Homeರಾಜ್ಯಪಿಡಿಓ ಕಿರುಕುಳದಿಂದ ಮನನೊಂದು ಬಿಲ್‌ಕಲೆಕ್ಟರ್‌ ಆತ್ಮಹತ್ಯೆ

ಪಿಡಿಓ ಕಿರುಕುಳದಿಂದ ಮನನೊಂದು ಬಿಲ್‌ಕಲೆಕ್ಟರ್‌ ಆತ್ಮಹತ್ಯೆ

Bill collector commits suicide due to harassment by PDO

ದಾವಣಗೆರೆ,ಜು.7-ಪಿಡಿಓ ಕಿರುಕುಳದಿಂದ ಮನನೊಂದು ಬಿಲ್‌ಕಲೆಕ್ಟರ್‌ ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಚೋಡು ಗ್ರಾಮದಲ್ಲಿ ನಡೆದಿದೆ.ತಾಲೂಕಿನ ಬಿಳಚೋಡು ಗ್ರಾಮ ಪಂಚಾಯತಿ ಬಿಲ್‌ ಕಲೆಕ್ಟರ್‌ಶಿವಪ್ಪ ವಿಷ ಕುಡಿದು ಆತಹತ್ಯೆಮಾಡಿಕೊಂಡವರು.

ಆತಹತ್ಯೆಗೂ ಮುನ್ನ ಡೆತ್‌ನೋಟ್‌ ಬರೆದಿರುವ ಶಿವಪ್ಪ, ಬಿಳಚೋಡು ಪಿಡಿಒ ನಂದಲಿಂಗೇಶ್ವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಹೆಚ್ಚುವರಿ ಕಂದಾಯ ವಸೂಲಿ ಮಾಡುವಂತೆ ಟಾರ್ಗೆಟ್‌ ನೀಡಿ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಮೃತ ಶಿವಪ್ಪ ಪುತ್ರ ಅಶೋಕ್‌ ಬಿಳಚೋಡು ಪೊಲೀಸ್‌‍ ಠಾಣೆೆಯಲ್ಲಿ ಪಿಡಿಒ ನಂದಲಿಂಗೇಶ್ವರ ವಿರುದ್ಧ ದೂರು ದಾಖಲಿಸಿದ್ದಾರೆ. ಬಿಳಚೋಡು ಗ್ರಾಮ ಪಂಚಾಯತಿಯಲ್ಲಿ 23 ವರ್ಷ ನೀರಗಂಟಿಯಾಗಿದ್ದ ಶಿವಪ್ಪ ಕಳೆದ 2-3 ವರ್ಷಗಳಿಂದ ಬಿಲ್‌ ಕಲೆಕ್ಟರ್‌ ಆಗಿದ್ದರು.

ಕಂಪ್ಯೂಟರ್‌ ಜ್ಞಾನ ಇಲ್ಲದ ಹಿನ್ನೆಲೆ ಪಿಡಿಒ ನಂದಲಿಂಗೇಶ್ವರ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೇ ಜಾತಿ ನಿಂದನೆ ಮಾಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇನ್ನು, ಬಿಲ್‌ಕಲೆಕ್ಟರ್‌ ಕುಟುಂಬಸ್ಥರು ಪಿಡಿಒ ನಂದಲಿಂಗೇಶಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

RELATED ARTICLES

Latest News