ನು ಪೊಲೀಸರು ಬಂಧಿಸಿದ್ದಾರೆ.
ಮದ್ಯ ಸೇವನೆ ಚಟ ಬೆಳಿಸಿಕೊಂಡಿದ್ದ ನಿರ್ಮಲಾ ಕುಡದ ನಶೆಯಲ್ಲಿ ಮನೆಗೆ ಬಂದಿದ್ದಳು. ಇದನ್ನು ನೋಡಿದ ಮಗಳು ಪ್ರತಿಭಾ ಬೈದಿದ್ದಾಳೆ ಇದರಿಂದ ಇಬ್ಬರ ನಡುವೆ ಜಗಳ ನಡೆದಿದೆ.
ಈ ವೇಳೆ ಪಾನಮತ್ತಳಾಗಿದ್ದ ತಾಯಿ ಆಕ್ರೋಶಗೊಂಡು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂಬ ಪೊಲೀಸರು ತಿಳಿಸಿದ್ದಾರೆ.
ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಪುಟ್ಟ ಬಾಲಕಿ ಸಾವಿನಿಂದ ಕುಟುಂಬ ಸದಸ್ಯರು ಕಣ್ಣೀರು ಹಾಕಿದ್ದಾರೆ.
ಸ್ಥಳೀಯರು ಕೂಡ ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ.
