Saturday, April 18, 2026
Homeಅಂತಾರಾಷ್ಟ್ರೀಯಇರಾನ್‌ ಮಾಹಿತಿದಾರರಿಗೆ ನೆರವು ನೆರವು ನೀಡುವುದಾಗಿ ಸಿಐಎ ಪ್ರಕಟಣೆ

ಇರಾನ್‌ ಮಾಹಿತಿದಾರರಿಗೆ ನೆರವು ನೆರವು ನೀಡುವುದಾಗಿ ಸಿಐಎ ಪ್ರಕಟಣೆ

CIA's Digital Outreach: Secure Channels to Connect with Potential Iranian Informants

ವಾಷಿಂಗ್ಟನ್‌,ಫೆ.25- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಇರಾನ್‌ ಮೇಲೆ ಮಿಲಿಟರಿ ದಾಳಿ ನಡೆಸಲು ಚಿಂತಿಸುತ್ತಿರುವ ಹಿನ್ನೆಲೆಯಲ್ಲಿ ಸೆಂಟ್ರಲ್‌ ಇಂಟೆಲಿಜೆನ್ಸ್ ಏಜೆನ್ಸಿ (ಸಿಐಎ)ಯು ಇರಾನ್‌ನಲ್ಲಿನ ಸಮರ್ಥ ಮಾಹಿತಿದಾರರಿಗೆ ನೆರವು ನೀಡುವುದಾಗಿ ಪ್ರಕಟಿಸಿದೆ.

ಫಾರ್ಸಿ, ಕೊರಿಯನ್‌, ರಷ್ಯನ್‌ ಮತ್ತು ಮ್ಯಾಂಡರಿನ್‌ ಭಾಷಿಗ ಮಾಹಿತಿದಾರರನ್ನು ನೇಮಕ ಮಾಡಿಕೊಳ್ಳಲು ಚಿಂತಿಸಿರುವ ಸಿಐಎ ಎಕ್‌್ಸ, ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನಲ್ಲಿ ಪಾರಸಿ ಭಾಷೆಯಲ್ಲಿ ಸಂದೇಶ ಪೋಸ್ಟ್‌ ಮಾಡಿದೆ.

ಇರಾನ್‌ನೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕವು ಮಧ್ಯಪ್ರಾಚ್ಯದಲ್ಲಿ ದಶಕಗಳಲ್ಲೇ ಕಂಡರಿಯದಷ್ಟು ಸೇನಾ ಜಮಾವಣೆ ಮಾಡಿದೆ. ಇರಾನ್‌ನಲ್ಲಿ ಕಳೆದ ತಿಂಗಳು ನಡೆದ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ದಮನಿಸಿರುವ ಇರಾನ್‌ ಆಡಳಿತದ ವಿರುದ್ಧ ಕೆಂಡಾಮಂಡಲವಾಗಿರುವ ಟ್ರಂಪ್‌ ಮಿಲಿಟರಿ ಕ್ರಮದ ಬೆದರಿಕೆಯೊಡ್ಡಿದ್ದಾರೆ.

ಇರಾನ್‌ನ ವಿವಾದಿತ ಅಣ್ವಸ್ತ್ರ ಕಾರ್ಯಕ್ರಮದ ಕುರಿತು ಅಸಮಾಧಾನಗೊಂಡಿರುವ ಟ್ರಂಪ್‌ ಈ ನಿಟ್ಟಿನಲ್ಲಿ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳದಿದ್ದಲ್ಲಿ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ವಾರ ಮತ್ತೊಂದು ಸುತ್ತಿನ ಅಣ್ವಸ್ತ್ರ ಕುರಿತ ಮಾತುಕತೆ ನಿಗದಿಯಾಗಿದೆ.

ಇರಾನ್‌ನಲ್ಲಿನ ದಂಗೆಯ ಕುರುಹಾಗಿ ತೆಹರಾನ್‌ನಲ್ಲಿ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯಗಳಲ್ಲಿ ಸೋಮವಾರ ಸರ್ಕಾರ ವಿರೋಧಿ ಪ್ರತಿಭಟನೆಗಳನ್ನು ನಡೆಸಿದರು.

RELATED ARTICLES

Latest News