ನಿತ್ಯ ನೀತಿ : ಕೋಪ ಎಲ್ಲರಿಗೂ ತಕ್ಷಣಕ್ಕೆ ಬರುತ್ತದೆ. ಆದರೆ ತಾಳೆ ಎನ್ನುವುದು ಬದುಕನ್ನು ಚೆನ್ನಾಗಿ ಅರಿತವನ ಬಳಿ ಮಾತ್ರವೇ ಇರುತ್ತದೆ..!!
ಪಂಚಾಂಗ : ಸೋಮವಾರ, 16-02-2026
ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಮಾಘ / ಪಕ್ಷ: ಕೃಷ್ಣ / ತಿಥಿ: ಚತುರ್ದಶಿ / ನಕ್ಷತ್ರ: ಶ್ರವಣ / ಯೋಗ: ವರೀಯಾನ / ಕರಣ: ಚತುಷ್ಪಾದ
ಸೂರ್ಯೋದಯ – 06.43
ಸೂರ್ಯಾಸ್ತ – 6.26
ರಾಹುಕಾಲ – 7.30-9.00
ಯಮಗಂಡ ಕಾಲ – 10.30- 12.00
ಗುಳಿಕ ಕಾಲ – 1.30-3.00
ರಾಶಿಭವಿಷ್ಯ :
ಮೇಷ: ಕೌಟುಂಬಿಕ ಕಲಹಗಳು ಬೀದಿಗೆ ಬರುವ ಸಾಧ್ಯತೆಗಳಿವೆ. ಸಹೋದ್ಯೋಗಿಗಳೇ ಶತ್ರುಗಳಾಗುವರು.
ವೃಷಭ: ಸಮಾಧಾನದಿಂದ ಕಾರ್ಯನಿರ್ವಹಿಸಿದಲ್ಲಿ ಕೆಲಸ-ಕಾರ್ಯಗಳಲ್ಲಿ ಜಯ ಕಟ್ಟಿಟ್ಟ ಬುತ್ತಿ.
ಮಿಥುನ: ಸಾಂಸಾರಿಕ ಜೀವನ ತೃಪ್ತಿಕರವಾಗಿರಲಿದೆ. ನೌಕರರಿಗೆ ಹೊಸ ವಸತಿ ವ್ಯವಸ್ಥೆಯಾಗಲಿದೆ.
ಕಟಕ: ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಸಂತಸದಿಂದ ಕೆಲಕಾಲ ಕಳೆಯುವಿರಿ.
ಸಿಂಹ: ವೈದ್ಯರಿಗೆ ವಿಶೇಷ ರೀತಿಯ ಅನುಭವ ಸಿಗಲಿದೆ. ಮೇಲಾಧಿಕಾರಿಗಳೊಂದಿಗೆ ಮೆಚ್ಚುಗೆ ಪಡೆಯಲು ಹೆಚ್ಚಿನ ಪ್ರಯತ್ನ ನಡೆಸಿ.
ಕನ್ಯಾ: ಕೆಲಸ-ಕಾರ್ಯ ಗಳು ಮಂದಗತಿಯಲ್ಲಿ ಸಾಗಲಿವೆ. ಉದ್ಯೋಗಿಗಳು ಅಲ್ಪ ಪ್ರಗತಿ ಕಾಣುವರು.
ತುಲಾ: ಲೇವಾದೇವಿ ವ್ಯವಹಾರಗಳು ನಿರಂತರ ವಾಗಿ ಮುಂದುವರೆಯಲಿವೆ. ಸದುದ್ದೇಶದಿಂದ ಕೆಲವು ಕೆಲಸಗಳನ್ನು ಗೌಪ್ಯವಾಗಿ ನಿರ್ವಹಿಸಿ.
ವೃಶ್ಚಿಕ: ಹೊಸ ಕೆಲಸ ಆರಂಭಿಸಲು ಕುಟುಂಬ ದವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ.
ಧನುಸ್ಸು: ಉದ್ಯೋಗ ನಿಮಿತ್ತ ಪ್ರಯಾಣ ಮಾಡು ವಿರಿ. ಆರೋಗ್ಯ ಸಮಸ್ಯೆಗೆ ವೈದ್ಯರನ್ನು ಭೇಟಿ ಮಾಡಿ.
ಮಕರ: ನಿಯೋಜಿತ ಕಾರ್ಯಗಳನ್ನು ಸಕಾಲದಲ್ಲಿ ಮುಕ್ತಾಯಗೊಳಿಸಿದ ಸಮಾಧಾನ ಸಿಗಲಿದೆ.
ಕುಂಭ: ದೂರ ಪ್ರಯಾಣದಿಂದ ಮನಸ್ಸಿಗೆ ನೆಮದಿ ಸಿಗಬಹುದು. ಮಕ್ಕಳಿಂದ ಸಂತೋಷ ಸಿಗಲಿದೆ.
ಮೀನ: ಹೊಸದಾಗಿ ಪರಿಚಯವಾಗುವ ಉದ್ಯಮಿ ಯೊಂದಿಗೆ ವ್ಯವಹಾರ ಆರಂಭಿಸಲು ಯೋಚಿಸುವಿರಿ.
