ಬೆಂಗಳೂರು,ಫೆ.27- ಸ್ನೇಹಿತರ ಜೊತೆಗೂಡಿ ಕೆಲಸಕ್ಕಿದ್ದ ಕಚೇರಿಯ ಬೀಗ ಮುರಿದು ಹಣ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿ 81.66 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.ಧನಂಜಯ ಮತ್ತು ಪ್ರವೀಣ್‌ನಾಯಕ್ ಬಂಧಿತ ಆರೋಪಿಗಳು.
ಬಿಇಎಲ್ ರಸ್ತೆಯಲ್ಲಿರುವ ಬಿಲ್ಡರ್‌ರಸ ಅಂಡ್ ಮೈನಿಂಗ್ ಕಂಪನಿಯ ಮಾಲೀಕರು ಫೆ.19ರಂದು ಕೆಲಸ ಮುಗಿಸಿಕೊಂಡು ಕಚೇರಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಈ ವೇಳೆ ತಮ ಕೈಚಳಕ ತೋರಿಸಿರುವ ಕಂಪನಿಯ ನೌಕರರಿಬ್ಬರು ಬೀಗ ಮುರಿದು ಹಣ ಕಳವು ಮಾಡಿ ಪರಾರಿಯಾಗಿದ್ದರು. ಬೆಳಗ್ಗೆ ಕಚೇರಿಯ ಬಾಗಿಲು ಮುರಿದಿರುವುದನ್ನು ಗಮನಿಸಿದ ಪಕ್ಕದ ಅಂಗಡಿಯವರ ಬಿಲ್ಡರ್‌ರಸ ಕಂಪನಿಯ ಮಾಲೀಕರಿಗೆ ಸುದ್ದಿ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದು ನೋಡಿದಾಗ ಕಚೇರಿಯ ಡ್ರಾಯರ್‌ನಲ್ಲಿಟ್ಟಿದ್ದ 91.76 ಲಕ್ಷ ನಗದ ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಮಾಲೀಕರು ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರು ಭಾತಿದಾರನಿಂದ ಬಂದ ಖಚಿತ ಮಾಹಿತಿಯನ್ನು ಕಲೆ ಹಾಕಿ ಫೆ.22ರಂದು ಶಿವಮೊಗ್ಗದಲ್ಲಿ ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.
ನಂತರ ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಹೆಚ್ಚಿನ ಹಣ ಮಾಡುವ ಉದ್ದೇಶದಿಂದ ಸ್ನೇಹಿತನೊಂದಿಗೆ ಸೇರಿ ಈ ಕಳ್ಳತನ ಮಾಡಿದ್ದ, ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯು ಸಹ ಇದರಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದ್ದಾನೆ.
ಆರೋಪಿಗಳಿಬ್ಬರನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ ಈ ಪ್ರಕರಣದಲ್ಲಿ ಕಳವು ಮಾಡಿದ್ದ ನಗದನ್ನು ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಆರೋಪಿಯೊಬ್ಬನ ತಂದೆಯ ಬಳಿ ನೀಡಿರುವುದಾಗಿ ತಿಳಿಸಿರುತ್ತಾರೆ. ಈ ಮಾಹಿತಿ ಮೇರೆಗೆ ಶಿವಮೊಗ್ಗದಲ್ಲಿ ವಾಸವಿದ್ದ ಆರೋಪಿಯ ತಂದೆಯ ಬಳಿ ಇದ್ದ 81.66 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.
