Thursday, April 16, 2026
Homeಜಿಲ್ಲಾ ಸುದ್ದಿಗಳುಟಾಟಾಎಸ್‌‍-ಕ್ಯಾಂಟರ್‌ ನಡುವೆ ಭೀಕರ ಅಪಘಾತ, ತಪ್ಪಿದ ಭಾರಿ ಅನಾಹುತ

ಟಾಟಾಎಸ್‌‍-ಕ್ಯಾಂಟರ್‌ ನಡುವೆ ಭೀಕರ ಅಪಘಾತ, ತಪ್ಪಿದ ಭಾರಿ ಅನಾಹುತ

A terrible accident between Tata Ace and Canter, a major disaster averted

ಚಿಕ್ಕಬಳ್ಳಾಪುರ, ಫೆ.25- ಟಾಟಾಎಸ್‌‍ ಮತ್ತು ಕ್ಯಾಂಟರ್‌ ನಡುವೆ ಭೀಕರ ಅಪಘಾತವಾಗಿ ಟಾಟಾಎಸ್‌‍ನಲ್ಲಿದ್ದ ಆರು ಮಂದಿ ಕೃಷಿ ಮಹಿಳಾ ಕಾರ್ಮಿಕರು ಗಂಭೀರ ಗಾಯಗೊಂಡಿರುವ ಘಟನೆ ತಾಲ್ಲೂಕಿನ ನಾಯನಹಳ್ಳಿ ಗೇಟ್‌ ಬಳಿ ನಿನ್ನೆ ಸಂಜೆ ನಡೆದಿದೆ.

ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿಯಾಗದೇ ಭಾರಿ ಅನಾಹುತ ತಪ್ಪಿದಂತಾಗಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅಜ್ಜವಾರ ಗ್ರಾಮದ ಕೂಲಿ ಕಾರ್ಮಿಕ ಮಹಿಳೆಯರಾದ ವಿದ್ಯಾ, ಸಾವಿತ್ರಮ ,ಭಾವನ, ನಾಗಮ, ಲಕ್ಷ್ಮಮ, ಮುನಿರತ್ನಮ ಅವರುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ರೈತರ ತೋಟದಲ್ಲಿ ಆಲೂಗಡ್ಡೆ ಕೀಳಲು ಕರೆದುಕೊಂಡು ಹೋಗಿದ್ದ ಟಾಟಾಎಸ್‌‍ ವಾಹನ ಮರಳಿ ಕೂಲಿ ಕಾರ್ಮಿಕರನ್ನು ಅವರ ಸ್ವಗ್ರಾಮ ಅಜ್ಜವಾರಕ್ಕೆ ತಲುಪಿಸಲು ವಾಪಸ್ಸು ಬರುತ್ತಿದ್ದಾಗ ನಾಯನಹಳ್ಳಿ ಗ್ರಾಮದ ಬಳಿ ಚಿಕ್ಕಬಳ್ಳಾಪುರದಿಂದ ಶಿಢ್ಲಘಟ್ಟ ಕಡೆ ತೆರಳುತ್ತಿದ್ದ ಕ್ಯಾಂಟರ್‌ ನಡುವೆ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಟಾಟಾ ಎಸ್‌‍ ವಾಹನ ನಜ್ಜುಗುಜ್ಜಾಗಿ ಟಾಟಾಎಸ್‌‍ ಗಾಡಿಯಲ್ಲಿದ್ದ ಆರು ಜನ ಮಹಿಳಾ ಕೂಲಿ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದೆ.ಇತ್ತೀಚಿಗೆ ಒಂದೇ ಬೈಕಲ್ಲಿ ನಾಲ್ಕು ಜನ ಪ್ರಯಾಣ ಮಾಡಿ ಅಪಘಾತಾಕ್ಕೊಳಗಾಗಿ ಜೀವ ಕಳೆದುಕೊಂಡ ಗ್ರಾಮದವರೇ ನಿನ್ನೆಯ ಅಪಘಾತದಲ್ಲೂ ಗಾಯಗೊಂಡಿರುವುದು ದುರಂತದ ಸಂಗತಿ.ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

Latest News