ಜೈಪುರ,ನ.25- ಜಿದ್ದಾಜಿದ್ದಿನ ಕಣವಾಗಿರುವ ರಾಜಸ್ಥಾನದ 199 ವಿಧಾನಸಭಾ ಕ್ಷೇತ್ರಗಳಿಗೆ ಇಂದು ನಡೆದ ಒಂದೇ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಘಟಾನುಘಟಿ ರಾಜಕೀಯ ನಾಯಕರ ಭವಿಷ್ಯವನ್ನು ಮತದಾರರ ಬರೆದಿದ್ದಾನೆ.
ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೂ ನಡೆದ ಮತದಾನಕ್ಕೆ ಈ ಬಾರಿ ಮತದಾರ ಹೆಚ್ಚಿನ ಉತ್ಸಾಹ ತೋರಿಸಿರುವುದು ವಿಶೇಷವಾಗಿದೆ. ಕೆಲವು ಕಡೆ ತಾಂತ್ರಿಕ ಕಾರಣಗಳು, ರಾಜಕೀಯ ಪಕ್ಷಗಳ ನಾಯಕರ ನಡುವೆ ಮಾತಿನ ಚಕಮಕಿ, ಮತಪಟ್ಟಿಯಲ್ಲಿ ಹೆಸರು ಕೈಬಿಟ್ಟಿದ್ದು, ಇಂತಹ ಸಣ್ಣಪುಟ್ಟ ಲೋಪಗಳನ್ನು ಹೊರತುಪಡಿಸಿದರೆ ಬಹುತೇಕ ಎಲ್ಲ ಶಾಂತಿಯುತ ಮತದಾನ ನಡೆದಿದೆ.
ರಾಜ್ಯದಾದ್ಯಂತ ಒಟ್ಟು 51,507 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕೂನಾರ್ ಅವರ ನಿಧನದ ನಂತರ ಶ್ರೀಗಂಗಾನಗರ ಜಿಲ್ಲೆಯ ಕರಣ್‍ಪುರ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿರುವುದರಿಂದ 199 ಸ್ಥಾನಗಳಲ್ಲಿ ಮತದಾನ ನಡೆಯಿತು.
ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್, ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್, ಮಾಜಿ ಮುಖ್ಯಮಂತ್ರಿ ವಸುಂಧರ ರಾಜೇ, ಕೇಂದ್ರ ಸಚಿವರಾದ ಅರ್ಜುನ್ ಮೇಗರ್‍ವಾಗಲ್ ಸೇರಿದಂತೆ ಹಲವರು ತಮ್ಮ ತಮ್ಮ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು.
ಬರ ಅಧ್ಯಯನ ವರದಿ ರಾಜ್ಯಪಾಲರಿಗೆ ಸಲ್ಲಸಲು ಜೆಡಿಎಸ್ ಸಿದ್ದತೆ
ರಾಜ್ಯದಲ್ಲಿ ಎಲ್ಲ ಸಮೀಕ್ಷೆಗಳನ್ನು ತಲೆಕೆಳಗೆ ಮಾಡಿ ಮತದಾರ ನಮ್ಮನ್ನೇ ಎರಡನೇ ಬಾರಿಗೆ ಅಧಿಕಾರಕ್ಕೆ ತರಲಿದ್ದಾನೆ ಎಂಬ ವಿಶ್ವಾಸವನ್ನು ಅಶೋಕ್ ಗೆಲ್ಹೋಟ್ ವ್ಯಕ್ತಪಡಿಸಿದರು.ಇತ್ತ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯೆಂದೇ ಬಿಂಬಿತವಾಗಿರು ವಸುಂಧರ ರಾಜೇ ಕಳೆದ ಐದು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ, ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಮಹಿಳೆಯರಿಗೆ ಸುರಕ್ಷತೆ ಇರದಿರುವುದು ಅತ್ಯಾಚಾರ, ಪ್ರಶ್ನೆಪತ್ರಿಕೆಗಳ ಸೋರಿಕೆ ಹೀಗೆ ಹಗರಣಗಳ ವಿರುದ್ದವೂ ಮತದಾರ ಆಕ್ರೋಶಗೊಂಡಿದ್ದು, ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದಾನೆ ಎಂದು ಭರವಸೆ ವ್ಯಕ್ತಪಡಿಸಿದರು.
ಹಿಂದೆಂದೂ ಕಾಣದ ಜಿದ್ದಾಜಿದ್ದಿನ ರಣರಂಗವಾಗಿ ಮಾರ್ಪಟ್ಟಿರುವ ರಾಜಸ್ಥಾನದಲ್ಲಿ ಬಿಜೆಪಿಯಿಂದ ಸಂಸದರು ಕೂಡ ಈ ಬಾರಿ ಕಣಕ್ಕಿಳಿದಿರುವುದು ವಿಶೇಷವಾಗಿದೆ. ಕೇಂದ್ರದ ಮಾಜಿ ಸಚಿವರಾಗಿರುವ ಹಾಲಿ ಸಂಸದ ರಾಜವರ್ಧನ ಸಿಂಗ್ ರಾಥೋಡ್, ದಿವ್ಯಕುಮಾರಿ, ನರೇಂದ್ರಕುಮಾರ್ ಬಾಬ ಬಾಲಕಾನ್ , ಭಗೀರಥ್ ಚೌಧರಿ, ದೇವ್‍ಜೀ ಪಟೇಲ್ ಸೇರಿದಂತೆ ಹಾಲಿ ಸಂಸದರೇ ಸ್ಪರ್ಧೆ ಮಾಡಿರುವುದು ವಿಶೇಷ.
