Wednesday, April 29, 2026
Homeರಾಜ್ಯಬಜೆಟ್ ಹೈಲೈಟ್ಸ್ : ದ್ರವೀಕೃತ ನೈಸರ್ಗಿಕ ಅನಿಲದ ಮೇಲಿನ ಮಾರಾಟ ತೆರಿಗೆ ಶೇ.5ಕ್ಕೆ ಕಡಿತ

ಬಜೆಟ್ ಹೈಲೈಟ್ಸ್ : ದ್ರವೀಕೃತ ನೈಸರ್ಗಿಕ ಅನಿಲದ ಮೇಲಿನ ಮಾರಾಟ ತೆರಿಗೆ ಶೇ.5ಕ್ಕೆ ಕಡಿತ

Sales tax on liquefied natural gas reduced to 5%

ಬೆಂಗಳೂರು, ಮಾ.6- ಕೈಗಾರಿಕೆ ಮತ್ತು ಸಾರಿಗೆ ವಲಯಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪರಿಸರ ಸ್ನೇಹಿ ದ್ರವೀಕೃತ ನೈಸರ್ಗಿಕ ಅನಿಲದ ಮೇಲಿನ ಕರ್ನಾಟಕದ ಮಾರಾಟ ತೆರಿಗೆಯನ್ನು ಶೇ.5ಕ್ಕೆ ಕಡಿತಗೊಳಿಸಿರುವುದಾಗಿ ಮುಖ್ಯಮಂತ್ರಿಯ ಸಿದ್ದರಾಮಯ್ಯ ತಿಳಿಸಿದ್ದಾರೆ.

2026-27ನೇ ಸಾಲಿನ ಬಜೆಟ್‌ನಲ್ಲಿ ಎಲ್‌ಎನ್‌ಜಿ ತೆರಿಗೆ ಕಡಿತವನ್ನು ಪ್ರಸ್ತಾಪಿಸಿದ್ದು, ಶೇ.14.34ರಷ್ಟು ಇದ್ದ ತೆರಿಗೆಯನ್ನು ತಿಳಿಸಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಗೆ 2026-27ನೇ ಸಾಲಿಗೆ 1.25 ಲಕ್ಷ ಕೋಟಿಗಳ ತೆರಿಗೆ ಸಂಗ್ರಹದ ಗುರಿಯನ್ನು ನೀಡಲಾಗಿದೆ. ಕಳೆದ ವರ್ಷ ಫೆಬ್ರವರಿವರಿಗೆ 74,160 ಕೋಟಿ ರೂ.ಗಳು ಸಂಗ್ರಹವಾಗಲಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ. 5.8ರಷ್ಟು ಹೆಚ್ಚಳವಾಗಿದೆ. ಮಾರಾಟ ಹಾಗೂ ವೃತ್ತಿ ತೆರಿಗೆಯನ್ನು ಒಳಗೊಂಡು ವಾಣಿಜ್ಯ ತೆರಿಗೆ ಇಲಾಖೆಯಿಂದ 2026 ಫೆಬ್ರವರಿ ಒಳಗೆ 1,462 ಕೋಟಿ ರೂ.ಗಳ ಆದಾಯ ಸಂಗ್ರಹವಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ. 8.1ರಷ್ಟು ಹೆಚ್ಚಳ ಎಂದು ತಿಳಿಸಿದ್ದಾರೆ.

ಕರ್ನಾಟಕ ವೃತ್ತಿಗಳ ಕಸುಬುಗಳ ಅಜೀವಿಕೆಗಳ ಮತ್ತು ಉದ್ಯೋಗದ ಮೇಲಿನ ತೆರಿಗೆ ಅಧಿನಿಯಮನಯಮ 1976ರ ಅಡಿಯಲ್ಲಿ ತೆರಿಗೆ ದಾಯಕ ವ್ಯಕ್ತಿಯು ವರ್ಷಕ್ಕೆ ಪಾವತಿಸಬೇಕಾದ ಸಂಪೂರ್ಣ ತೆರಿಗೆಯನ್ನು ಸಲ್ಲಿಸಿದ ಸಂದರ್ಭದಲ್ಲಿ ಆ ವರ್ಷಕ್ಕೆ ಸಂಬಂಧಿಸಿದ ವಿವರ ಪಟ್ಟಿಗೆ ಸಲ್ಲಿಸುವ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ತಿದ್ದುಪಡಿ ತರುವುದಾಗಿ ತಿಳಿಸಿದ್ದಾರೆ. ಇದಲ್ಲದೆ ಅತಿ ತೆರಿಗೆಯಿಂದ ವಿನಾಯಿತಿ ಹೊಂದಿರುವ ವ್ಯಕ್ತಿಗಳಿಗೆ ಕೂಡ ಇವರ ಪಟ್ಟಿಗೆ ಸಲ್ಲಿಸುವ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಅಭಿನಯದಲ್ಲಿ ಅಗತ್ಯ ತಿದ್ದುಪಡಿ ತರುವುದಾಗಿ ತಿಳಿಸಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಗ್ರೂಪ್‌ ಎ ವೃಂದದ ಅಧಿಕಾರಿಗಳಿಗೆ ದೇಶದಲ್ಲಿ ಮೊದಲ ಬಾರಿಗೆ ರಚನಾತಕ ವಸ್ತುನಿಷ್ಠ ಪಾರದರ್ಶಕವಾದ ಕಾರ್ಯಕ್ಷಮತೆ ಆಧಾರದ ಮೇಲೆ ಮೌಲ್ಯಮಾಪನ ವ್ಯವಸ್ಥೆಯನ್ನು ನಿರ್ದಿಷ್ಟ ಮಾನದಂಡಗಳ ಆಧಾರದ ಮೇಲೆ ಕೈಗೊಳ್ಳಲಾಗುವುದು.
ಈ ನೀತಿಯನ್ನು ಆಧರಿಸಿ ಇಲಾಖೆಯ ಜಂಟಿ ಆಯುಕ್ತರವರೆಗಿನ ಅಧಿಕಾರಿಗಳ ವರ್ಗಾವಣೆಯಲ್ಲಿ ಕೌನ್ಸಿಲಿಂಗ್‌ ಮೂಲಕವೇ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES

Latest News