Wednesday, April 29, 2026
Homeರಾಜ್ಯಪ್ರಮುಖ ರಾಷ್ಟ್ರಗಳೊಂದಿಗೆ ಕೇಂದ್ರ ಸರ್ಕಾರ ಮಾಡಿಕೊಂಡ ಒಪ್ಪಂದಗಳಿಂದ ರಾಜ್ಯದ ಆರ್ಥಿಕತೆ ಮೇಲೆ ದುಷ್ಪರಿಣಾಮ : ಸಿಎಂ

ಪ್ರಮುಖ ರಾಷ್ಟ್ರಗಳೊಂದಿಗೆ ಕೇಂದ್ರ ಸರ್ಕಾರ ಮಾಡಿಕೊಂಡ ಒಪ್ಪಂದಗಳಿಂದ ರಾಜ್ಯದ ಆರ್ಥಿಕತೆ ಮೇಲೆ ದುಷ್ಪರಿಣಾಮ : ಸಿಎಂ

Central government's agreements with major countries have adverse impact on state's economy

ಬೆಂಗಳೂರು,ಮಾ.6- ಕೇಂದ್ರ ಸರ್ಕಾರವು ಅಮೆರಿಕ ಸೇರಿದಂತೆ ಪ್ರಮುಖ ರಾಷ್ಟ್ರಗಳೊಂದಿಗೆ ಮಾಡಿಕೊಂಡಿರುವ ವಾಣಿಜ್ಯ ಒಪ್ಪಂದದಿಂದ ರಾಜ್ಯದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ತಮ 17ನೇ ಬಜೆಟ್‌ ಮಂಡಿಸಿದ ಅವರು, ಮಾಹಿತಿ ತಂತ್ರಜ್ಞಾನ ಐಟಿ, ಜೈವಿಕ ತಂತ್ರಜ್ಞಾನ, ಏರೋಸ್ಪೇಸ್‌‍, ರಕ್ಷಣಾ ಕ್ಷೇತ್ರದ ಉತ್ಪಾದನೆ, ಸೆಮಿ ಕಂಡಕ್ಟರ್‌ ವಿನ್ಯಾಸ, ಸಾರ್ಟ್‌ ಅಪ್‌ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕರ್ನಾಟಕ ಇತರೆ ರಾಜ್ಯಗಳಿಗಿಂತಲೂ ಸಾಕಷ್ಟು ಮುಂಚೂಣಿಯಲ್ಲಿದೆ.

ಕರ್ನಾಟಕವು ಭಾರತದ ರಫ್ತು ಕ್ಷೇತ್ರ. ವಿದೇಶಿ ನೇರ ಹೂಡಿಕೆಯ ಕ್ಷೇತ್ರಗಳಲ್ಲಿ ಪ್ರಮುಖ ಕೊಡುಗೆಯನ್ನು ನೀಡಿದೆ. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಅಮೆರಿಕ ಸೇರಿದಂತೆ ಮಾಡಿಕೊಂಡ ವಾಣಿಜ್ಯ ಒಪ್ಪಂದದಿಂದ ಕರ್ನಾಟಕದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕದಂತಹ ಮುಂದುವರೆದ ರಾಜ್ಯಗಳಲ್ಲಿ ಜಾಗತಿಕವಾಗಿ ವ್ಯಾಪಾರ ನೀತಿ ರೂಪಿಸುವ ವೇಳೆ ನಮ ಅಹವಾಲುಗಳನ್ನು ಕೇಳಬೇಕಿತ್ತು. ಸಹಕಾರ ಒಕ್ಕೂಟದ ನಿಜಾರ್ಥದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಒಡನಾಟವು ದೇಶದ ವಿದೇಶಿ ವ್ಯವಹಾರಗಳನ್ನು ಬಲಪಡಿಸುತ್ತದೆ ಎಂದರು.
ಪ್ರಾದೇಶಿಕ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ದೇಶದ ಆರ್ಥಿಕ ಅಭಿವೃದ್ಧಿಗೆ ಕರ್ನಾಟಕವು ಸದಾ ಕೊಡುಗೆಗಳನ್ನು ನೀಡುತ್ತದೆ. ಮುಂದಿನ ದಿನಗಳಲ್ಲಿ ಕೇಂದ್ರದೊಂದಿಗೆ ನಮ ಸಹಕಾರ ಮುಂದುವರೆಯಲಿದೆ ಎಂದು ಅಭಯ ನೀಡಿದರು.

RELATED ARTICLES

Latest News