ಈ ಮಾಹಿತಿ ಮೇರೆಗೆ ಅಂದೇ ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮನೆಗಳ್ಳಿ ಬಂಧನ 35 ಲಕ್ಷ ರೂ. ವೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳ ವಶ
ತಾನು ಕೆಲಸಮಾಡುತ್ತಿದ್ದ ಮನೆಯಲ್ಲಿಯೇ ಬೆಳ್ಳಿ ಸಾಮಗ್ರಿ ,ಚಿನ್ನಾಭರಣವನ್ನು ಕಳವು ಮಾಡಿದ್ದ ಮನೆಕೆೆಲಸದ ಮಹಿಳೆಯನ್ನು ಬಂಧಿಸಿರುವ ಜೆ.ಬಿ.ನಗರ ಠಾಣೆ ಪೊಲೀಸರು 35 ಲಕ್ಷರೂ ಮೌಲ್ಯದ 12.5 ಕೆ.ಜಿ ಬೆಳ್ಳಿಯ ವಸ್ತುಗಳು ಹಾಗೂ 7.5 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಚಲ್ಲಘಟ್ಟದ ಅಪಾರ್ಟ್‌ಮೆಂಟ್‌ವೊಂದರ ನಿವಾಸಿ ಕಳೆೆದ ಜ.28 ರಂದು ಜೆ.ಬಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿ, ದಸರಾ ಹಬ್ಬವಿದ್ದ ಕಾರಣ ಮನೆಯಲ್ಲಿಟ್ಟಿದ್ದ ಬೆಳ್ಳಿಯ ವಸ್ತುಗಳು ಕಳುವಾಗಿದೆ ಎಂದು ತಿಳಸಿ ನಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಕೆಲಸದಾಕೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಜ.30ರಂದು ದಾವಣಗೆರೆಯ. ಚನ್ನಗಿರಿ ತಾಲೂಕು, ಕಣಿವೆ ಬಿಳಚಿ ಗ್ರಾಮದಲ್ಲಿರುವ ವಾಸವಾಗಿದ್ದ ಮನೆಯಿಂದ ಕೆಲಸದಾಕೆಯನ್ನು ವಶಕ್ಕೆ ಪಡೆದಿದ್ದರು. ಆಕೆಯ ವಿಚಾರಣೆ ವೇಳೆ ಬೆಳ್ಳಿಯ ವಸ್ತುಗಳು ಹಾಗೂ ಚಿನ್ನಾಭರಣವನ್ನು ಕಳವು ಮಾಡಿರುವುದಾಗಿ ಗೊತ್ತಾಗಿದೆ.
ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಎರಡುವರೆ ವರ್ಷದ ಅವದಿಯಲ್ಲಿ ಹಂತ ಹಂತವಾಗಿ ಬೆಳ್ಳಿಯ ವಸ್ತುಗಳು ಹಾಗೂ ಚಿನ್ನಾಭರಣವನ್ನು ಕಳವು ಮಾಡಿ ಮುರುಗೇಶ್ ಪಾಳ್ಯದಲ್ಲಿರುವ ಮೂರು ಜ್ಯೂವೆಲರಿ ಅಂಗಡಿಗಳಲ್ಲಿ ಅಡಮಾನವಿಟ್ಟಿರುವುದು ಪತ್ತೆ ಮಾಡಿ ಜ್ಯೂವೆಲರಿ ಅಂಗಡಿಗಳಿಂದ 12.5 ಕೆ.ಜಿ ಬೆಳ್ಳಿಯವಸ್ತುಗಳು ಹಾಗೂ 7.5 ಗ್ರಾಂ ಚಿನ್ನದ ಓಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು ನಗರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ:ವಿಕ್ರಮ್ ಅಮಟೆ ಹಾಗೂ ಹಲಸೂರು ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಂಗಪ್ಪ ಟಿ. ರವರ ಮಾರ್ಗದರ್ಶನದಲ್ಲಿ, ಜೆ.ಬಿ.ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್‌್ಸಪೆಕ್ಟರ್ ಬಸವರಾಜು ಎಂ. ರವರು ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಯವರು ಆರೋಪಿತೆಯನ್ನು ಪತ್ತೆಮಾಡಿ, ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿನ್ನದ ಮಳಿಗೆ ಮಾಲೀಕರಿಗೆ ವಂಚನೆ:ವ್ಯಕ್ತಿ ಸೆರೆ 33.50 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶ
ಬೆಂಗಳೂರು,ಫೆ.27- ಕೆಲಸ ಮಾಡುತ್ತಿದ್ದ ಚಿನ್ನಭರಣ ಮಳಿಗೆ ಮಾಲೀಕರಿಗೆ ವಂಚಿಸಿದ್ದ ವ್ಯಕ್ತಿಯನ್ನು ಬಂಧಿಸಿರುವ ಭಾರತಿನಗರ ಠಾಣೆ ಪೊಲೀಸರು 33.50 ಲಕ್ಷ ರೂ. ಮೌಲ್ಯದ 239 ಗ್ರಾಂ ಚಿನ್ನದ ಆಭರಣಗಳ ವಶಪಡಿಸಿಕೊಂಡಿದ್ದಾರೆ.