ಆಡಳಿತ ವಿರೋಧಿ ಅಲೆಯನ್ನು ತಡೆಗಟ್ಟಲು ಕಾಂಗ್ರೆಸ್ ಕೂಡ ಕೆಲ ಶಾಸಕರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು.
199 ವಿಧಾನಸಭಾ ಕ್ಷೇತ್ರಗಳಲ್ಲಿ 5,26,90,146 ಮತದಾರರಿದ್ದಾರೆ. ಡಿಸೆಂಬರ್ 3 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಕಣದಲ್ಲಿರುವ 1,862 ಅಭ್ಯರ್ಥಿಗಳ ಪೈಕಿ ಕೆಲವು ಪ್ರಮುಖ ಮುಖಗಳೆಂದರೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (ಸರ್ದಾರ್‍ಪುರ), ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ (ಟೋಂಕ್), ರಾಜ್ಯ ಪಿಸಿಸಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸ್ರಾ (ಲಚ್‍ಮಾಂಗಢ), ಬಿಜೆಪಿಯ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ( ಝಲ್ರಾಪಟನ್), ಆರ್ ಲ್ಪಿ ಸಂಚಾಲಕ ಹನುಮಾನ್ ಬೇನಿವಾಲ್ (ಖಿನ್ವ್ಸರ್).
ರಾಜ್ಯಾದ್ಯಂತ 1.70 ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 70,000 ರಾಜಸ್ಥಾನ ಪೊಲೀಸ್ ಸಿಬ್ಬಂದಿ, 18,000 ರಾಜಸ್ಥಾನ ಗೃಹರಕ್ಷಕರು, 2,000 ರಾಜಸ್ಥಾನ ಗಡಿ ಗೃಹರಕ್ಷಕರು, 15,000 ಇತರ ರಾಜ್ಯಗಳಿಂದ (ಉತ್ತರ ಪ್ರದೇಶ, ಗುಜರಾತ್, ಹರಿಯಾಣ, ಮಧ್ಯಪ್ರದೇಶ) ಗೃಹ ರಕ್ಷಕರು ಮತ್ತು 120 ಕಂಪನಿಗಳನ್ನು ದಿನಕ್ಕೆ ನಿಯೋಜಿಸಲಾಗಿದೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಮುಖ ಚಿರಂಜೀವಿ ಆರೋಗ್ಯ ವಿಮೆಯ ಅಡಿಯಲ್ಲಿ ವಿಮಾ ಮೊತ್ತವನ್ನು 25 ಲಕ್ಷದಿಂದ 50 ಲಕ್ಷಕ್ಕೆ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿತು, 4 ಲಕ್ಷ ಸರ್ಕಾರಿ ಉದ್ಯೋಗಗಳು ಸೇರಿದಂತೆ 10 ಲಕ್ಷ ಉದ್ಯೋಗಗಳು ಮತ್ತು ಹಳೆಯ ಪಿಂಚಣಿ ಯೋಜನೆಯನ್ನು. ಮತ್ತೆ ಅಕಾರಕ್ಕೆ ಬಂದರೆ ಜಾತಿ ಗಣತಿ ನಡೆಸುವ ಬಗ್ಗೆಯೂ ಒತ್ತು ನೀಡಿದೆ.
ದೀರ್ಘ ಕಾಲದ ಗೆಳತಿಯ ವರಿಸಿದ ನವದೀಪ್ ಶೈನಿ
ಕಳೆದ 25 ವರ್ಷಗಳಿಂದ ರಾಜಸ್ಥಾನದಲ್ಲಿ ಯಾವುದೇ ರಾಜಕೀಯ ಪಕ್ಷವು ಎರಡನೇ ಬಾರಿಗೆ ಅಧಿಕಾರವನ್ನು ಉಳಿಸಿಕೊಂಡಿಲ್ಲದ ಕಾರಣ, ಈ ಬಾರಿ 1998ರಿಂದ ಐದು ವರ್ಷಗಳಿಗೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರಕ್ಕೆ ಬರುತ್ತಿವೆ. ಆಡಳಿತಾರೂಢ ಕಾಂಗ್ರೆಸ್ ರಾಜಸ್ಥಾನದಲ್ಲಿ ತನ್ನ ಸರ್ಕಾರವನ್ನು ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರೆ, ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಮುನ್ನ ವಿರೋಧ ಪಕ್ಷ ಬಿಜೆಪಿ ರಾಜ್ಯದಲ್ಲಿ ಅಕಾರ ಹಿಡಿಯುವತ್ತ ಕಣ್ಣಿಟ್ಟಿದೆ.