ಓ.ಪಿ.ಹೆಚ್ ಜುಮಾ ಮಸೀದಿ ರಸ್ತೆಯಲ್ಲಿರುವ ಜ್ಯೂವೆಲರಿ ಅಂಗಡಿಯ ಮಾಲೀಕರು ಕಳೆದ ಸೆ.23ರಂದು ಈ ಬಗ್ಗೆ ದೂರು ನೀಡಿದ್ದರು. ಜ್ಯೂವೆಲರಿ ಅಂಗಡಿಗೆ ಮಾಲೀಕರು ಮತ್ತೊಂದು ಜ್ಯೂವೆಲರಿ ಅಂಗಡಿಯಿಂದ ಚಿನ್ನಾಭರಣ ತರಲು ಆರೋಪಿಯನ್ನು ಕಳುಹಿಸಿದ್ದರು. ಅದರಂತೆ ಅಲ್ಲಿ 7 ಚಿನ್ನದ ಹಾರಗಳನ್ನು ತೆಗೆದುಕೊಂಡು ಆತನು ಕೆಲಸ ಮಾಡುತ್ತಿದ್ದ ಜ್ಯೂವೆಲರಿ ಅಂಗಡಿಗೆ ಹೋಗದೆ ಪರಾರಿಯಾಗಿದ್ದ.
ಪ್ರಕರಣ ದಾಖಲಿಸಿ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು,ಖಚಿತ ಮಾಹಿತಿ ಅನ್ವಯ ಕಳೆದ ಫೆ.19ರಂದು ಯಶವಂತಪುರ ರೈಲ್ವೆ ನಿಲ್ದಾಣದ ಬಳಿ ಜ್ಯೂವೆಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹೊರ ರಾಜ್ಯದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ಆತನನ್ನು ವಿಚಾರಣೆಗೊಳಪಡಿಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯವೆಸಗಿರುವುದು ಗೊತ್ತಾಗಿದೆ. ಆತನ ವಶದಲ್ಲಿದ್ದ 239 ಗ್ರಾಂನ 7 ಚಿನ್ನದ ಹಾರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ.ವಿಕ್ರಮ್ ಅಮಟೆ, ಹಾಗೂ ಪುಲಕೇಶಿನಗರ ಉಪ ವಿಭಾಗದ ಎಸಿಪಿ ಗೀತಾ. ಸಿ.ಆರ್. ರವರ ಮಾರ್ಗದರ್ಶನದಲ್ಲಿ, ಭಾರತೀನಗರ ಪೊಲೀಸ್ ಠಾಣೆಯ ಪೊಲೀಸ್ ಇನ್‌್ಸ ಪೆಕ್ಟರ್ ಫಿರೋಜ್ ಮಹಮದ್ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಯವರು ಆರೋಪಿಯನ್ನು ಪತ್ತೆ ಮಾಡಿ, ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಕ್ರಮ ಶಸ್ತ್ರಾಸ್ತ್ರ ಜಾಲ ಪತ್ತೆ : ಇಬ್ಬರ ಬಂಧನ
ಅಕ್ರಮ ಶಸಾ್ತ್ರಸ್ತ್ರ ಸರಬರಾಜು ಜಾಲವೊಂದನ್ನು ಪತ್ತೆಹಚ್ಚಿರುವ ಸಿಸಿಬಿ ಪೊಲೀಸರು ಹೊರರಾಜ್ಯದ ವ್ಯಕ್ತಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.ಬಂಧಿತರಿಂದ 0.32 ಎಂಎಂ ಪಿಸ್ತೂಲ್, 50 ಜೀವಂತ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಮಧ್ಯಪ್ರದೇಶದ ಜವೇದ್ ಆಲೆಮ್ (19)ಮತ್ತು ನಗರದ ನಿವಾಸಿ ಸೈಯದ್ ಮಸೂದ್ (26) ಬಂಧಿತ ಆರೋಪಿಗಳು.
ಹೊರರಾಜ್ಯದಿಂದ ಅಕ್ರಮವಾಗಿ ಶಸಾ್ತ್ರಸ್ತ್ರವನ್ನು ನಗರದ ವ್ಯಕ್ತಿಯೊಬ್ಬರು ತರಿಸಿಕೊಳ್ಳುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸಿಸಿಬಿ ಇನ್ಸ್ ಪೆಕ್ಟರ್ ರಕ್ಷಿತ್ ಅವರಿಗೆ ಲಭಿಸಿದೆ. ಕಾರ್ಯಾಚರಣೆ ಕೈಗೊಂಡ ಇನ್ಸ್ ಪೆಕ್ಟರ್ ಮತ್ತು ಅವರ ಸಿಬ್ಬಂದಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ಮಾಡಿದ್ದಾರೆ.
ಯಾವುದೇ ಪರವಾನಗಿ ಇಲ್ಲದೆ ಹೊರರಾಜ್ಯದಿಂದ ಅಕ್ರಮವಾಗಿ ಈ ಶಸಾ್ತ್ರಸ್ತ್ರಗಳನ್ನು ತರಿಸಿಕೊಳ್ಳಲಾಗುತ್ತಿತ್ತು ಎಂಬುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.ಆರೋಪಿ ಸೈಯದ್ ಮಸೂದ್ ಪಿಸ್ತೂಲ್ ಮತ್ತು ಗುಂಡುಗಳನ್ನು ಯಾವ ಉದ್ದೇಶಕ್ಕಾಗಿ ತರಿಸಿಕೊಂಡಿದ್ನೆ ಎಂಬುವುದರ ಬಗ್ಗೆಯೂ ಸಹ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ಬಂಧಿತ ಇಬ್ಬರು ವ್ಯಕ್ತಿಗಳ ಹಿನ್ನೆಲೆ ಬಗ್ಗೆ ಸಿಸಿಬಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ರಿಯಲ್ ಎಸ್ಟೇಟ್ ಏಜೆಂಟ್ ಸೆರೆ 5.5 ಕೆಜಿ ಗಾಂಜಾ ವಶ
ಗಾಂಜಾ ಮಾರಾಟ ಮಾಡುತ್ತಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬನನ್ನು ಬಂಧಿಸಿರುವ ಗೋವಿಂದಪುರ ಠಾಣೆ ಪೊಲೀಸರು 5.5 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅನ್ನಸಂದ್ರ ಪಾಳ್ಯದ ನಿವಾಸಿ, ರಿಯಲ್ ಎಸ್ಟೇಟ್ ಏಜೆಂಟ್ ಮಹಮದ್ ಅಕ್ಬರ್ (20) ಬಂಧಿತ ಆರೋಪಿ. ಆರೋಪಿ ಹೊರರಾಜ್ಯದ ವ್ಯಕ್ತಿಯಿಂದ ಗಾಂಜಾ ತರಿಸಿಕೊಂಡು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ತಕ್ಷಣ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.ಈತನಿಗೆ ಗಾಂಜಾವನ್ನು ನೀಡಿದ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
